fbpx
ಸಮಾಚಾರ

ರೌಡಿಗಳ ಮೂಲಕ ಜನಗಳ ಹಣ ಲೂಟಿ ಮಾಡುತ್ತಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು

ಟ್ರಾಫಿಕ್ ಪೊಲೀಸರೆಂದರೆ ಹಣ ವಸೂಲಿ ಮಾಡುವವರು ಎಂಬ ಭಾವನೆ ಸಮಾಜದಲ್ಲಿ ದಟ್ಟವಾಗಿ ಹರಡಿದೆ. ಇದೀಗ ಈ ಕೂಗು ಮತ್ತೆ ಕೇಳಿಬಂದಿದ್ದು ಬೆಂಗಳೂರು ಟ್ರಾಫಿಕ್ ಪೊಲೀಸರು ಲೋಕಲ್ ರೈಡಿಗಳ ಜೊತೆ ಕೈಜೋಡಿಸಿ ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ರಹಸ್ಯ ಕಾರ್ಯಾಚರಣೆ ನಡೆಸಿ ಬಯಲು ಮಾಡಿದೆ.

ರಾಜಧಾನಿ ಬೆಂಗಳೂರಲ್ಲಿ ಪಾರ್ಕಿಂಗ್​ ಎಂಬುದು ದೊಡ್ಡ ಸಮಸ್ಯೆ. ಇಕ್ಕಾಟ್ಟಾದ ರಸ್ತೆ, ರಸ್ತೆ ಬದಿ ಅಂಗಡಿಗಳಿಂದ ವಾಹನ ಪಾರ್ಕಿಂಗ್​ಗೆ ಜಾಗವೇ ಇಲ್ಲ. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿದು, ಜನಜಾಗೃತಿ ಮೂಡಿಸಬೇಕಾದ ಸಂಚಾರಿ ಪೊಲೀಸರೇ ಇದನ್ನ ದುರ್ಬಳಕೆ ಮಾಡ್ಕೊಂಡು ಸಾರ್ವಜನಿಕರನ್ನ ವಸೂಲಿ ಇಳಿದಿದ್ದಾರೆ ಅಷ್ಟೇ ಅಲ್ಲದೆ ಸರ್ಕಾರವನ್ನೂ ಭಾರೀ ವಂಚಿಸುತ್ತಿದ್ದಾರೆ.

ನೋ ಪಾರ್ಕಿಂಗ್ ಜಾಗದಲ್ಲಿ ನಿಮ್ಮ ವಾಹನಗಳನ್ನು ನಿಲ್ಲಿಸಿದಾಗ ಅದಕ್ಕೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ದಂಡ ಹಾಕುತ್ತಿದ್ದಾರೆ. ನಿಗಧಿತ ಪ್ರಮಾಣದ ಹಣಕ್ಕೆ ಮಾತ್ರ ರಶೀದಿಯನ್ನು ನೀಡಿ ಅದಕ್ಕಿಂತಲೂ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಕೇಳಿದರೆ ಕ್ಯಾರಿ (Carry) ಚಾರ್ಜ್ ಎಂದು ಹೇಳಿದ್ದಾರಂತೆ.. ಹಣವನ್ನು ಕೂಡ ಪೊಲೀಸರು ಪಡೆದುಕೊಳ್ಳದೇ ವಾಹನಗಳನ್ನ ಹೊತ್ತು ಸಾಗಿಸೋ ದೊಡ್ಡ ವಾಹನದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಪಡೆದುಕೊಳ್ಳುತ್ತಿದ್ದಾರಂತೆ.

ಹಣಪಡೆದ ವ್ಯಕ್ತಿಗಳು ಪೋಲೀಸರ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಜನಸಾಮ್ಯಾರಿಗೂ ಮತ್ತು ಸರ್ಕಾರಕ್ಕೂ ಯಾಮಾರಿಸುತ್ತಿದ್ದಾರೆ ಎಂಬ ಆರೋಪವನ್ನು ಮಾಡಲಾಗಿದೆ… ಈ ಬಗ್ಗೆ ಪೊಲೀಸ್ ಉನ್ನತ ಅಧಿಕಾರಿಗಳು ಸೂಕ್ತವಾದ ತನಿಖೆ ನಡೆಸಿ ಹಗಲು ದರೋಡೆಗೆ ಬ್ರೇಕ್ ಹಾಗಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top