fbpx
ಸಮಾಚಾರ

ಮೋದಿಯನ್ನು ಹೊಗಳುವ ಭರದಲ್ಲಿ ಕರ್ನಾಟಕವನ್ನು ಕೆಟ್ಟದಾಗಿ ಬಿಂಬಿಸಿದ ತೇಜಸ್ವಿ?

ದೇಶ ಪ್ರಧಾನಿ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಕಾಣುತ್ತಿದ್ದರೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ಮಾತ್ರ ಅತ್ಯಂತ ಭ್ರಷ್ಟ, ನಿರಾಸಕ್ತಿಯುತ ಸರ್ಕಾರದಿಂದ ಕುಸಿಯುತ್ತಿದೆ ಎಂದು ನೂತನ ಸಂಸದ ತೇಜಸ್ವಿ ಸೂರ್ಯ ಲೋಕಸಭೆ ಸದನದಲ್ಲಿ ರಾಜ್ಯದ ಮೈತ್ರಿ ಸರ್ಕಾರವನ್ನು ಜರಿದಿದ್ದಾರೆ.

ನಿನ್ನೆ ಅಧಿವೇಶನದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ದೇಶ ಪ್ರಗತಿಯತ್ತ ಮುನ್ನುಗುತ್ತಿದ್ದರೆ, ಕರ್ನಾಟಕ ಮಾತ್ರ ಹಿಂದುಳಿಯುತ್ತಿದೆ. ನನ್ನ ರಾಜ್ಯ ಅಭಿವೃದ್ಧಿ ಕಾಣಬೇಕು ಎಂಬುದು ನನ್ನ ಇಚ್ಛೆ. ಸಮರ್ಥ ನಾಯಕತ್ವದ ಅಡಿಯಲ್ಲಿ ದೇಶ ಮುನ್ನಡೆಯುತ್ತಿದ್ದರೂ ಭ್ರಷ್ಟಾಚಾರ ಹಾಗೂ ಅರಾಜಕತೆಯಿಂದ ರೋಸಿ ಹೋಗಿರುವ ಕನ್ನಡಿಗರು, ಇಲ್ಲಿನ ಯುವ ಜನರು ಹೊಸ ಸರ್ಕಾರದ ನಿರೀಕ್ಷೆಯಲ್ಲಿದ್ದಾರೇ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ರಾಜಕೀಯದಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಹೋಗಿ ಕರ್ನಾಟಕವನ್ನು ಹೀಯಾಳಿಸಿರುವ ತೇಜಸ್ವಿ ಸೂರ್ಯ ಹೇಳಿಕೆಗೆ ಖಂಡನೆ ವ್ಯಕ್ತವಾಗುತ್ತಿದೆ. ಏಕೆಂದರೆ ಕರ್ನಾಟಕ ಭಾರತ ದೇಶದ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ರಾಜ್ಯ. ಇಡೀ ದೇಶದಲ್ಲಿಯೇ ಕರ್ನಾಟಕ ಮಾದರಿ ರಾಜ್ಯವಾಗಿದ್ದು, ತಲಾದಾಯದಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ಆರ್ಥಿಕ ಪ್ರಗತಿ, ಹಣದುಬ್ಬರ ಹಾಗೂ ವಿತ್ತೀಯ ಕೊರತೆ ನಿರ್ವಹಣೆ ವಿಚಾರದಲ್ಲಿ ಕರ್ನಾಟಕ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟುಸುಧಾರಣೆ ಕಂಡಿದ್ದು, ದೇಶದಲ್ಲೇ ನಂ.2 ಸ್ಥಾನಕ್ಕೇರಿದೆ ಎಂದು ರೇಟಿಂಗ್‌ ಏಜೆನ್ಸಿಯಾಗಿರುವ ಕ್ರಿಸಿಲ್‌ ತನ್ನ ವರದಿಯಲ್ಲಿ ತಿಳಿಸಿತ್ತು. 2016- 2017ನೇ ಹಣಕಾಸು ವರ್ಷದಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿತ್ತು. ಅದು 2017-18ನೇ ಸಾಲಿನಲ್ಲಿ ಎರಡನೇ ಸ್ಥಾನಕ್ಕೆ ಏರಿಕೆಯಾಗಿದೆ.

ದೇಶದ ಸರಾಸರಿ ಜಿಡಿಪಿ ಶೇ.6.7ರಷ್ಟಿದ್ದರೂ, ಬಿಹಾರ ಶೇ.11.3ರ ದರದಲ್ಲಿ ಪ್ರಗತಿ ಹೊಂದುತ್ತಿದೆ. ಶೇ.11.2ರ ಜಿಡಿಪಿ ದರದೊಂದಿಗೆ ಆಂಧ್ರ 2ನೇ ಸ್ಥಾನದಲ್ಲಿದ್ದರೆ, ಶೇ.11.1ರ ದರದೊಂದಿಗೆ ಗುಜರಾತ್‌ 3ನೇ ಸ್ಥಾನದಲ್ಲಿದೆ. ಶೇ.9.3 ಜಿಡಿಪಿ ದರ ಸಾಧಿಸಿ ಕರ್ನಾಟಕ 5ನೇ ಸ್ಥಾನ ಗಳಿಸಿದೆ.

ದೇಶದ ಆರ್ಥಿಕತೆಯಲ್ಲಿ ಕರ್ನಾಟಕದ್ದೇ ಸಿಂಹಪಾಲು ಇದೆ. ಹೂಡಿಕೆ ಆಕರ್ಷಣೆಯಲ್ಲಿ ಕರ್ನಾಟಕ ನಂಬರ್‌ ಒನ್‌, ಕಳೆದ ಜನವರಿಯಿಂದ ಸೆಪ್ಟೆಂಬರ್‌ ವರೆಗೆ 1,47,625 ಕೋಟಿ ರೂ. ಹೂಡಿಕೆ ಪ್ರಸ್ತಾವನೆ ಸ್ವೀಕರಿಸಲಾಗಿದೆ. ಇದು ದೇಶದಲ್ಲಿಯೇ ಅತ್ಯಧಿಕ. ಹಾಗಾಗಿ ಕರ್ನಾಟಕವನ್ನು ಜರಿದ ತೇಜಸ್ವಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top