fbpx
ಸಮಾಚಾರ

ಹೊಸ ಜರ್ಸಿಯಲ್ಲಿ ಮಿಂಚಿದ ಟೀಂ ಇಂಡಿಯಾ ಆಟಗಾರರು!

ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ಸಾಂಪ್ರಾದಾಯಿಕ ನೀಲಿ ಜೆರ್ಸಿಗೆ ವಿರುದ್ಧವಾಗಿ ಕಿತ್ತಳೆ ಬಣ್ಣದ ಜರ್ಸಿಯಲ್ಲಿ ಆಡಲಿದ್ದಾರೆ. ಇದರಂತೆ ಕಿತ್ತಳೆ ಹಾಗೂ ನೀಲಿ ಮಿಶ್ರಿತ ಟೀಮ್ ಇಂಡಿಯಾದ ನೂತನ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ.

ಟೀಂ ಇಂಡಿಯಾ ಆಟಗಾರರು ಈ ಹೊಸ ಜರ್ಸಿಯನ್ನು ತೊಟ್ಟು ಫೋಟೋ ಶೂಟ್ ನಡೆಸಿದ್ದು ಎಲ್ಲರೂ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಎರಡು ತಂಡಗಳ ಜೆರ್ಸಿಯ ಕಲರ್ ಒಂದೇ ಬಣ್ಣದಲ್ಲಿ ಕೂಡಿದ್ದರೆ ಮೈದಾನದಲ್ಲಿ ನೆಚ್ಚಿನ ತಂಡಗಳಿಗೆ ಹುರಿದುಂಬಿಸಲು ಅಭಿಮಾನಿಗಳಿಗೆ ಗೊಂದಲವಾಗುತ್ತದೆ ಎಂಬ ಕಾರಣಕ್ಕೆ ಐಸಿಸಿ ಈ ನಿಯಮ ಜಾರಿಗೆ ತಂದಿದೆ. ಇಂಗ್ಲೆಂಡ್ ಮತ್ತು ಭಾರತ ತಂಡದ ಜರ್ಸಿಗಳು ನೀಲಿ ಬಣ್ಣದದಿಂದ ಕೂಡಿರುವುದರಿಂದ ಇಲ್ಲಿ ಭಾರತದ ಜೆರ್ಸಿ ಬಣ್ಣ ಬದಲಾಗಲಿದೆ. ಪಂದ್ಯ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವುದರಿಂದ ಇಂಗ್ಲೆಂಡ್ ತಂಡದ ಜರ್ಸಿ ಬಣ್ಣ ಬದಲಾಗುವುದಿಲ್ಲ.

ಭಾರತ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ತಂಡಗಳ ಜೆರ್ಸಿಯು ನೀಲಿ ಬಣ್ಣದಿಂದ ಕೂಡಿದೆ. ಹಾಗಾಗಿ ಈ ತಂಡಗಳು ಪರಸ್ಪರ ಎದುರು ಕಣಕ್ಕಿಳಿದಾಗ ಆಯಾ ತಂಡಗಳ ಜೆರ್ಸಿ ಬಣ್ಣ ಬದಲಾಗುತ್ತದೆ. ಇಲ್ಲಿ ಇಂಗ್ಲೆಂಡ್ ಹೊರತುಪಡಿಸಿ ಇತರೆ ಮೂರು ತಂಡಗಳ ಜೆರ್ಸಿ ಬಣ್ಣ ಬದಲಾಗಲಿದೆ. ಹಾಗಾಗಿ ಇಂಗ್ಲೆಂಡ್ ವಿರುದ್ಧ ಭಾರತ ಕಿತ್ತಳೆ ಬಣ್ಣದ ಜರ್ಸಿಯಲ್ಲಿ ಮಿಂಚಲಿದೆ.

ಈ ನಿಯಮ ಕೇವಲ ಭಾರತ ತಂಡಕ್ಕೆ ಮಾತ್ರ ಅನ್ವಯವಾಗುವುದಿಲ್ಲ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ತಂಡಗಳ ಸಮವಸ್ತ್ರದ ಬಣ್ಣಗಳು ಕೂಡ ಅದಾಗಲೇ ಬದಲಾಗಿವೆ.. ಹಾಗೆಯೇ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳ ಜೆರ್ಸಿಯಲ್ಲಿ ಹಸಿರು ಬಣ್ಣವಿರುವುದರಿಂದ ಈ ತಂಡಗಳು ಸಹ ಪರ್ಯಾಯ ಜೆರ್ಸಿ ಆಯ್ಕೆಯನ್ನು ಪಡೆದುಕೊಳ್ಳಲಿದೆ,. ಇನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್, ಮೂರು ತಂಡಗಳ ಜೆರ್ಸಿ ಕಲರ್​ ಡಿಫರೆಂಟ್ ಆಗಿರೋದ್ರಿಂದ, ಇವರಿಗೆ ಜೆರ್ಸಿ ಬದಲಾಯಿಸೋ ಅವಕಾಶವಿಲ್ಲ.

ಹೊಸ ನಿಯಮ :
ಫುಟ್ಬಾಲ್ ಮಾದರಿಯಲ್ಲಿ ಈ ಬಾರಿಯ ವಿಶ್ವಕಪ್​ನಲ್ಲಿ, ‘ಹೋಂ ಅಂಡ್ ಅವೇ’ ಮಾದರಿಯಲ್ಲಿ ಜೆರ್ಸಿಗಳನ್ನ ಪರಿಚಯಿಸಲಾಗ್ತಿದೆ. ಹೋಂನಲ್ಲಿ ಆಡೋ ತಂಡಗಳ ಜೆರ್ಸಿ ಮತ್ತು ಅವೇನಲ್ಲಿ ಆಡೋ ತಂಡಗಳ ಜೆರ್ಸಿ, ಬೇರೆ ಬೇರೆ ಕಾಣಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top