fbpx
ಸಮಾಚಾರ

ಐಬಿಪಿಎಸ್ ನಿಯಮ ಬದಲಾಗಲು ಕನ್ನಡಿಗರ ಸೋಮಾರಿತನವೇ ಕಾರಣ?

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳಲ್ಲಿ (ಆರ್​ಆರ್​ಬಿ) ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್) ಮೂಲಕ ಅಧಿಕಾರಿಗಳ ನೇಮಕಾತಿ ವೇಳೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಎಲ್ಲೆಡೆ ಜೋರಾಗಿದೆ. ಕರ್ನಾಟಕದ ಸಂಸದರೂ ಕೂಡ ಈ ಬಗ್ಗೆ ಸಂಸತ್ ನಲ್ಲಿ ಪ್ರಸ್ತಾಪಿಸಿದ್ದಾರೆ.. ಆದರೆ ಮೊದಲು ಇದ್ದಂತ ಐಬಿಪಿಎಸ್ ನಿಯಮ ಬದಲಾಗಲು ಕನ್ನಡಿಗರ ಸೋಮಾರಿತನವೇ ಕಾರಣ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ವಿಶ್ಲೇಷಿಸಿದ್ದಾರೆ.

 

 

2014ರ ವರೆಗೆ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗದಲ್ಲಿ ಎಲ್ಲಾ ರಾಜ್ಯಗಳ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ IBPS ಪರೀಕ್ಷೆ ಬರೆಯಲು ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಅಭ್ಯರ್ಥಿಗಳು ಬರದೇ ನಿರಾಸಕ್ತಿ ತೋರಿದ್ದರಿಂದ ಇದರ ನಿಯಮವನ್ನು ಬದಲಾಯಿಸಿತು. ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಬರೆಯಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ.. ಇದರಿಂದಾಗಿ ಹೊರರಾಜ್ಯದವರೂ ಕೂಡ ನಮ್ಮ ನಾಡಿನ ಬ್ಯಾಂಕ್ ಉದ್ಯೋಗಗಳ ಏಕ್ಸಾಮ್ ಬರೆದು ಉದ್ಯೋಗ ಪಡೆಯುವಂತೆ ಆಗಿದೆ..

“ಬದಲಾದ ನಿಯಮದಿಂದ ಕೇವಲ ಸ್ಥಳೀಯ ಭಾಷೆಯ ಜ್ಞಾನವಿರುವ ಪ್ರತಿಭಾನ್ವಿತರು ಅವಕಾಶ ವಂಚಿತರಾಗುತ್ತಿದ್ದಾರೆ. ಇದು ಕೇವಲ ಕರ್ನಾಟಕ ಮಾತ್ರವಲ್ಲದೆ ಎಲ್ಲಾ ಪ್ರಾದೇಶಿಕ ಭಾಷೆಗಳ ರಾಜ್ಯಗಳು ಈ ಸಮಸ್ಯೆಯನ್ನು ಎದುರಿಸುತ್ತವೆ.. ಈ ಸ್ಥಿತಿಗೆ ನಮ್ಮ ಸೋಮಾರಿತನವೇ ಕಾರಣ.. ನಾವು ಹೇಗೆ ಮೆಡಿಕಲ್, ಇಂಜಿನಿಯರಿಂಗ್ ಮಾಡುವುದರಲ್ಲಿ ಆಸಕ್ತಿ ತೋರಿಸುತ್ತೇವೆಯೋ ಹಾಗೆ ಬ್ಯಾಂಕಿಂಗ್ ಎಕ್ಸಾಂ ಬಗ್ಗೆ ಆಸಕ್ತಿ ತೋರಿಸಿರಲಿಲ್ಲ. ಒಂದು ವೇಳೆ ಹೆಚ್ಚಿನ ಅರ್ಹ ವಿದ್ಯಾರ್ಥಿಗಳು ಆಯಾ ರಾಜ್ಯಗಳಿಂದಲೇ ಸಿಕ್ಕಿದ್ದರೆ ಈ ನಿಯಮ ಬದಲಾಗುತ್ತಿರಲಿಲ್ಲ. ಈಗ ಕನ್ನಡಿಗ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಆದರೆ IBPS ಅವರಿಗೆ ತೊಡಕಾಗಿದೆ.” ಎಂದು ಸೂಲಿಬೆಲೆ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top