fbpx
ಸಮಾಚಾರ

ಕನಸು ನನಸು ಮಾಡಿಕೊಂಡ ಬಿಗ್‌ ಬಾಸ್ ಸ್ಪರ್ಧಿ ಅಕ್ಷತಾ.

ಬಿಗ್ ಬಾಸ್ ಸೀಸನ್ 6 ಖ್ಯಾತಿಯ ಸ್ಪರ್ಧಿ ಅಕ್ಷತಾ ಪಾಂಡವಪುರ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ರಂಗಭೂಮಿ ಹಿನ್ನಲೆಯಿಂದ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಆಗಮಿಸಿದ ಅಕ್ಷತಾ ಇಂದು ತನ್ನದೇ ಸ್ಟುಡಿಯೋ ತೆರೆದಿದ್ದಾರೆ.

 

 

‘I am an actor’ ಹೆಸರಿನ ಆ್ಯಕ್ಟಿಂಗ್ ಸ್ಟುಡಿಯೋ ಸ್ಟಾರ್ಟ್ ಮಾಡಿದ್ದಾರೆ. ಈ ಮೂಲಕ ಅಕ್ಷತಾ ಅವರ ಮಾರ್ಗದರ್ಶನದಲ್ಲಿ ನಟನೆಗೆ ಸಂಬಂಧಿಸಿದ ಎಲ್ಲಾ ವಿಚಾಗಳನ್ನು ಈ ಸ್ಟುಡಿಯೋದಲ್ಲಿ ಹೇಳಿಕೊಡಲಾಗುತ್ತಂತೆ. ಅಭಿನಯದ ಜೊತೆಗೆ ಅಡುಗೆ ಕೂಡ ಇರಲಿದೆಯಂತೆ. ಬಿಗ್ ಬಾಸ್ ಮನೆಯಲ್ಲಿ ರುಚಿಯಾಗಿ ಅಡುಗೆ ಮಾಡಿ ಸ್ಪರ್ಧಿಗಳಿಗೆ ಬಡಿಸುತ್ತಿದ್ದ ಅಕ್ಷತಾ ಅದೇ ಧೈರ್ಯದ ಮೇರೆಗೆ ಅಕ್ಷತಾ ‘Cafe! Akshatha’s Kitchen’ ಹೆಸರಿನ ಕೆಫೆಯನ್ನು ಕೂಡ ತೆರೆದಿದ್ದಾರೆ. ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್‌ ಟೌನ್‌ಶಿಪ್‌ನಲ್ಲಿ ಉದ್ಘಾಟಿಸಿದ್ದಾರೆ.

3 ತಿಂಗಳ ನಟನಾ ತರಬೇತಿಯನ್ನು ಎರಡು ಬ್ಯಾಚ್‌ ಆಗಿ ವಿಂಗಡ ಮಾಡಲಾಗುತ್ತದೆ. ವಾರದಲ್ಲಿ 5 ದಿನಗಳ ಕಾಲ ನಡೆಯುವ ತರಬೇತಿಯಲ್ಲಿ 10 ಜನ ಭಾಗಿಯಾಗಬಹುದು ಹಾಗೂ ವೀಕೆಂಡ್‌ನಲ್ಲಿ ನಡೆಯುವುದರಲ್ಲೂ 10 ಜನ ಭಾಗಿಯಾಗಬಹುದು. ಇದರಲ್ಲಿ ಭಾಗಿಯಾಗಲು ಇಚ್ಛಿಸುವವರು channeltheater@gmail.com ಗೆ ಇ-ಮೇಲ್ ಮಾಡಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top