fbpx
ಸಮಾಚಾರ

ಅಮಿತ್ ಶಾ ಮೆಚ್ಚಿಸಲು ಹೋಗಿ ಕನ್ನಡಿಗರ ಕೆಂಗಣ್ಣಿಗೆ ಕಾರಣರಾದ ಶೋಭಾ ಕರಂದ್ಲಾಜೆ.

ಇತ್ತೀಚಿಗೆ ಕರ್ನಾಟಕದ ಎಲ್ಲಾ ಸಂಸದರು ಹಿಂದಿಯನ್ನು ಕಡ್ಡಾಯವಾಗಿ ಕಲಿಯಲೇಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದೇಶಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅದರಂತೆ ಅಮಿತ್ ಷಾ ರನ್ನು ಮೆಚ್ಚಿಸಲು ಶೋಭಾ ಕರಂದ್ಲಾಜೆ ಸಂಸತ್ ನಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಿಜೆಪಿ ಯುವಸಂಸದ ತೇಜಸ್ವಿ ಸೂರ್ಯ ಸಂಸತ್ ನಲ್ಲಿ ಕನ್ನಡ ಭಾಷಣ ಮಾಡಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದರು. ಆದರೆ ಅದೇ ಬಿಜೆಪಿ ಪಕ್ಷದ ನಾಯಕಿ ಎನಿಸಿಕೊಂಡಿರುವ ಸಂಸದೆ ಶೋಭಾ ಕರಂದ್ಲಾಜೆ ಅವರು ಹಿಂದಿಯಲ್ಲಿ ಭಾಷಣ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ..

 

 

ಹಿಂದಿ ಮಾತನಾಡಲು ಸರಿಯಾಗಿ ಬಾರದಿದ್ದರೂ ಶೋಭಾ ಕರಂದ್ಲಾಜೆ ಹೈಕಮಾಂಡ್ ಅನ್ನು ಮೆಚ್ಚಿಸಲೋ ಏಕೋ ಹಿಂದಿಯಲ್ಲಿ ತಡಬಡಾಯಿಸಿ ನಗೆಪಾಟಲಿಗೀಡಾಗಿದ್ದಾರೆ. ಹಿಂದಿಯಲ್ಲಿ ಬರೆದಿರುವ ಪೇಪರ್ ಅನ್ನು ಕೈಯಲ್ಲಿ ಹಿಡಿದುಕೊಂಡು ಓದುತ್ತಾ ಇರುವ ಶೋಭಾ ಕರಂದ್ಲಾಜೆ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾರದ ಹಿಂದಿ ಭಾಷೆಯನ್ನು ಬಡಬಡನೇ ನೋಡಿಕೊಂಡು ಓದುವ ಅವಶ್ಯಕತೆ ಏನಿತ್ತು? ಕನ್ನಡದಲ್ಲಿ ಭಾಷಣ ಮಾಡಿದ್ದಾರೆ ಏನಾದ್ರೂ ಕಳೆದುಕೊಳ್ಳುತ್ತಿದ್ದರೇ? ಅಥವಾ ಹಿಂದಿಯಲ್ಲಿ ಮಾತನಾಡಿದರೆ ಯಾವುದಾದರೂ ಹುದ್ದೆ ಸಿಗುತ್ತದೆಯೇ? ಯಾಕಿಷ್ಟು ಹಿಂದಿ ಪ್ರೇಮ ಎಂದು ನೆಟ್ಟಿಗರು ಶೋಭಾ ವಿರುದ್ಧ ಕಿಡಿಕಾರುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top