fbpx
ಸಮಾಚಾರ

‘ಥರ್ಡ್ ಅಂಪೈರ್ ನೀಡಿದ ಕೆಟ್ಟ ತೀರ್ಪಿನ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ರೋಹಿತ್ ಶರ್ಮ.

ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದ ವೇಳೆ ವಿವಾದಾತ್ಮಕ ಡಿಆರ್‌ಎಸ್‌ ತೀರ್ಪಿಗೆ ಔಟ್‌ ಆಗಿದ್ದ ರೋಹಿತ್‌ ಶರ್ಮ ತಮ್ಮ ವಿರುದ್ಧದ ತೀರ್ಪನ್ನು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. 2 ಫೋಟೊ ಜತೆಗೆ ಕೈಯನ್ನು ಮುಖಕ್ಕೆ ಅಡ್ಡವಾಗಿ ಹಿಡಿದಿರುವ ಎಮೊಜಿ ಪ್ರಕಟಿಸಿರುವ ಅವರು ಈ ತೀರ್ಪಿನ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅನೇಕ ಅಭಿಮಾನಿಗಳು ರೋಹಿತ್‌ಗೆ ಬೆಂಬಲ ನೀಡಿದ್ದಾರೆ.

 

 

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಔಟ್ ತೀರ್ಪು ಕುರಿತಂತೆ ತಮ್ಮ ಟ್ವೀಟ್ ನಲ್ಲಿ ಐಸಿಸಿ ಕಾಲೆಳೆದಿದ್ದಾರೆ. ಬ್ಯಾಟ್ ಮತ್ತು ಚೆಂಡು ಮಧ್ಯೆ ಇರುವ ಅಂತರವನ್ನು ಫೋಟೋ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಹಣೆ ಚಚ್ಚಿಕೊಂಡಿರುವ ಹಾಗೂ ಕಣ್ಣುಗಳ ಅಮೋಜಿಯನ್ನು ಹಾಕಿ ಅಸಮಾಧಾನ ಹೊರಹಾಕಿದ್ದಾರೆ.

ವಿಂಡೀಸ್ ತಂಡದ ಬೌಲರ್ ಕೆಮರ್ ರೂಚ್ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾ ಥರ್ಡ್ ಅಂಪೈರ್ ಯಡವಟ್ಟು ತೀರ್ಪಿನಿಂದ ಔಟಾಗಿದ್ದರು. ಮೊದಲಿಗೆ ರೂಚ್ ಅಪೀಲ್ ಮಾಡಿದಾಗ ಮೈದಾನದ ಅಂಪೈರ್ ನಾಟೌಟ್ ತೀರ್ಪು ನೀಡಿದ್ದರು. ಇದಕ್ಕೆ ವಿಂಡೀಸ್ ನಾಯಕ ಡಿಆರ್ಎಸ್ ಗೆ ಮೊರೆ ಹೋಗಿದ್ದರು. ಈ ವೇಳೆ ದೃಶ್ಯಗಳನ್ನು ಪರಿಶೀಲಿಸಿದ ಥರ್ಡ್ ಅಂಪೈರ್ ಅಲ್ಟ್ರಾ ಎಡ್ಜ್ ನಲ್ಲಿ ಚೆಂಡು ಪ್ಯಾಡ್ ಗೆ ತಗಲಿದ್ದನ್ನು ಗಮನಿಸಿ ಮೂರನೇ ಅಂಪೈರ್ ಔಟ್ ತೀರ್ಪು ನೀಡುವಂತೆ ಸೂಚಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top