fbpx
ಸಮಾಚಾರ

ಸಿಹಿ ಸುದ್ದಿ ನೀಡಿದ ರಾಧಿಕಾ-ಎರಡನೇ ಮಗುವಿನ ತಂದೆಯಾಗ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್.

ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಸಿಹಿ ಸುದ್ದಿಯನ್ನು ಟ್ವೀಟ್ ಮಾಡಿದ್ದು ಪತ್ನಿ ರಾಧಿಕಾ ಪಂಡಿತ್ ಅಮ್ಮನಾಗುತ್ತಿದ್ದಾಳೆ ಎಂಬ ಸಿಹಿ ಸುದ್ದಿಯನ್ನು ವಿಡಿಯೊವೊಂದರ ಮೂಲಕ ಯಶ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.

 

 

 

ಯಶ್ ಈಗ ಎರಡನೇ ಮಗುವಿಗೆ ತಂದೆಯಾಗುತ್ತಿದ್ದಾರೆ. ರಾಧಿಕಾ ಪಂಡಿತ್ ಅವರು 4 ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಸ್ವತಃ ಯಶ್ ಅವರೇ ತಮ್ಮ ಮಗಳ ವಿಡಿಯೋ ಮೂಲಕ ಈ ಖುಷಿಯನ್ನು ಹಂಚಿಕೊಂಡಿದ್ದಾರೆ. ಇದೇ 23ರಂದು ಯಶ್ ದಂಪತಿ ತಮ್ಮ ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದಾರೆ. ಇದರ ಬೆನ್ನಲ್ಲೇ ಈಗ ತಮ್ಮ ಎರಡನೇ ಮಗುವಿನ ಆಗಮನದ ಬಗ್ಗೆ ಯಶ್ ಅವರು ಎಲ್ಲರಿಗೂ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.

ರಾಕಿಂಗ್​ ದಂಪತಿ ರಾಕಿಂಗ್​ ರೀತಿಯಲ್ಲೇ ತಮ್ಮ ಎರಡನೇ ಮಗುವಿನ ವಿಷಯವನ್ನು ವಿಶೇಷವಾದ ವಿಡಿಯೋ ಮೂಲಕ ತಿಳಿಸಿದ್ದಾರೆ. ಮಗಳು ಆಯ್ರಾ ಇನ್ನು ಮುಂದೆ ತನ್ನ ಎಲ್ಲಾ ಆಟಿಕೆಗಳನ್ನು ಹಂಚಿಕೊಳ್ಳಬೇಕಾಗುತ್ತೆ… ಅದಕ್ಕೆ ತಾನೂ ರೆಡಿ ಎಂದಿರುವ ರಾಕಿಂಗ್​ ಕೂಸು… ಏನೇ ಇರಲಿ ಸ್ವ್ಯಾಗ್​ ಸೆ ಕರೆಂಗೆ ವುಸ್ಕಾ ಸ್ವಾಗತ್​ ಎಂದು ಆಯ್ರಾ ಈ ವಿಡಿಯೋದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top