fbpx
ಸಮಾಚಾರ

ಕಳೆದುಹೋಗಿರುವ ಮಂಡ್ಯ ಶಾಸಕರನ್ನು ಹುಡುಕಿಕೊಟ್ಟವರಿಗೆ ಆಕರ್ಷಕ ಬಹುಮಾನ.

ಜಿಲ್ಲೆಯ ಏಳು ಜನ ಶಾಸಕರು ಕಾಣೆ ಆಗಿದ್ದಾರೆ, ಅವರನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂಬ ಬ್ಯಾನರ್ ಗಳನ್ನು ಮಂಡ್ಯದಲ್ಲಿ ಹಾಕಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ,.. ಒಣಗುತ್ತಿರುವ ಕಬ್ಬಿನ ಬೆಳೆಗೆ ಕೆ.ಆರ್.ಎಸ್ ನಿಂದ ನೀರು ಹರಿಸುವಂತೆ ಆಗ್ರಹಿಸಿ ರೈತರು ಆಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ಆದರೆ ರೈತರ ದಾರನಿಗೆ ಯಾವೊಬ್ಬ ಶಾಸಕರು ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಆಕ್ರೋಶಗೊಂಡಿರುವ ರೈತರು ಈ ರೀತಿ ಬ್ಯಾನರ್ ಹಾಕಿಸುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಬ್ಯಾನರ್ ನಲ್ಲಿ ಇರುವುದೇನು?
“ಮಂಡ್ಯ ಜಿಲ್ಲೆಯಲ್ಲಿ ಬೆಳೆದುನಿಂತಿರುವ 60 ಲಕ್ಷ ಟನ್ ಕಬ್ಬಿಣ ಬೆಳೆ ನೀರಿಲ್ಲದೆ ಒಣಗುತ್ತಿದ್ದು ಕೆ.ಆರ್.ಎಸ್ ತಕ್ಷಣ ನೀರು ಹರಿಸಿ ಒಣಗುತ್ತಿರುವ ಕಬ್ಬಿನ ಬೆಳೆಯನ್ನು ರಕ್ಷಣೆ ಮಾಡಬೇಕೆಂದು ಕಳೆದ ಆರು ದಿನಗಳಿಂದ ಆಹೋ ರಾತ್ರಿ ಧರಣಿ ಕುಳಿತಿರುವ ರೈತರ ಸಮಸ್ಯೆ ಆಲಿಸದೆ ಬೇಜವಾಬ್ದಾರಿ ಉಸ್ತುವಾರಿ ಮಂತ್ರಿಗಳು ಮತ್ತು ಜಿಲ್ಲೆಯ ಇತರ ಆರು ಶಾಸಕರು ಪರಾರಿಯಾಗಿದ್ದು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲವುದು” ಎಂದು ಪ್ಲೆಕ್ಸ್ ನಲ್ಲಿ ಬರೆಯಲಾಗಿದೆ

ರೈತರು ಹಾಕಿರುವ ಬ್ಯಾನರ್ ನಲ್ಲಿ ಮಂಡ್ಯ ಜಿಲ್ಲೆಯ ಶಾಸಕರುಗಳಾದ ಎಂ.ಶ್ರೀನಿವಾಸ್, ತಮ್ಮಣ್ಣ, ಕೆ.ಅನ್ನದಾನಿ, ರವೀಂದ್ರ ಶ್ರೀಕಂಠ, ಸುರೇಶ್ ಗೌಡ, ನಾರಾಯಣಗೌಡ, ಸಿಎಸ್ ಪುಟ್ಟರಾಜು ಅವರುಗಳ ಫೋಟೋಗಳಿವೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top