fbpx
ಸಮಾಚಾರ

ಭಾರತವನ್ನು ಗೆಲ್ಲಿಸು ಎಂದು ಪ್ರಾರ್ಥಿಸುತ್ತಿರುವ ಪಾಕಿಗರು-ಕಾರಣ ಏನು ಗೊತ್ತಾ?

ವಿಶ್ವಕಪನ್​ಲ್ಲಿ ತೀವ್ರ ಕುತೂಹಲ ಮೂಡಿಸಿದ್ದು ಭಾರತ-ಪಾಕಿಸ್ತಾನ ಪಂದ್ಯ. ಇದರಲ್ಲಿ ಭಾರತ ಗೆದ್ದು ಬೀಗಿತ್ತು. ಇದು ಪಾಕಿಸ್ತಾನ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಆದರೆ ಈಗ ಸ್ವತಃ ಪಾಕಿಸ್ತಾನ ಅಭಿಮಾನಿಗಳು ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಬೆಂಬಲಕ್ಕೆ ನಿಂತಿದ್ದಾರೆ!

ಹೌದು ಇದು ನಿಜ. ಯಾಕೆಂದರೆ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅಜೇಯ ಓಟ ಮುಂದುವರೆಸಿದೆ. ಇದನ್ನು ಹೀಗೆ ಮುಂದುವರೆಸಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಗೆದ್ದರೆ ಸೆಮಿಫೈನಲ್ ಗೆ ಹೋಗುವ ಪಾಕಿಸ್ತಾನದ ಕನಸಿಗೆ ಪುಕ್ಕ ಬರುತ್ತದೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಭಾರತ ಹಾಗೂ ಇಂಗ್ಲೆಂಡ್ ತಂಡ ಮೊದಲ 4 ಸ್ಥಾನದಲ್ಲಿ ನಿಂತಿವೆ. ಮೊದಲ ಮೂರು ತಂಡಗಳು ಸೆಮಿಫೈನಲ್​ಗೆ ಏರುವುದು ಬಹುತೇಕ ಖಚಿತವಾಗಿದೆ. ಆದರೆ, ನಾಲ್ಕನೇ ಸ್ಥಾನಕ್ಕೆ ಇಂಗ್ಲೆಂಡ್​, ಬಾಂಗ್ಲಾ, ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

ಏಳು ಪಂದ್ಯಗಳಲ್ಲಿ ಇಂಗ್ಲೆಂಡ್ ನಾಲ್ಕು ಪಂದ್ಯಗಳಲ್ಲಿ ಗೆದ್ದಿದ್ದು ಮೂರು ಪಂದ್ಯಗಳಲ್ಲಿ ಸೋತಿದೆ. ಉಳಿದ ಎರಡು ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್ ಹಾಗೂ ಟೀಂ ಇಂಡಿಯಾ ವಿರುದ್ಧ ಆಡಲಿದೆ. ಇನ್ನು ಒಂದು ಪಂದ್ಯ ಸೋತರು ಇಂಗ್ಲೆಂಡ್ ಸೆಮಿಫೈನಲ್ ಏರುವ ಕನಸು ನನಸಾಗಲ್ಲ. ಹಾಗಾದಲ್ಲಿ ಬಾಂಗ್ಲಾ, ಪಾಕ್ ಅಥವಾ ಶ್ರೀಲಂಕಾ ಸೆಮಿಫೈನಲ್ ಗೆ ಏರುವ ಸಾಧ್ಯತೆ ಇದೆ.

ಈ ಭಾನುವಾರ(ಜೂ.30) ಭಾರತ-ಇಂಗ್ಲೆಂಡ್ ತಂಡಗಳು ಪರಸ್ಪರ ಎದುರಾಗುತ್ತಿದ್ದು, ನಿಮ್ಮ ಬೆಂಬಲ ಯಾವ ತಂಡಕ್ಕೆ ಎಂದು ಪಾಕ್ ಅಭಿಮಾನಿಗಳನ್ನು ಇಂಗ್ಲೆಂಡ್ ಮಾಜಿ ಆಟಗಾರ ನಾಸೀರ್ ಹುಸೇನ್ ಟ್ವಿಟ್ಟರ್’ ನಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಪಷ್ಟ ಉತ್ತರ ನೀಡಿರುವ ಪಾಕಿಸ್ತಾನ ಕ್ರೀಡಾ ಅಭಿಮಾನಿಗಳು, ನಮ್ಮ ಬೆಂಬಲ ಭಾರತಕ್ಕೆ ಎಂದು ಒಕ್ಕೊರಲಿನಿಂದ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top