fbpx
ಸಮಾಚಾರ

ಕಾಟ್ರೆಲ್ ‘ಆರ್ಮಿ ಸೆಲ್ಯೂಟ್’ ಅಣುಕಿಸಿದ ಮೊಹಮ್ಮದ್ ಶಮಿ- ಕೊಹ್ಲಿ, ಚಹಾಲ್ ವ್ಯಂಗ್ಯ ನಗೆ, ವಿಡಿಯೋ ವೈರಲ್

ವೆಸ್ಟ್ ಇಂಡೀಸ್ ವೇಗಿ ಶೆಲ್ಡಾನ್ ಕಾಟ್ರೆಲ್ ವಿಕೆಟ್ ಕಬಳಿಸಿ ವಿಶೇಷ ರೀತಿಯಲ್ಲಿ ಸಂಭ್ರಮಾಚರಿಸುತ್ತಾರೆ. ಲೆಫ್ಟ್ ರೈಟ್ ವಾಕ್ ಹಾಗೂ ಆರ್ಮಿ ಸಲ್ಯೂಟ್ ಮಾಡೋ ಮೂಲಕ ಸೆಲೆಬ್ರೇಷನ್ ಮಾಡುತ್ತಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಕಾಟ್ರೆಲ್ ಸೆಲೆಬ್ರೇಷನ್ ಎಲ್ಲರ ಗಮನ ಸೆಳೆದಿದೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಕಾಟ್ರೆಲ್ ಸಲ್ಯೂಟ್‌ಗೆ ತಿರುಗೇಟು ನೀಡಿದ ಘಟನೆ ನಡೆದಿದೆ.

 

 

ಪಂದ್ಯದಲ್ಲಿ ಮೊಹಮ್ಮದ್​ ಶಮಿಯನ್ನು ಔಟ್​ ಮಾಡಿ ಕೆರಿಬಿಯನ್​ ಬೌಲರ್ ಶೆಲ್ಡನ್ ಕಟ್ರೆಲ್ ಸಂಭ್ರಮಿಸಿದ್ದರು. ಕೊನೆಯ ಹಂತದಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ್ದ ಶಮಿ ಕಟ್ರೆಲ್ ಅವರ ವೇಗದ ಎಸೆತಕ್ಕೆ ಕೀಪರ್ ಶಾಯ್ ಹೋಪ್​ಗೆ ಕ್ಯಾಚಿತ್ತು ನಿರ್ಗಮಿಸಿದ್ದರು. ಇದೇ ವೇಳೆ ತಮ್ಮ ಟ್ರೇಡ್​ ಮಾರ್ಕ್​ ಸ್ಟೈಲ್​ನಲ್ಲಿ ಸೆಲ್ಯೂಟ್ ಹೊಡೆಯುವ ಮೂಲಕ ವಿಂಡೀಸ್ ವೇಗಿ ಸಂಭ್ರಮಕ್ಕೆ ಕಿಚ್ಚು ಹಚ್ಚಿದ್ದರು.

ಎರಡನೇ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ ಕಟ್ರೆಲ್​ರನ್ನು ಚಾಹಲ್​ ತಮ್ಮ ಸ್ಪಿನ್ ಬಲೆಯಲ್ಲಿ ಬೀಳಿಸುವ ಮೂಲಕ ಪೆವಿಲಿಯನ್​ಗಟ್ಟಿದ್ದರು. ಇದೇ ಖುಷಿಯನ್ನು ಮೊಹಮ್ಮದ್ ಶಮಿ ಕಟ್ರೆಲ್​ ಶೈಲಿಯಲ್ಲೇ ಸೆಲ್ಯೂಟ್ ಹೊಡೆದು ವ್ಯಂಗ್ಯವಾಡಿ ಸಂಭ್ರಮಿಸಿದರು. ಇದನ್ನು ಕಂಡ ಚಹಾಲ್ ಮತ್ತು ವಿರಾಟ್ ಕೊಹ್ಲಿ ವ್ಯಂಗ್ಯವಾದ ನಗೆಯೊಂದಿಗೆ ಸಂಭ್ರಮಿಸಿದರು. ಮೊಹಮ್ಮದ್ ಶಮಿ ವ್ಯಂಗ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top