fbpx
ಸಮಾಚಾರ

ಕರುನಾಡ ವೀರಯೋಧನಿಗೆ 1 ಲಕ್ಷ ರೂ ಚೆಕ್ ವಿತರಿಸಿದ ಐಎಎಸ್ ಅಧಿಕಾರಿ ಸಲ್ಮಾ ಫಾಹಿಂ

ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶದ ಜನರ ರಕ್ಷಣೆಗಾಗಿ ಗಡಿಯಲ್ಲಿ ಹಗಲಿರುಳು ಎನ್ನದೇ ಕಾಯುತ್ತಾರೆ. ನಮ್ಮ ಸೈನಿಕರ ಧಮನಿಧಮನಿಯಲ್ಲಿ ರಾಷ್ಟ್ರೀಯತೆಯೇ ತುಂಬಿವೆ. ದೇಶಕ್ಕೋಸ್ಕರ ತಮ್ಮ ಪ್ರಾಣವನ್ನೇ ಅರ್ಪಿಸಲು ಸಿದ್ಧರಿರುವ ಮಹಾನ್ ಚೇತನಗಳು..!! ನಮ್ಮ ದೇಶದ ಸೈನಿಕರ ವೀರಗಾಥೆಗಳನ್ನು ಕೇಳುತ್ತಾ ಹೋದರೆ ರೋಮಾಂಚನವಾಗುತ್ತೆ.

 


ಶಿವಮೊಗ್ಗ ಮೂರ್ತಿ ಅವರು ಕೂಡ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೀರಯೋಧ. ಒಮ್ಮೆ ಅವರು ಗಡಿಯಲ್ಲಿ ಕಾಯಲು ಹೋಗುತ್ತಿರುವ ವೇಳೆ ಜಮ್ಮು ಕಾಶ್ಮೀರದಲ್ಲಿ ಉಗ್ರರು ಅವರಿದ್ದ ವಾಹನದ ಮೇಲೆ ದಾಳಿ ಮಾಡಿದ್ದರು. ಯೋಧರು ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಮೂರ್ತಿ ಅವರಿಗೆ ಗುಂಡು ಬಿದ್ದಿತ್ತು. ಕುತ್ತಿಗೆ ಭಾಗದಲ್ಲಿ ಗುಂಡು ಬಿದ್ದು ಜೀವಕ್ಕೆ ಕುತ್ತು ತಂದುಕೊಂಡಿದ್ದ ಮೂರ್ತಿ ಅವರು ಸಾವು ಬದುಕಿನ ನಡುವೆ ಹೋರಾಡಿ ಕೊನೆಗೂ ಬದುಕುಳಿದ್ದರು. ಆದರೆ ಅವರಿಗೆ ಬಿದ್ದಿರುವ ಗುಂಡನ್ನು ಈಗಲೂ ಆಚೆಗೆ ತೆಗೆದಿಲ್ಲ. ಒಂದು ವೇಳೆ ತಗೆದರೆ ಅವ್ರ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ವೈದ್ಯರು ಹೇಳಿದ್ದರಿಂದ ಗುಂಡು ಅವರ ಕುತ್ತಿಗೆಯಲ್ಲಿಯೇ ಉಳಿದುಕೊಂಡಿದೆ.

ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಉಗ್ರರ ವಿರುದ್ಧ ಹೋರಾಡಿದ ಎಸ್. ಮೂರ್ತಿ ಅವರ ದೇಶಭಕ್ತಿ ಮತ್ತು ವೀರತನವನ್ನು ಮೆಚ್ಚಿಕೊಂಡಿರುವ ಕೇಂದ್ರ ಸರ್ಕಾರ ಅವರಿಗೆ ಒಂದು ಲಕ್ಷ ರೂ ನಗದು ನೀಡಿ ಪ್ರೋತ್ಸಾಹಿಸಿದೆ. ಐಎಎಸ್ ಅಧಿಕಾರಿ ಸಲ್ಮಾ ಫಹೀಮ್ ಅವರು ಚೆಕ್ ವಿತರಣೆ ಮಾಡುವ ಮೂಲಕ ವೀರ ಯೋಧ ಮೂರ್ತಿ ಅವರನ್ನು ಪ್ರೋತ್ಸಾಹಿಸಿದರು.. ಈ ವೇಳೆ ಸಲ್ಮಾ ಫಾಹಿಮ್ ಅವರು ಮೂರ್ತಿ ಅವರ ಗುಣಗಾನ ಮಾಡಿದ್ದಾರೆ.

ಮೂರ್ತಿ ಮತ್ತು ಅವರ ಧರ್ಮಪತ್ನಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top