fbpx
ಸಮಾಚಾರ

“ಟೀಂ ಇಂಡಿಯಾಗೆ ಹೇಗೆ ಬೌಲಿಂಗ್ ಮಾಡಬೇಕೆಂದು ಗೊತ್ತು” ಬಾಂಗ್ಲಾ ಕೋಚ್ ಸುನಿಲ್ ಜೋಶಿ ಎಚ್ಚರಿಕೆ.

ಸದ್ಯ ಬಾಂಗ್ಲಾದೇಶ ಕ್ರಿಕೆಟ್ ತಂಡದ ಸ್ಪಿನ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸ್ಪಿನ್ ಮಾಂತ್ರಿಕ ಕನ್ನಡಿಗ ಸುನಿಲ್ ಜೋಶಿ ಟೀಂ ಇಂಡಿಯಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಹಾಗಾಗಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಭಾರತದ ಬ್ಯಾಂಟಿಂಗ್ ಸಿಕ್ರೇಟ್ ಲೀಕ್ ಆಗಲಿದೆಯೇ ಎಂಬ ಆತಂಕ ಕಾಡುತ್ತಿದೆ.

ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ಯಶಸ್ಸಿನ ಹಿಂದೆ ಸುನಿಲ್ ಜೋಶಿ ಮಾರ್ಗದರ್ಶನವಿದೆ. ಟೀಂ ಇಂಡಿಯಾ ವೀಕ್ನೆಸ್ ಚೆನ್ನಾಗಿ ಅರಿತಿರುವ ಸುನಿಲ್ ಜೋಶಿ ಇದೀಗ, ಭಾರತಕ್ಕೆ ಹೇಗೆ ಬೌಲಿಂಗ್ ಮಾಡಬೇಕು ಅನ್ನೋದು ಗೊತ್ತಿದೆ ಎಂದಿದ್ದಾರೆ. ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ನಿಕಟವಾಗಿ ವೀಕ್ಷಿಸಿರುವ ಜೋಶಿ, ಹೇಗೆ ಎಲ್ಲಿ ಬೌಲಿಂಗ್ ಮಾಡಬೇಕಿದೆ ಎಂಬುದು ಚೆನ್ನಾಗಿ ತಿಳಿದಿದೆ ಎನ್ನುವ ಮೂಲಕ ಟೀಂ ಇಂಡಿಯಾಗೆ ಸೈಲೆಂಟ್ ಆಗಿ ವಾರ್ನಿಂಗ್ ನೀಡಿದ್ದಾರೆ.

ಭಾರತದ ಬ್ಯಾಟಿಂಗ್ ಲೈನ್ ಹಾಗೂ ಬ್ಯಾಟ್ಸ್‌ಮನ್‌ಗಳ ವೀಕ್ನೆಸ್ ಜೋಶಿಗೆ ಚೆನ್ನಾಗಿ ತಿಳಿದಿದೆ. ಮ್ಯಾಂಚೆಸ್ಟರ್ ಸ್ಲೋ ವಿಕೆಟ್‌ನಲ್ಲಿ ಭಾರತವನ್ನು ಕಟ್ಟಿಹಾಕಲು ಜೋಶಿ ಇದೀಗ ಮಾಸ್ಟರ್ ಪ್ಲಾನ್ ಹಾಕಿಕೊಂಡಿದ್ದಾರೆ. ಇನ್ನು ಭಾರತೀಯ ಬ್ಯಾಟ್ಸ್‌ಮನ್‌ಗಳು ಸ್ಪಿನ್ ದಾಳಿಗೆ ಚೆನ್ನಾಗಿ ಆಡುತ್ತಾರೆ. ಆದರೂ ಭಾರತದ ವಿರುದ್ಧ ರಣತಂತ್ರ ರೂಪಿಸುವುದರಲ್ಲಿ ಮಗ್ನವಾಗಿದ್ದಾರೆ.. ಅಂದಹಾಗೆ ಬಾಂಗ್ಲಾದೇಶ ಮತ್ತು ಟೀಂ ಇಂಡಿಯಾ ನಡುವಿನ ಪಂದ್ಯ ಜುಲೈ 2ರಂದು ಮ್ಯಾಂಚೆಸ್ಟರ್ ನಲ್ಲಿ ನಡೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top