fbpx
ಸಮಾಚಾರ

ರವಿಚಂದ್ರನ್, ಸುದೀಪ್, ದರ್ಶನ್, ಯಶ್ ಹಾದಿಯಲ್ಲಿ ನಡೆದ ಗಣೇಶ್.

ದರ್ಶನ್, ಸುದೀಪ್, ಯಶ್, ರವಿಚಂದ್ರನ್ ಈ ಬಾರಿ ಬರ್ತಡೇ ಆಚರಿಸಿಕೊಳ್ಳದೇ ಗಮನ ಸೆಳೆದಿದ್ದರು. ಈಗ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಅವರ ಸಾಲಿಗೆ ಸೇರಿದ್ದಾರೆ. ಈ ಬಾರಿ ಗಣೇಶ್ ಕೂಡಾ ಹುಟ್ಟುಹಬ್ಬ ಆಚರಿಸದಿರಲು ನಿರ್ಧರಿಸಿದ್ದಾರೆ. ಪ್ರತಿ ವರ್ಷ ಜುಲೈ 2ರಂದು ಜನ್ಮದಿನದ ಸಂಭ್ರಮದಲ್ಲಿರುತ್ತಿದ್ದ ಗಣೇಶ್ ಗೆ ಈ ಸಲ ಏನಾಗಿದೆ ಅಂತೀರಾ? ಈ ಪ್ರಶ್ನೆಗೆ ಸ್ವತಃ ಗಣೇಶ್ ಅವರೇ ಟ್ವಿಟರ್ ಮೂಲಕ ಉತ್ತರ ಕೊಟ್ಟಿದ್ದಾರೆ.

 

 

ಗಣೇಶ್​ ಅವರಿಗೆ ಜೀವನ ಸ್ಪೂರ್ತಿ ಕಲಿಸಿದ್ದ ಅವರ ತಂದೆ ಅವರನ್ನು ಅಗಲಿದ್ದಾರೆ. ಇದೇ ಹಿನ್ನೆಲೆಯಲ್ಲಿ ಅವರು ಈ ಬಾರಿ ತಮ್ಮ ಹುಟ್ಟು ಹಬ್ಬ ಆಚರಣೆ ಮಾಡದಿರಲು ನಿರ್ಧರಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ಅವರು, ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ತಂದೆ ಅಗಲಿಕೆ ಹಿನ್ನೆಲೆ ಈ ನಿರ್ಣಯ ಕೈಗೊಂಡಿದ್ದು, ತಮ್ಮ ಅಭಿಮಾನಿಗಳಿಗೆ ಬೇಸರಗೊಳ್ಳದಂತೆ ಕೇಳಿ ಕೊಂಡಿದ್ದಾರೆ.

ನನ್ನ ಪ್ರೀತಿಯ ಅಚ್ಚುಮೆಚ್ಚಿನ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರಲ್ಲಿ ವಿನಂತಿ. ಕೆಲ ದಿನಗಳ ಹಿಂದಷ್ಟೆ ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ಅಲ್ಲದೆ ಜನ್ಮದಿನದ ಸಂದರ್ಭದಲ್ಲಿ ನಾವ್ಯಾರೂ ಮನೆಯಲ್ಲಿ ಇರುವುದಿಲ್ಲ. ಹೀಗಾಗಿ ದೂರದೂರಿನಿಂದ ಬಂದು ನನಗಾಗಿ ಕಾಯಬೇಡಿ. ಹಾರ, ಕೇಕ್, ಬ್ಯಾನರ್ ಗಳಿಗಾಗಿ ಖರ್ಚು ಮಾಡದೆ, ಅದೇ ಹಣವನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ನೀಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.

“ಪ್ರತಿ ವರ್ಷ ಸಿದ್ಧತೆಗಳೊಂದಿಗೆ ಬಂದು ಶುಭ ಕೋರಿ ಹಾರೈಸುತ್ತಿದ್ದ ಅಭಿಮಾನಿಗಳಿಗೆ ಸದಾ ಋಣಿ. ನನ್ನ ಕೋರಿಕೆಯನ್ನು ಅರ್ಥ ಮಾಡಿಕೊಂಡು, ಗಂಭೀರವಾಗಿ ಪರಿಗಣಿಸುವಿರಿ ಎಂಬ ವಿಶ್ವಾಸವಿದೆ. ದಯಮಾಡಿ ಸಹಕರಿಸಿ. ನಿಮ್ಮ ಪ್ರೀತಿ ಸದಾ ನನ್ನ ಮೇಲಿರಲಿ” ಎಂದು ಗಣೇಶ್ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top