fbpx
ಸಮಾಚಾರ

ಅಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ವೆಂಕಯ್ಯ ನಾಯ್ಡು ಬಾಯಲ್ಲಿಯೇ ಕನ್ನಡ ಮಾತನಾಡಿದ ಕರ್ನಾಟಕದ ಸಂಸದ.

ತಾವು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಕ್ಷಣದಿಂದಲೂ ಒಂದರ ಹಿಂದೊಂದು ಕನ್ನಡ ಮತ್ತು ಕರ್ನಾಟಕ ಪರ ಕೆಲಸಗಳನ್ನು ಕೈಗೊಳ್ಳುತ್ತಿರುವ ಸಂಸದ ಜಿಸಿ ಚಂದ್ರಶೇಖರ್ ಅವರು ಮತ್ತೊಮ್ಮೆ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

 

 

ಚಂದ್ರಶೇಖರ್ ಅವರು ಕನ್ನಡದಲ್ಲಿ ಭಾಷಣ ಮಾಡಿದಾಗಲೆಲ್ಲಾ ಸಭಾಪತಿ ಆಗಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕನ್ನಡದಲ್ಲೇ ಪ್ರತಿಕ್ರಿಯಿಸಿದ್ದಾರೆ. ಮೊದಲ ಬಾರಿಗೆ ಜಿಸಿ ಚಂದ್ರಶೇಖರ್ ಅವರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದಾಗ ವೆಂಕಯ್ಯ ನಯದು “ವೆರಿ ಗುಡ್ ಕನ್ನಡ” ಎಂದು ಹೇಳಿದ್ದರು.

ಎರಡನೇ ಸಲ ಐಬಿಪಿಎಸ್ ವಿಚಾರವಾಗಿ ಕಳೆದ ವರ್ಷ ಚಂದ್ರಶೇಖರ್ ಅವರು ಕನ್ನಡದಲ್ಲೇ ಮಾತನಾಡಿದಾಗ ವೆಂಕಯ್ಯ ” ಧನ್ಯವಾದಗಳು ಶುಭವಾಗಲಿ” ಎಂದಿದ್ದರು. ಈಗ ಮೊನ್ನೆ ಕೂಡ ಸದನದಲ್ಲಿ ಮಾತನಾಡಿದ್ದ ಚಂದ್ರಶೇಖರ್ ಮತ್ತೊಮ್ಮೆ ಐಬಿಪಿಎಸ್ ಮತ್ತು ಕರ್ನಾಟಕ ನಾಡಧ್ವಜದ ಬಗ್ಗೆ ಸಂಸತ್ ನಲ್ಲಿ ಕನ್ನಡದಲ್ಲೇ ಮಾತನಾಡಿದ್ದರು ಈಗಲೂ ಕೂಡ ವೆಂಕಯ್ಯ ನಾಯ್ಡು ಜಿಸಿ ಅವರಿಗೆ “ಆಯಿತು” ಎಂದು ಕನ್ನಡದಲ್ಲೇ ಉತ್ತರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top