fbpx
ಸಮಾಚಾರ

ಸಂಸತ್ತಲ್ಲಿ ಕರ್ನಾಟಕ ಪ್ರತ್ಯೇಕ ನಾಡಧ್ವಜ ಪ್ರಸ್ತಾಪ- ಕನ್ನಡಿಗರ ಪ್ರಶಂಸೆಗೆ ಪಾತ್ರರಾದ ಸಂಸದ ಜಿಸಿ ಚಂದ್ರಶೇಖರ್

ತಾವು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಕ್ಷಣದಿಂದಲೂ ಒಂದರ ಹಿಂದೊಂದು ಕನ್ನಡ ಮತ್ತು ಕರ್ನಾಟಕ ಪರ ಕೆಲಸಗಳನ್ನು ಕೈಗೊಳ್ಳುತ್ತಿರುವ ಸಂಸದ ಜಿಸಿ ಚಂದ್ರಶೇಖರ್ ಅವರು ಮತ್ತೊಮ್ಮೆ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕರ್ನಾಟಕಕ್ಕೆ ಅಧಿಕೃತ ಭಾವುಟಕ್ಕಾಗಿ ದೆಹಲಿಯ ಸಂಸತ್ ಭವನದಲ್ಲಿ ಧ್ವನಿಯೆತ್ತಿದ್ದಾರೆ.

 

 

 

 

ಇಂದಿನ ಸಂಸತ್ ಅಧಿವೇಶನದಲ್ಲಿ ಕರ್ನಾಟಕದ ನಾಡಧ್ವಜ ವಿಚಾರವನ್ನು ಪ್ರಸ್ತಾಪಿಸಿದ ಜಿಸಿಸಿ ಈ ವಿಷಯದ ಬಗ್ಗೆ ಗಮನಹರಿಸಬೇಕೆಂದು ಸಭಾಪತಿಗಳಲ್ಲಿ ಮನವಿ ಮಾಡಿದರು. “ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿರುವ ಶಿಫಾರಸ್ಸು ಒಂದು ಹಾಗೆಯೇ ಉಳಿದುಕೊಂಡಿದೆ. 2018ರ ಮಾರ್ಚ್ ನಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕಕ್ಕೆ ಪ್ರತ್ಯೇಕ ಅಧಿಕೃತ ನಾಡಧ್ವಜವನ್ನು ಹೊಂದಲು ಅವಕಾಶ ಕೋರಿ ಶಿಫಾರಸ್ಸು ಮಾಡಲಾಗಿತ್ತು.. ಒಂದು ವರ್ಷಕ್ಕಿಂತ ಹೆಚ್ಚು ಸಮಯವಾದರೂ ಇದಕ್ಕೆ ಕೇಂದ್ರದಿಂದ ಇನ್ನೂ ಉತ್ತರ ಬಂದಿಲ್ಲ. ದಯಮಾಡಿ ಈ ಕಡೆ ಗಮನಹರಿಸಬೇಕೆಂದು ಮನವಿ ಮಾಡುತ್ತೇನೆ” ಎಂದು ಜಿಸಿಸಿ ಸಂಸತ್ ನಲ್ಲಿ ಮನವಿ ಮಾಡಿದರು.

ಇನ್ನು ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೂಡ ತಿಳಿಸಿರುವ ಚಂದ್ರಶೇಖರ್ “ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ, ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುತ್ತಾ ಕನ್ನಡಿಗರ ಅಸ್ಮಿತೆ, ನೆಲಜಲ,ಸಂಸ್ಕೃತಿಯನ್ನು ಎತ್ತಿ ಹಿಡಿಯಲು ನಮ್ಮದೇ ರಾಜ್ಯ ಧ್ವಜ ಅದಕ್ಕೆಂದೇ ಅಧಿಕೃತ ವಿಶಿಷ್ಟ ಸ್ಥಾನ, ಸಿಗಬೇಕೆಂದು ಪ್ರತಿ ಸ್ವಾಭಿಮಾನಿ ಕನ್ನಡಿಗನ ಆಶಯ ಇದೆ ವಿಷಯವನ್ನು ನಾನು ಇಂದು ಸಂಸತ್ ನಲ್ಲಿ ನಿಮ್ಮ ಪರ ಧ್ವನಿ ಎತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಸ್ಥಿತ್ವಲ್ಲಿದ್ದಾಗ ಕರ್ನಾಟಕಕ್ಕೆ ಪ್ರತ್ಯೇಕ ಬಾವುಟ ಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಕನ್ನಡಪರ ಸಂಘಟನೆಗಳ ಜೊತೆ ಆಗಿನ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿ ನಾಡಧ್ವಜ ಸಮಿತಿ ನೀಡಿದ್ದ ಹಳದಿ, ಬಿಳಿ ಮಧ್ಯೆ ಕರ್ನಾಟಕ ಸರ್ಕಾರದ ಲಾಂಛನ ಕೆಂಪು ಬಣ್ಣದ ತ್ರಿವರ್ಣ ನಾಡಧ್ವಜವನ್ನೆ ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top