fbpx
ಭವಿಷ್ಯ

ಜೂನ್ 29- ನಾಳೆಯ ಪಂಚಾಂಗ ಮತ್ತು ದಿನಭವಿಷ್ಯ.

ಸ್ಥಳ- ಬೆಂಗಳೂರು.
ಶನಿವಾರ, ಜೂನ್ 29 2019
ಸೂರ್ಯೋದಯ : 5:55 am
ಸೂರ್ಯಾಸ್ತ: 6:49 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಜ್ಯೇಷ್ಠ
ಪಕ್ಷ : ಕೃಷ್ಣಪಕ್ಷ
ತಿಥಿ : ಏಕಾದಶೀ 06:45
ನಕ್ಷತ್ರ: ಭರಣಿ 09:58
ಯೋಗ :ಧೃತಿ 21:46
ಕರಣ:ಬಾಲವ 06:45 ಕುಲವ 18:33

ಅಭಿಜಿತ್ ಮುಹುರ್ತ: 11:57 am – 12:48 pm.
ಅಮೃತಕಾಲ : nill

ರಾಹುಕಾಲ-9:11 am – 10:47 am
ಯಮಗಂಡ ಕಾಲ-1:58 pm – 3:34 pm
ಗುಳಿಕ ಕಾಲ-6:00 am – 7:35 am

 

 

ಮೇಷ (Mesha)

 

ಸದ್ಯದ ಪರಿಸ್ಥಿತಿಯಲ್ಲಿ ಸ್ವತಂತ್ರ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಸ್ನೇಹಿತರ ಮತ್ತು ಬಂಧುಗಳಿಂದ ಸಲಹೆಗಳನ್ನು ಸ್ವೀಕರಿಸಲು ಹಿಂಜರಿಯಬೇಡಿ. ಪರರ ಸಲಹೆ ಪಡೆಯುವುದು ಅವಮಾನದ ಪ್ರಸಂಗವಲ್ಲ.

ವೃಷಭ (Vrushabh)


ಪ್ರತಿದಿನವೂ ನಿಮ್ಮ ಜವಾಬ್ದಾರಿಗಳು ಮಾನಸಿಕ ಒತ್ತಡವನ್ನು ತರುತ್ತಿವೆ. ಒಂದು ಸಮಸ್ಯೆಯನ್ನು ಬಗೆಹರಿಸುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುವುದು. ಈ ಜವಾಬ್ದಾರಿ ಕೆಲಸ ಬೇಡವೇ ಬೇಡಪ್ಪ ಎಂದು ಅಂದುಕೊಳ್ಳುವಿರಿ

ಮಿಥುನ (Mithuna)


ಮಕ್ಕಳ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ. ಮಾತೃ ಸಂಬಂಧದವರಿಗೆ ಅನಾರೋಗ್ಯ ಕಾಡಲಿದ್ದು, ಆಸ್ಪತ್ರೆ ಖರ್ಚು ಬರುವ ಸಾಧ್ಯತೆ ಇದೆ. ನಿಮ್ಮ ಬಂಧುಗಳು ಅನಿರೀಕ್ಷಿತವಾಗಿ ನಿಮಗೆ ಸಹಾಯ ಮಾಡುವರು.

ಕರ್ಕ (Karka)


ಬಹುವಿಧವಾದ ಪ್ರಶಂಸೆಗಳನ್ನು ನೀವು ಪಡೆಯಬಲ್ಲಿರಿ ಮತ್ತು ವಿಶೇಷವಾದ ಪುರಸ್ಕಾರಕ್ಕೆ ನಿಮ್ಮನ್ನು ಜನರು ಆಯ್ಕೆ ಮಾಡುವರು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿದ್ದು ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.

ಸಿಂಹ (Simha)


ವಿಶೇಷವಾಗಿ ನಿಮಗೆ ತಿಳಿಯಲಾಗದಂತಹ ಅನಿವಾರ್ಯ ಖರ್ಚಿನ ಪ್ರಸಂಗಗಳು ಎದುರಾಗುವುದು. ಅತ್ಯಂತ ಆಪ್ತವಾದ ಗೆಳೆಯ ನಿಮಗೆ ಹಣಕಾಸಿನ ನೆರವನ್ನು ನೀಡುವನು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ.

ಕನ್ಯಾರಾಶಿ (Kanya)


ಗುರು ಹಿರಿಯರ ಬಗ್ಗೆ ವಿಶೇಷವಾದ ಗೌರವ ಮತ್ತು ವಿನಯವನ್ನು ತೋರುತ್ತ ಬಂದಿರುವ ನಿಮಗೆ ಹರ್ಷದ ಸುದ್ದಿ ಕಾದಿದೆ. ಈ ದಿನ ಸಂತೋಷ ಸಂಭ್ರಮದಿಂದ ಕಳೆಯುವಿರಿ, ನಿರಾಶರಾಗುವುದು ಬೇಡ. ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ. ಕುಲದೇವತಾ ಪ್ರಾರ್ಥನೆ ಮಾಡಿ. ಭಗವಂತ ಕೊಟ್ಟಿದ್ದರಲ್ಲಿಯೇ ಅಲ್ಪ ದಾನವನ್ನು ಮಾಡಿ.

ತುಲಾ (Tula)


ವಿನಾಕಾರಣ ಮನೆಯಲ್ಲಿ ಮನಸ್ತಾಪದ ಸಂದರ್ಭಗಳು ಎದುರಾಗುವ ಸಂದರ್ಭವಿರುತ್ತದೆ. ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಬೇಡಿ. ತಪ್ಪು ಮಾಡುವುದು ಮನುಜ ಸ್ವಭಾವ. ಅಂತಹ ವ್ಯಕ್ತಿಗಳನ್ನು ಕ್ಷ ಮಿಸಿಬಿಡಿ.

ವೃಶ್ಚಿಕ (Vrushchika)


ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಸಮಾಜದಲ್ಲಿ ಗೌರವ, ಸನ್ಮಾನಗಳು ಏರ್ಪಡುವವು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಧನು ರಾಶಿ (Dhanu)


ಹಿರಿಯರೊಬ್ಬರ ಸಕಾಲಿಕ ಹಿತನುಡಿಗಳಿಂದ ಮನೆಯಲ್ಲಿನ ಪತಿ, ಪತ್ನಿಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಂತ್ಯ ಕಾಣುವುದು. ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವುದರಿಂದ ನೆಮ್ಮದಿಯ ವಾತಾವರಣವನ್ನು ಕಾಣುವಿರಿ.

ಮಕರ (Makara)


ಹೊಸ ರೀತಿಯ ಕಾರ್ಯ ಮಾಡುವಂತೆ ಗ್ರಹಗಳು ಪ್ರೇರೇಪಿಸುತ್ತವೆ. ಅದರಲ್ಲಿ ಯಶಸ್ಸನ್ನು ಕಾಣುವ ಸೌಭಾಗ್ಯ ನಿಮ್ಮದಾಗುವುದು. ದೈವದತ್ತವಾಗಿ ಬಂದ ಜಾಣ್ಮೆಯನ್ನು ಉಪಯೋಗಿಸಿಕೊಳ್ಳಿ. ಮಾತಿನಲ್ಲಿ ಮೃದುತ್ವ ರೂಢಿಸಿಕೊಳ್ಳಿ.

ಕುಂಭರಾಶಿ (Kumbha)


ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬಹುದಿನಗಳಿಂದ ಬರಬೇಕಾಗಿದ್ದ ಹಣವು ನಿಮ್ಮ ಕೈಸೇರುವುದು. ಆಕಾಶಕ್ಕೆ ಏಣಿ ಹಾಕುವ ವ್ಯರ್ಥ ಪ್ರಯತ್ನ ಬೇಡ. ನಿಮ್ಮ ಕಾರ್ಯಕ್ಷೇತ್ರದಲ್ಲಿನ ಕೆಲಸವು ಮಂದಗತಿಯಿಂದ ಆರಂಭವಾದರೂ ಒಳಿತಾಗುವುದು.

ಮೀನರಾಶಿ (Meena)


ನಿಮ್ಮ ಎದುರು ನಿಂತು ಮಾತನಾಡುವ ಧೈರ್ಯವಿಲ್ಲದ ಶತ್ರುಗಳು ಬೇರೆ ರೀತಿಯ ವ್ಯೂಹವನ್ನು ರಚಿಸುವರು. ಈ ಬಗ್ಗೆ ಹೆಚ್ಚು ಜಾಗೃತರಾಗಿ. ಕಲ್ಮಶ ರಹಿತ ನಿಮ್ಮ ಧೈರ್ಯ ಧೋರಣೆಗಳು ನಿರೀಕ್ಷಿತ ಯಶಸ್ಸನ್ನು ತಂದುಕೊಡುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top