fbpx
ಸಮಾಚಾರ

ಫಾರಿನ್ ಹುಡುಗನ ಜೊತೆ ಲವ್ವಲ್ಲಿ ಬಿದ್ದಳಾ ಸಂಯುಕ್ತಾ ಹೆಗ್ಡೆ?

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟು ಮಾಡಿದ ಒಂದೇ ಚಿತ್ರಕ್ಕೆ ಇರೋ ಬರೋ ವಿವಾದಗಳನ್ನೆಲ್ಲಾ ಮೈಮೇಲೆ ಎಳೆದುಕೊಂಡು ಹೆಚ್ಚು ಸುದ್ದಿಯಾಗುತ್ತಿದ್ದ ನಟಿ ಸಂಯುಕ್ತ ಹೆಗ್ಡೆ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ನಖರಾ ಮಾಡಿಕೊಂಡು ಹೊರ ಬಿದ್ದ ಬಳಿಕ ವಾರಕ್ಕೊಂದರಂತೆ ವಿಚಿತ್ರ ಭಂಗಿಯ ಫೋಟೋಗಳನ್ನು ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಅಪ್ಲೋಡ್ ಮಾಡಿ ವಿಕೃತಾನಂದ ಪಡುತ್ತಿದ್ದ ಸಂಯುಕ್ತ ಸ್ವಲ್ಪ ದಿನಗಳ ಕಾಲ ಎಲ್ಲವನ್ನು ಮರೆತು ಸುಮ್ಮನಾಗಿಬಿಟ್ಟಿದ್ದರು ಆದ್ರೆ ಇದೀಗ ಮತ್ತೊಮ್ಮೆ ಪ್ರತ್ಯಕ್ಷವಾಗಿದ್ದಾರೆ.

 

 

 

 

ಸಂಯುಕ್ತಾ ಜೆಕ್ ಭಾಗದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಅವರ ಬಾಯ್ಫ್ರೆಂಡ್ ಎಂದು ಹೇಳಲಾದ ಕ್ರಿಸ್ ಸಾವರ್ ಕೂಡ ಸಂಯುಕ್ತಾಗೆ ಸಾಥ್ ನೀಡಿದ್ದಾರೆ. ಈ ವೇಳೆ ಟೆಡ್ಡಿ ಬೇರ್ಗೆ ಸಂಯುಕ್ತಾ ಚುಂಬಿಸಿದ್ದಾರೆ. ಅಷ್ಟೇ ಅಲ್ಲ, ‘ಇದು ತಮ್ಮ ಜೀವನದ ಅತ್ಯುತ್ತಮ ಕಿಸ್’ ಎಂದು ಹೇಳಿಕೊಂಡಿದ್ದಾರೆ.

ಕ್ರಿಸ್​ ಜೊತೆ ಸಂಯುಕ್ತಾ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನುವ ಮಾತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ವಿದೇಶಿ ಹುಡುಗನೊಂದಿಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದರು. ತನ್ನ ಗೆಳೆಯ ಮಡಿಲಲ್ಲಿ ಕೂತಿರುವಂತಹ ಫೋಟೋವನ್ನು ಸಂಯುಕ್ತ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿ, ‘ಚಾಕೊಲೇಟ್-ವೆನಿಲ್ಲಾ ಕಾಂಬಿನೇಷನ್​ ಯಾವಾಗಲೂ ಚೆನ್ನಾಗಿರುತ್ತದೆ ಎಂದು,” ಬರೆದುಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top