fbpx
ಸಮಾಚಾರ

“ಪಾರ್ಸಲ್ ಮಾಡಲು ಪ್ಲ್ಯಾಸ್ಟಿಕ್​ ಬದಲು ಬಾಳೆಎಲೆ ಬಳಸಿ”- ಶಾಸಕ ಕಾಮತ್ ಮನವಿಗೆ ಸ್ಪಂದಿಸಿದ ‘SWIGGY’

ನಾವಿರೋ ಸ್ಥಳಕ್ಕೆ ಊಟ ತಿಂಡಿಯನ್ನು ತರಿಸಿಕೊಂಡು ತಿನ್ನುವುದು ಇತ್ತೀಚಿಗಿನ ಟ್ರೆಂಡ್​ ಆಗಿದೆ. ಮನೆಯಂಗಳಕ್ಕೆ ನಿಮ್ಮಿಷ್ಟದ ಊಟ ಡೆಲಿವರಿ​ ಮಾಡೋಕಂತಲೇ ಝೋಮೆಟೋ, ಸ್ವಿಗ್ಗಿ, ಊಬರ್ ನಂತಹ ಸಂಸ್ಥೆಗಳು ಸಕ್ರಿಯವಾಗಿವೆ. ಆದರೆ ಆಹಾರ ಪದಾರ್ಥಗಳನ್ನು ನಮ್ಮ ಬಳಿಗೆ ತಂದು ಕೊಡುವಾಗ ಪ್ಲ್ಯಾಸ್ಟಿಕ್​ ಕವರ್ ನಲ್ಲಿಯೇ ಪ್ಯಾಕ್ ಮಾಡಲಾಗುತ್ತದೆ. ಇದನ್ನು ಗಮನಿಸಿರುವ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್​ ಪ್ಲಾಸ್ಟಿಕ್ ಬದಲು ಬಾಳೆಎಲೆ ಬಳಸುವಂತೆ ಆನ್ಲೈನ್ ಫುಡ್ ಡೆಲಿವೆರಿ ಕಂಪನಿಗಳಿಗೆ ಮನವಿ ಮಾಡಿದ್ದಾರೆ.

 

 

ಶಾಸಕ ವೇದವ್ಯಾಸ ಕಾಮತ್ ತಮ್ಮ ಫೇಸ್​ಬುಕ್ ಖಾತೆಯಲ್ಲಿಈ ಬಗ್ಗೆ ಪೋಸ್ಟ್ ಮಾಡಿದ್ದು ಅದಕ್ಕೆ ಪ್ರಮುಖ ಫುಡ್ ಡೆಲಿವರಿ ಕಂಪೆನಿಗಳಲ್ಲಿ ಒಂದಾಗಿರುವ ಸ್ವೀಗ್ಗಿ ಪ್ರತಿಕ್ರಿಯೆ ನೀಡಿದೆ. “ಮಂಗಳೂರಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಯಂತ್ರಿಸುವ ಅಗತ್ಯವಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ನಗರದ ಹೋಟೆಲ್​​ನಲ್ಲಿ ಪಾರ್ಸೆಲ್ ಮಾಡುವ ವೇಳೆ ಸಾಧ್ಯವಿರುವ ಆಹಾರವನ್ನು ಪ್ಲಾಸ್ಟಿಕ್ ಬದಲಿಗೆ ಬಾಳೆ ಎಲೆಯಲ್ಲಿ ಪ್ಯಾಕ್ ಮಾಡಿ ನೀಡಿದರೆ ಉತ್ತಮ.ತುಳುನಾಡಿನ ತಿಂಡಿಗಳು ಅತ್ಯಂತ ಪ್ರಸಿದ್ಧಿಯಾಗಿದೆ. ಈ ತಿಂಡಿಗಳು ಘಮ ಸಹ ಅಷ್ಟೇ ಜನಪ್ರಿಯ. ಹೀಗಾಗಿ ಪಾರ್ಸೆಲ್ ನೀಡುವ ಸಂದರ್ಭದಲ್ಲಿ ಬಾಳೆ ಎಲೆಯಲ್ಲಿ ತಿಂಡಿಯನ್ನು ಪ್ಯಾಕ್ ಮಾಡಿದರೆ ತಿಂಡಿ ರುಚಿಕರವಾಗಿರುತ್ತದೆ” ಎಂದು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಬರೆದಿದ್ದಾರೆ.

 

 

ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದಿರುವ ಸ್ವೀಗಿ “ಇದು ನಿಜಕ್ಕೂ ಅದ್ಭುತ ಸಲಹೆ. ನಮ್ಮ ರೆಸ್ಟೋರೆಂಟ್​ಗಳಿಗೆ ಈ ವಿಚಾರವನ್ನು ತಿಳಿಸುತ್ತೇವೆ. ಖಂಡಿತಾ ಇದನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಿದ್ದೇವೆ” ಎಂದು ಹೇಳಿದೆ “ಸ್ವಿಗ್ಗಿ ರಿಪ್ಲೈಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಕಾಮತ್​, “ಆದಷ್ಟು ಬೇಗ ಈ ನಮ್ಮ ಸಲಹೆಯನ್ನು ಕಾರ್ಯಗತಗೊಳಿಸಿ, ಜೊತೆಗೆ ಕಾರ್ಯರೂಪಕ್ಕೆ ಬಂದಾಗ ದಯವಿಟ್ಟು ತಿಳಿಸಿ” ಎಂದು ಧನ್ಯವಾದ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top