fbpx
ಸಮಾಚಾರ

ಧರ್ಮದ ಹೆಸರಿನಲ್ಲಿ ಜನರ ಹಣ ದೋಚಿದ IMA

ಸಾವಿರಾರು ಕೋಟಿ ಹಣಕ್ಕೆ ಟೋಪಿ ಹಾಕಿ ಪರಾರಿಯಾಗಿರುವ ‘ಐಎಂಎ ಜ್ಯುವೆಲ್ಸ್’ ಕಂಪನಿ ಮಾಲೀಕ ಮಹಮದ್‌ ಮನ್ಸೂರ್‌ ಖಾನ್‌ ಧರ್ಮದ ಹೆಸರಿನಲ್ಲಿ ಗ್ರಾಹಕರನ್ನು ಮೋಡಿ ಮಾಡುತ್ತಿದ್ದರು. ಯಾವ ಕಾರಣಕ್ಕೂ ಮೋಸ ಆಗುವುದಿಲ್ಲ ಎಂದು ನಂಬಿ ಜನ ಹೂಡಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಮನ್ಸೂರ್‌ ಖಾನ್‌ ಧರ್ಮಗುರುಗಳನ್ನೂ ದಾರಿ ತಪ್ಪಿಸಿದ್ದ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.

ಹೂಡಿಕೆ ಮಾಡಲು ಕಂಪನಿ ಕಚೇರಿಗೆ ಬರುತ್ತಿದ್ದ ಗ್ರಾಹಕರಿಗೆ ಕುರಾನ್‌ ಗ್ರಂಥಗಳನ್ನು ಕೊಡಲಾಗುತಿತ್ತು. ಇದಕ್ಕಾಗಿ ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯ ಗ್ರಂಥಗಳನ್ನು ಇಡಲಾಗಿತ್ತು. ಮೌಲ್ವಿಗಳಿಂದ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗುತಿತ್ತು. ಹೂಡಿಕೆದಾರರನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಹೀಗೆ ಮಾಡಲಾಗುತ್ತಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವ್ಯಾಪಾರ ವಹಿವಾಟಿನ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲದ ಧರ್ಮಗುರುಗಳಿಗೆ ಮನ್ಸೂರ್‌ ಲಾಭ ನಷ್ಟದ ಪಾಠ ಮಾಡಿದ್ದ. ಈತ ಹೇಳಿದ್ದನ್ನೆಲ್ಲಾ ಅವರೂ ನಂಬಿದ್ದರು. ಜನಾಂಗದ ಬಡವರಿಗೆ ಅನುಕೂಲ ಆಗುತ್ತದೆ ಎಂದೇ ನಂಬಿದ್ದರು. ಸಾರ್ವಜನಿಕವಾಗಿ ಮನ್ಸೂರ್‌ ಮತ್ತು ಐಎಂಎಯನ್ನು ಹೊಗಳಿದರು. ಇದು ಹೂಡಿಕೆದಾರರಿಗೆ ಒಂದು ರೀತಿ ಫತ್ವಾದಂತೆ ಕೆಲಸ ಮಾಡಿತ್ತು. ಈಗ ಧರ್ಮಗುರುಗಳೇ ತಲೆ ಮೇಲೆ ಕೈ ಹೊತ್ತುಕೊಂಡು ಮನ್ಸೂರ್‌ಗೆ ಶಪಿಸುತ್ತಾ ಕುಳಿತಿದ್ದಾರೆ.

ನೀವು ಸಮುದಾಯದವರಿಗೆ ಹೇಳಿದರೆ ಸಮುದಾಯದ ಹಣವನ್ನು ಸಮುದಾಯದ ಬೆಳವಣಿಗೆಗೇ ಬಳಸಬಹುದು ಎಂದು ಧರ್ಮಗುರುಗಳಿಗೆ ಪಾಠ ಮಾಡಿದ್ದ. ಇದನ್ನು ನಂಬಿದ್ದ ಧಾರ್ಮಿಕ ಮುಖಂಡರು ಸಮುದಾಯದ ಮಂದಿಯನ್ನೂ ನಂಬಿಸಿದರು. ಇದರ ಪರಿಣಾಮವಾಗಿಯೇ ಈಗ ಸಾವಿರಾರು ಕುಟುಂಬಗಳು ಬೀದಿಗೆ ಬರುವಂತಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top