fbpx
ಸಮಾಚಾರ

ಮತದಾರರಿಗೆ ಆಯ್ಕೆ ಸ್ವತಂತ್ರವೇ ಇಲ್ಲವೇ? ಸಿಎಂ, ಡಿಸಿಎಂ ಮಾಜಿ ಸಿಎಂ ವಿರುದ್ಧ ಸಾರ್ಜನಿಕರು ಗರಂ.

ಬುಧವಾರ ‘ಮತ ಹಾಕೋದು ಮೋದಿಗೆ, ಆದರೆ ಸಮಸ್ಯೆ ಬಗೆಹರಿಸಲು ನಮ್ಮ ಬಳಿ ಬರುತ್ತೀರಾ’ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದರು. ಅದಾದ ನಂತರ “ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡೋದು ನಾವು, ಆದರೆ ನೀವು ಬಿಜೆಪಿಗೆ ಲೀಡ್ ಕೊಟ್ಟಿದ್ದೀರಿ” ಎಂದು ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯ ಜನರ ವಿರುದ್ಧ ಗರಂ ಆಗಿದ್ದರು. ಇದೀಗ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕೂಡ ಇದೇ ದಾಟಿಯಲ್ಲಿ ಮಾತನಾಡಿದ್ದು ಸಾರ್ವಜನಿಕ ವಲಯದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಂಗಳೂರಿನ ಆರ್‌ಟಿ ನಗರದಲ್ಲಿ ರಸ್ತೆ ಕಾಮಗಾರಿ ವೀಕ್ಷಣೆಗೆ ತೆರಳಿದ ಪರಮೇಶ್ವರ್ ಅವರ ಮುಂದೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಿದರು. ತಮ್ಮ ಬಳಿ ದೂರು ಸಲ್ಲಿಸಿದ ಸಾರ್ವಜನಿಕರನ್ನು ಕುರಿತು ಮಾತನಾಡಿದ ಪರಮೇಶ್ವರ್ “ಇಲ್ಲಿ ಬಿಜೆಪಿಗೆ ವೋಟ್ ಹಾಕಿದವರು ಜಾಸ್ತಿ ಜನರು ಇದ್ದೀರಿ. ಕಾಂಗ್ರೆಸ್‌ಗೆ ವೋಟ್ ಹಾಕಿದವರು ಎಷ್ಟು ಮಂದಿ ಇದ್ದೀರೋ ಗೊತ್ತಿಲ್ಲ. ಆದರೂ ಪರವಾಗಿಲ್ಲ. ಎಲ್ಲರ ಸಮಸ್ಯೆಯನ್ನೂ ಕೇಳುತ್ತೇನೆ” ಎಂದು ಪರಮೇಶ್ವರ್ ಹೇಳಿದ್ದಾರೆ.

ಸರ್ಕಾರದ ನಾಯಕರು ನೀಡಿದ ಹೇಳಿಕೆ ಕುರಿತು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ್, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಮತದಾರರನ್ನು ಅಗೌರವಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಹಿರಿಯ ರಾಜಕಾರಣಿಗಳಾಗಿ ಇವರಿಗೆ ಜನತೆಯ ತೀರ್ಪನ್ನು ಗೌರವಿಸುವ ಮನಸ್ಥಿತಿ ಇಲ್ಲದೆ ಇರುವುದು ದುರ್ದೈವ. ಚುನಾವಣೆಯ ಬಳಿಕ ಇದು ಚರ್ಚೆಯ ವಿಷಯವೇ ಅಲ್ಲ. ಹಾಗೆ ಬಿಜೆಪಿಗೆ ಮತಹಾಕಿದ್ದೀರಿ ಎನ್ನುವ ಅವರೇ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನರು ನಮಗೆ ಮತ ಹಾಕಿದ್ದಾರೆಂದು ಹೇಳಿಕೊಂಡಿದ್ದರಲ್ಲ? ಜನರಿಗೆ ತಮ್ಮ ಇಷ್ಟವಾಗುವ ಅಭ್ಯರ್ಥಿಗೆ ವೋಟ್ ಮಾಡುವ ಅವಕಾಶವೇ ಇಲ್ಲವೇ? ಇಲ್ಲ ಅವರ ಪಕ್ಷಕ್ಕೆ ವೋಟ್ ಹಾಕುವ ಜನರಿಗೆ ಮಾತ್ರ ಸರ್ಕಾರ ಕೆಲಸ ಮಾಡಬೇಕೆ?ನಿಮಗೆ ವೋಟು ಹಾಕದಿದ್ದರೆ ಸಮಸ್ಯೆ ಹೇಳೋ ಹಾಗೆನೇ ಇಲ್ವಾ? ಜನರು ನಿಮ್ಮತ್ರ ಬರೋ ಹಾಗೇ ಇಲ್ವಾ? ಮೋದಿಗೆ ವೋಟ್ ಹಾಕಿದ್ರೆ ನಿಮ್ಮ ಬಳಿ ಸಮಸ್ಯೆ ಹೇಳೋ ಆಗಿಲ್ವಾ? ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top