fbpx
ಸಮಾಚಾರ

ಪ್ರದಕ್ಷಿಣೆಯನ್ನು ಏಕೆ ಮಾಡುತ್ತಾರೆ ?

ಪ್ರದಕ್ಷಿಣೆ ಎಂದರೇನು ?

ಪ್ರದಕ್ಷಿಣಾ ಎಂದರೆ ದೇವರ ಸುತ್ತ ವೃತ್ತಾಕಾರವಾಗಿ ಭಕ್ತಿಯಿಂದ ಸುತ್ತುವುದಾಗಿದೆ ಇದು ಷೋಡಶೋಪಚಾರಗಳ ಹದಿನಾರು ಭಾಗಗಳಲ್ಲಿ ಒಂದು.

ಪ್ರಗತಂದಕ್ಷಿಣಮತಿಹ್

ದೇವತೆಯ ಬಲ ಬದಿಯಿಂದ ಭಕ್ತಿಯಿಂದ ಸಂಚರಿಸುವ ಕ್ರಿಯೆಗೆ ಪ್ರದಕ್ಷಿಣಾ ಎಂದು ಕರೆಯಲಾಗುತ್ತದೆ.

ಪ್ರದಕ್ಷಿಣೆ ಹೇಗೆ ಮಾಡಬೇಕು ?

ಕಾಳಿಕಾ ಪುರಾಣದಲ್ಲಿ ಪ್ರದಕ್ಷಿಣೆಯಾ ಬಗ್ಗೆ ಹೀಗೆ ಹೇಳುತ್ತಾರೆ

ಪ್ರಸಾರ್ಯ ದಕ್ಷಿಣಂಹಸ್ತಾಂ ಸ್ವಯಂನಮ್ರಶಿರಃಪುನಃ

ದಕ್ಷಿಣಂ ದರ್ಶಯಂಪಾರ್ಶ್ವಮನಸ್ಯಾಪಿ ಚಾ ದಕ್ಷಿಣಃ

ತಲೆಯ ಬಾಗಿಸಿ , ಬಲಗೈ ಮುಂದಕ್ಕೆ ಚಾಚಿ , ದೇಹದ ಬಲಭಾಗದಿಂದ ಏಕಚಿತ್ತ ಮನಸಿನಿಂದ ಪ್ರದಕ್ಷಿಣೆ ಮಾಡಬೇಕು.

ಪ್ರದಕ್ಷಿಣೆ ಎಷ್ಟು ಬಾರಿ ಮಾಡಬೇಕು ?

ವಿವಿಧ ದೇವತೆಗಳಿಗೆ ಪ್ರದಕ್ಷಿಣಾ ಸಂಖ್ಯೆಗಳು:

ಧರ್ಮಗ್ರಂಥಗಳಲ್ಲಿ ವಿವಿಧ ದೇವತೆಗಳಿಗೆ ಎಷ್ಟು ಪ್ರದಕ್ಷಿಣಾ ನೀಡಬೇಕು ಎಂದು ಉಲ್ಲೇಖಿಸಲಾಗಿದೆ

ಏಕಂ ದೇವ್ಯಮ್ರವೌಸಪ್ತತ್ರಿಣಿಕುರ್ಯಾದ್ ವಿನಾಯಕ್

ಚತ್ವಾರಿ ಕೇಶವೇಕುರ್ಯಾನ್ತ ಶಿವೆಚರ್ದ ಪ್ರದಕ್ಷಿಣಂ

ಶಕ್ತಿ ದೇವತೆಗಳಿಗೆ ಒಂದು ಪ್ರದಕ್ಷಿಣೆ ಹಾಕಬೇಕು
ಸೂರ್ಯನಿಗೆ ಏಳು , ಗಣೇಶನಿಗೆ ಮೂರು , ಕೃಷ್ಣನಿಗೆ ನಾಲ್ಕು , ಶಿವನಿಗೆ ಅರ್ಧ , ಶಿವನಿಗೆ ಅರ್ಧ ಪ್ರದಕ್ಷಿಣೆ ಹಾಕಬೇಕು ಏಕೆಂದರೆ ಶಿವಲಿಂಗದ ನೀರು ಹರಿಯುವ ಸ್ಥಳವನ್ನು ದಾಟಬಾರದು ಇದನ್ನು ಸೋಮಸೂತ್ರಿ ಪ್ರದಕ್ಷಿಣಾ ಎಂದು ಕರೆಯುತ್ತಾರೆ.

 

ಪ್ರದಕ್ಷಿಣೆಯ ಮಹತ್ವ :

ಪ್ರದಕ್ಷಿಣೆಯ ಪ್ರಾಮುಖ್ಯತೆ ವರಾಹ ಪುರಾಣದಲ್ಲಿ ಈ ರೀತಿ ಹೇಳಲಾಗಿದೆ

ಪ್ರದಕ್ಷಿಣಾ ಯೇ ಕುರ್ವನ್ತಿಭಕ್ತಿಯುಕ್ತೇನಚೇತಸನತೆ

ಯಮಪುರಮಯಂತಿಯಂತಿ ಪುಣ್ಯಕೃತ ಗತಿಂ

 

ಪ್ರದಕ್ಷಿಣೆ ಮಾಡಿದರೆ ನಾವು ಮಾಡಿರುವ ಎಲ್ಲ ಪಾಪಗಳು ಪರಿಹಾರವಾಗಿ ಯಮನ ಬಳಿ ಹೋಗುವುದಿಲ್ಲ ಎಂದು ಹೇಳಲಾಗುತ್ತದೆ, ಇಂತವರಿಗೆ ಪುಣ್ಯ ದೊರೆಯುತ್ತದೆ ಎಂದು ಹೇಳಲಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top