fbpx
ಸಮಾಚಾರ

ಈ ದೇವಸ್ಥಾನದಲ್ಲಿ ಪೂಜಾರಿನ್ನು ಬಂದಿರುವುದಿಲ್ಲ ಬಾಗಿಲು ತೆಗಿದಿರುವುದಿಲ್ಲ ಆದರೂ ಬ್ರಾಹ್ಮಿ ಮುಹೂರ್ತದಲ್ಲಿ ಆಶ್ಚರ್ಯ ರೀತಿಯಲ್ಲಿ ಪೂಜೆ ನಡೆದೇಹೋಗಿರುತ್ತೆ. ಏನ್ ಇದರ ಹಿಂದೆ ಇರೋ ನಿಗೂಢ ,ನೋಡಿ .

ಈ ದೇವಾಲಯದಲ್ಲಿ ಬೆಳಗ್ಗೆ ನಾಲ್ಕು ಗಂಟೆಯ ಸಮಯದಲ್ಲಿ ಜರುಗುವ ಅದ್ಭುತಗಳು ಏನೇನು ?
ಇದೊಂದು ಮಹಿಮಾನ್ವಿತ ದೇವಾಲಯ . ಅಲ್ಲಿ ಪ್ರತಿ ದಿನ ಪ್ರಾತಃ ಕಾಲದಲ್ಲಿ ಒಂದು ಅದ್ಭುತವನ್ನು ನೋಡಬಹುದಾಗಿದೆ. ಗರ್ಭಗುಡಿಯ ಬಾಗಿಲು ತೆಗೆದು ನಂತರ ಕಾಣುವ ಆ ಅದ್ಭುತವಾದ ದೃಶ್ಯ ಅದಾಗಿರುತ್ತದೆ. ಆ ದೃಶ್ಯವನ್ನು ನೋಡಿದರೆ ಸಾಕು ಎಂಥವರೇ ಆಗಿರಲಿ, ಯಾರೇ ಆಗಿರಲಿ ,ಆಶ್ಚರ್ಯ ಪಡುವುದು ನಿಶ್ಚಿತ. ಆ ದೃಶ್ಯ ಪ್ರತಿನಿತ್ಯ ಬ್ರಾಹ್ಮೀ ಮುಹೂರ್ತದಲ್ಲಿ ನೋಡಲು ಸಿಗುತ್ತದೆ. ಆದರೆ ಅದರ ಹಿಂದೆ ಅಡಗಿರುವ ರಹಸ್ಯವನ್ನು ಜೀವಿಸಿಕೊಳ್ಳಲು ಮಾತ್ರ ಯಾರಿಂದಲೂ ಸಾಧ್ಯವಾಗಿಲ್ಲ. ಈ ರಹಸ್ಯವನ್ನು ಭೇದಿಸಲು ಪ್ರಯತ್ನಗಳು ನಡೆದಿವೆ. ಹಗಲು ರಾತ್ರಿ ಎನ್ನದೇ ಸತತ ಪರಿಶೋಧನೆಗಳು ನೆಡೆದಿವೆ.

ಆದರೆ ಉತ್ತರ ಮಾತ್ರ ಶೂನ್ಯ.ಆ ರಹಸ್ಯವನ್ನು ಬೇದಿಸಬೇಕೆಂದು ಅನೇಕಾನೇಕ ಪ್ರಯತ್ನಗಳು ಜರುಗಿವೆ . ಆದರೆ ಫಲಿತಾಂಶ ಮಾತ್ರ ಕೈಗೆ ಸಿಕ್ಕಿಲ್ಲ. ಒಂದು ಘಟನೆಯು ಅನೇಕ ಶತಮಾನಗಳಿಂದ ಈ ದೇವಾಲಯದಲ್ಲಿ ಜರುಗುತ್ತಲೇ ಬರುತ್ತಿದೆ. ಇನ್ನೂ ಮುಖ್ಯವಾಗಿ ಈ ದೇವಾಲಯದ ಮುಖ್ಯ ಆಕರ್ಷಣೆ ಅದು ಎಂದರೂ ಸಹ ತಪ್ಪಾಗುವುದಿಲ್ಲ. ಈ ರಹಸ್ಯವನ್ನು ಭೇದಿಸಲು ನಾವು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಪಹಾರಘರ್ ಗೆ ಹೋಗಬೇಕು.ಇಲ್ಲಿಂದ 16 ಕಿಲೋ ಮೀಟರ್ ದೂರದಲ್ಲಿರುವ ದಟ್ಟವಾದ ಅಡವಿಯಲ್ಲಿ ಒಂದು ಸುಂದರವಾದ ಪುರಾತನ ದೇವಾಲಯವಿದೆ. ಈ ಒಂದು ಬೆಟ್ಟದ ಮೇಲೆ ನೆಲೆಸಿದೆ ಆ ಪರ ಶಿವನ ದೇವಾಲಯವಿದೆ.ಯಾವಾಗ ಪೂಜಾರಿಯು ಮುಂಜಾನೆ ದೇವಾಲಯವನ್ನು ತೆಗೆಯುತ್ತಾರೋ , ಆಗ ಆ ದೃಶ್ಯವನ್ನು ಕಂಡು ಬೆಚ್ಚಿ ಬೀಳುತ್ತಾನೆ.

 

 

ಅದೇನು ಎಂದರೆ ಅತ್ಯಂತ ಶೋಭಾಯಮಾನವಾಗಿ ಮಹಾದೇವನು ಅಲಂಕೃತನಾಗಿ, ಪೂಜಿಸಲ್ಪಟ್ಟಿರುತ್ತಾನೆ . ಬ್ರಾಹ್ಮಿ ಮುಹೂರ್ತದಲ್ಲಿ ಪೂಜಾರಿ ಬರುವುದಕ್ಕೆ ಮುಂಚಿತವಾಗಿಯೇ ಬಾಗಿಲು ತೆಗೆಯುವಷ್ಟರಲ್ಲಿ ಮಹಾದೇವನ ಪೂಜೆ ನಡೆದು ಬಿಟ್ಟಿರುತ್ತದೆ. ಹೂಗಳಿಂದ ಮತ್ತು ಬಿಲ್ವಾರ್ಚನೆಯಿಂದ ಅಲಂಕರಿಸಲ್ಪಟ್ಟಿರುತ್ತದೆ, ಪೂಜಿಸಲ್ಪಟ್ಟು, ಅಭಿಷೇಕ ಪ್ರಿಯ ಮಹಾದೇವನಿಗೆ ಅಭಿಷೇಕ ಕೂಡ ನೆಡೆದಿರುತ್ತದೆ. ಅಂತಹ ಪ್ರತ್ಯಕ್ಷವಾದ ಲಿಂಗವನ್ನು ನೀವು ನೋಡಬಹುದು. ಇಲ್ಲಿ ಹೇಳುತ್ತಿರುವುದು ಅಕ್ಷರಶಃ ಸತ್ಯ.

ಈ ದಂಡಕಾರಣ್ಯದಲ್ಲಿ ಅದು ದಟ್ಟಡವಿಯಲ್ಲಿ ನೆಲೆಸಿದೆ ಪನಾಯಿಸುರ ಮಹಾದೇವ ಮಂದಿರ. ಇಲ್ಲಿಯ ಸ್ಥಳೀಯರ ಅಭಿಪ್ರಾಯದ ಪ್ರಕಾರ ಬ್ರಾಹ್ಮಿ ಮುಹೂರ್ತದಲ್ಲಿ ಮಹಾದೇವನಿಗೆ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿ ಒಬ್ಬ ಸಿದ್ಧಯೋಗಿ ಆದೃಶ್ಯ ರೂಪದಲ್ಲಿ ಬಂದು ಮಹಾದೇವನಿಗೆ ಅಭಿಷೇಕ ಮತ್ತು ಪೂಜೆಯನ್ನು ಮಾಡಿ ಅದೃಶ್ಯನಾಗುತ್ತಾನೆ ಎನ್ನುವ ನಂಬಿಕೆ ಇದೆ. ಆದರೆ ಸ್ಥಳೀಯರ ಪ್ರಕಾರ ಯಾರು ? ಎಲ್ಲಿ ? ಯಾವಾಗ ? ಎಂದೇ ತಿಳಿಯುವುದಿಲ್ಲ ಎಂದು ಹೇಳುತ್ತಾರೆ. ಅದನ್ನು ಇದುವರೆಗೂ ಸಹ ಕಂಡು ಹಿಡಿಯಲು ಆಗಿಲ್ಲ ಎನ್ನುವುದು ಮಾತ್ರ ಸತ್ಯ .

ಈ ಮಹಾದೇವನ ಮಂದಿರದ ಇನ್ನೊಂದು ಪ್ರತ್ಯೇಕತೆ ಏನೆಂದರೆ 365 ದಿನಗಳು ಕೂಡ ಪ್ರಕೃತಿಯ ರಮಣೀಯತೆಯ ಸುಂದರವಾದ ತಾಣವಾದ ಅಡವಿಯಲ್ಲಿ ಮಂದಿರ ನೆಲೆಸಿದೆ .ಈ ಮಂದಿರದ ಲಿಂಗರೂಪಿಯಾದ ಭಗವಂತನ ಮೇಲೆ ಸದಾ ನೀರಿನ ಬಿಂದುಗಳಿಂದ ಅಭಿಷೇಕ ಜರುಗುತ್ತಿರುತ್ತದೆ . ಇನ್ನೂ ಮುಖ್ಯವಾಗಿ ಮಳೆಗಾಲದಲ್ಲಂತೂ ಇನ್ನೂ ರಮಣೀಯ ದೃಶ್ಯಗಳು ಕಣ್ಮನವನ್ನು ತಣಿಸುತ್ತವೆ. ಇದು ಕೇವಲ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ . ಪ್ರವಾಸಿ ಧಾಮವಾಗಿಯೂ ಕೂಡ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದೆ.

ಪ್ರತಿನಿತ್ಯ ಪ್ರಾತಃ ಕಾಲದಲ್ಲಿ ಆ ದೇವಾಲಯದ ಪೂಜಾರಿ ಬೆಳ್ಳಗ್ಗೆ ಬಾಗಿಲನ್ನು ತೆಗೆದು ನೋಡಿದ ತಕ್ಷಣ ಪ್ರತಿನಿತ್ಯ ಆ ದೃಶ್ಯ ಕಣ್ಣಿಗೆ ಬೀಳುತ್ತದೆ. ಬಾಗಿಲು ತೆಗೆದು ಪೂಜೆ ಮಾಡುವುದಕ್ಕಿಂತ ಮುಂಚೆ ಪರಮೇಶ್ವರನ ಲಿಂಗಕ್ಕೆ ಅಭಿಷೇಕ , ಪುಷ್ಪಗಳು, ಬಿಲ್ವ ಪತ್ರೆಯನ್ನು ಸಮರ್ಪಿಸಿ ಪೂಜಿಸಲಾಗುತ್ತದೆ. ಹೀಗೆ ಪ್ರತಿ ದಿನ ಯಾರು ಪೂಜೆ ಮಾಡುತ್ತಿದ್ದಾರೆ ಎನ್ನುವುದು ಪ್ರಶ್ನಾರ್ಥಕವಾಗಿದೆ. ಇದುವರೆಗೂ ಈ ಪ್ರಶ್ನೆಯನ್ನು ಆ ರಹಸ್ಯವನ್ನು ಭೇದಿಸಿ ಇಲ್ಲವೇ ?ಎನ್ನುವುದು ಪ್ರತಿಯೊಬ್ಬರಿಗೂ ಮೂಡುವುದು ಸಹಜ. ಅದಕ್ಕೆ ಉತ್ತರವಾಗಿ ಪ್ರತಿಯೊಬ್ಬರು ಈ ರಹಸ್ಯವನ್ನು ಭೇದಿಸಲು ಪ್ರಯತ್ನವನ್ನು ಮಾಡಿದ್ದಾರೆ.
ಅದರ ಭಾಗವಾಗಿಯೇ ಆ ಕಾಲದ ರಾಜನಾಗಿದ್ದ ಪಂಚೋಲಿ ಸಿಂಗ್ ತನ್ನ ಗೂಡಾಚಾರಿ ಪಡೆಯನ್ನು ಅಲ್ಲಿ ಬೀಡು ಬಿಟ್ಟು ಬಿಡಿಸಿ ಪರೀಕ್ಷೆ ಮಾಡಲು ಮುಂದಾದನು.ಆದರೆ ಸರಿಯಾದ ಸಮಯಕ್ಕೆ ಪ್ರಜ್ಞೆ ತಪ್ಪಿ ಮಲಗಿದ್ದರಂತೆ.ಯಥಾವತ್ತಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಪೂಜಾ ಕಾರ್ಯಕ್ರಮಗಳು ಹೀಗೆ ಅನೇಕ ಜನರು ವೈಜ್ಞಾನಿಕ ರಹಸ್ಯವನ್ನು ಭೇದಿಸಲು ರಹಸ್ಯವನ್ನು ಭೇದಿಸಲು, ಸಂಶೋಧಿಸಲು ಅಸಾಧ್ಯವಾದದ್ದು ಎಂದು ಸಾಬೀತಾಯಿತು. ಹೀಗೆ ಅನೇಕ ಪ್ರಯತ್ನಗಳು ಜರುಗಿದರೂ ಕೂಡ ಸರಿಯಾದ ಬ್ರಾಹ್ಮೀ ಸಮಯದಲ್ಲಿ ಇವರ ಕಣ್ಣ ರೆಪ್ಪೆಗಳು ಮುಚ್ಚಿಕೊಂಡು ನಿದ್ರಾವಸ್ಥೆಯಲ್ಲಿ ತೆರಳುತ್ತಿದ್ದರಂತೆ .ಪ್ರತಿನಿತ್ಯ ಇದೇ ರೀತಿಯಾಗಿ ಜರುಗುತ್ತದೆ. ಕಣ್ಣು ರೆಪ್ಪೆಯನ್ನು ತೆಗೆದು ನೋಡುವಷ್ಟರಲ್ಲಿ ಯಥಾವತ್ತಾಗಿ ಲಿಂಗಕ್ಕೆ ಅಭಿಷೇಕ ಸುಂದರ ಪುಷ್ಪಗಳ ಅಲಂಕಾರ ಆಗಿರುತ್ತದೆ.

 

 

ಇಲ್ಲಿನ ಜನರ ಅಭಿಪ್ರಾಯದ ಪ್ರಕಾರ ಇಲ್ಲಿನ ಸ್ಥಳೀಯರ ಹೇಳುವ ಪ್ರಕಾರ ತ್ರೇತಾಯುಗದಲ್ಲಿ ರಾವಣನ ತಮ್ಮನಾದ ವಿಭೀಷಣನು ಇಲ್ಲಿ ನೆಲೆಸಿದ್ದನು.ಹಾಗೆ ಅವನು ಪ್ರತಿನಿತ್ಯ ಶಿವಭಕ್ತನಾಗಿದ್ದರಿಂದ ಶಿವನ ಪೂಜೆಯನ್ನು ಮಾಡುತ್ತಿದ್ದನೆಂದು ಹೇಳಲಾಗುತ್ತದೆ. ಅಂದಿನಿಂದ ಆ ಶಿವಲಿಂಗದ ಮೇಲೆ ನೀರಿನ ಬಿಂದುಗಳಿಂದ ಅಭಿಷೇಕ ಜರುಗುತ್ತಲೇ ಇದೆ ಎಂದು ಹೇಳುತ್ತಾರೆ ಇಲ್ಲಿನ ಜನರು. ಈ ಲಿಂಗದ ಸ್ಥಾಪನೆ ಆಗಿದೆ ಎಂದು ಹೇಳಲಾಗುತ್ತದೆ. ಪೂಜಾ ಕೈಂಕರ್ಯಗಳನ್ನು ಮುಗಿಸಿಕೊಂಡು ಹೋಗುತ್ತಾನೆ ಎಂದು ಜನರು ವಿಶ್ವಾಸ ಪಡುತ್ತಾರೆ.
ಇನ್ನು ಕೆಲವರು ಹೇಳು ಜನರು ಹೇಳುವ ಪ್ರಕಾರ ಇಲ್ಲಿರುವ ಸಾಧು ಸಂತನಾದ ರಾಮ್ ದಾಸ್ ಜಿ ಮಹಾರಾಜ್ ಎಂಬುವವರು ಪ್ರತಿನಿತ್ಯ ಆ ಪರಮೇಶ್ವರನ ಲಿಂಗಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಬಂದು ತಮ್ಮ ಪೂಜಾ ಕೈಂಕರ್ಯಗಳನ್ನು ಮುಗಿಸಿಕೊಂಡು ಪೂಜಿಸಿ ಮರಳಿ ಬಿಡುತ್ತಾರೆ. ಅವರು ಯಾರ ಕಣ್ಣಿಗೂ ಗೋಚರವಾಗುವುದಿಲ್ಲ ಎಂದು ಹೇಳುತ್ತಾರೆ. ಹೀಗೆ ಕ್ರಮೇಣ ಆತ ತನ್ನ ಶರೀರವನ್ನು ತ್ಯಜಿಸಿದರು ಆತ್ಮರೂಪದಲ್ಲಿ ಅಂದರೆ ಆದೃಶ್ಯ ರೂಪದಲ್ಲಿ ಬಂದು ಪ್ರತಿನಿತ್ಯ ಪೂಜೆ ಮಾಡಿಕೊಂಡು ಹೋಗುತ್ತಾರೆ ಎಂದು ಹೇಳುತ್ತಾರೆ.

ಇಲ್ಲಿರುವ ಸ್ಥಳೀಯರು ಜನರು ಆ ಶಿವಲಿಂಗದ ಮೇಲೆ ಅದೆಷ್ಟೋ ಬಾರಿ ನಾಗರಹಾವು ಓಡಾಡುವುದನ್ನು ಕಣ್ಣುಗಳಿಂದಲೇ ನೋಡಿದ್ದೇವೆ ಎಂದು ಹೇಳುತ್ತಾರೆ . ಇದು ಕೆಲವು ಹೊತ್ತು ನಿಂತು, ನೃತ್ಯ ಮಾಡಿ ಆನಂದಿಸಿ ಅದೃಶ್ಯವಾಗಿ ಹೋಗುತ್ತದೆ. ಈ ದೇವಾಲಯಕ್ಕೆ ಹೋಗಲೂ ಕೂಡ ಅಷ್ಟೇ ಕಷ್ಟವನ್ನು ಪಡುತ್ತಿದ್ದರು.ಯಾಕೆಂದರೆ ಮಾರ್ಗ ಅಷ್ಟೊಂದು ಸುಲಭವಾಗಿ ಇರಲಿಲ್ಲ. ಆಗಿನ ಕಾಲಕ್ಕೆ ಹೋಲಿಸಿಕೊಂಡರೆ ಈಗ ಸ್ವಲ್ಪ ಮಾರ್ಗ ಸುಲಭವಾಗಿದೆ.ಈ ರಹಸ್ಯವನ್ನು ತಿಳಿದುಕೊಳ್ಳಲು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಅಲ್ಲದೆ ಕಾರ್ತಿಕ ಮಾಸದಲ್ಲಿ,ಶ್ರಾವಣ ಮಾಸದಲ್ಲಿ ಕೂಡ ವಿಶೇಷ ಭಕ್ತವೃಂದ ಈ ದೇವಾಲಯಕ್ಕೆ ಬರುತ್ತದೆ .

ಅಷ್ಟೇ ಅಲ್ಲದೆ ಇಲ್ಲಿ ಮತ್ತೊಂದು ಅದ್ಭುತವಾದ ವಿಚಾರವಿದೆ. ಅದೇನೆಂದರೆ ಇಲ್ಲಿರುವ ಬಿಲ್ವವೃಕ್ಷದಲ್ಲಿ ಒಂದು ವಿಶೇಷತೆ ಇದೆ. ಸಾಮಾನ್ಯವಾಗಿ ಬಿಲ್ವವೃಕ್ಷದ ಮರ ಮೂರು ಎಲೆಯ ಸಮೂಹಗಳನ್ನು ಒಂದಿರುತ್ತದೆ. ಆದರೆ ಇಲ್ಲಿರುವ ಬಿಲ್ವವೃಕ್ಷದಲ್ಲಿ 5 ರಿಂದ 7 ಎಲೆಗಳ ಸಮೂಹಗಳನ್ನು ಹೊಂದಿರುತ್ತದೆ . ಮತ್ತೊಂದು ವಿಚಿತ್ರ ಏನೆಂದರೆ ಇಲ್ಲಿ ಶಿವಲಿಂಗಕ್ಕೆ ಏರಿಸಿದ ಬಿಲ್ವ ದಳದ ಸಮೂಹದಲ್ಲಿ 21 ಎಲೆಯ ಸಮೂಹವನ್ನು ಕೂಡ ನೋಡಬಹುದು. ಈ ವಿಚಿತ್ರ ನೋಡುವ ವಿಚಿತ್ರ ಕಾಣಿ ಸಿಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಹೀಗೆ ಅತ್ಯಂತ ಮಹಿಮಾನ್ವಿತವಾದ ಈ ಲಿಂಗಕ್ಕೆ ಯಾರು ಪರಮೇಶ್ವರನಿಗೆ ಪೂಜೆ ಮಾಡುತ್ತಾರೆ ಎನ್ನುವುದೇ ರಹಸ್ಯವಾಗಿದೆ.ಅನೇಕ ಚಿರಂಜೀವಿಗಳಲ್ಲಿ ಒಬ್ಬನಾದ ವಿಭೀಷಣನೇ ಅಥವಾ ಸಾವಿರಾರು ವರ್ಷಗಳಿಂದ ತಪಸ್ಸು ಮಾಡಿರುವ ಸಾಧು ಸಂತರೇ ಎನ್ನುವುದೇ ಪ್ರಶ್ನೆಯಾಗಿ ಉಳಿದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top