fbpx
ಸಮಾಚಾರ

ಗಾಯಕ್ಕೆ ತುತ್ತಾದ ಮತ್ತೊಬ್ಬ ಟೀಂ ಇಂಡಿಯಾ ಆಟಗಾರ ವಿಶ್ವಕಪ್‌ನಿಂದ ಔಟ್-ಕನ್ನಡಿಗ ಮಾಯಾಂಕ್ ಗೆ ಸ್ಥಾನ.

ವಿಶ್ವಕಪ್‍ನಲ್ಲಿ ಭಾರತಕ್ಕೆ ಸಾಲು ಸಾಲು ಗಾಯದ ಸಮಸ್ಯೆ ಕಾಡುತ್ತಿದ್ದು, ಆರಂಭಿಕ ಆಟಗಾರ ಶಿಖರ್ ಧವನ್ ಅವರು ಗಾಯದ ಸಮಸ್ಯೆಯಿಂದ ಹೊರಹೋಗಿದ್ದರು. ಈಗ ಭಾರತಕ್ಕೆ ಮತ್ತೊಂದು ಹೊಡೆತ ಬಿದ್ದಿದ್ದು ಆಲ್‍ರೌಂಡರ್ ವಿಜಯ್ ಶಂಕರ್ ಕೂಡ ಹೊರಹೋಗಿದ್ದಾರೆ.

 

 

 

ಈ ಹಿಂದೆ ಅಭ್ಯಾಸ ಪಂದ್ಯದ ವೇಳೆ ಜಸ್ ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ವಿಜಯ್ ಶಂಕರ್ ಗಾಯ ಮಾಡಿಕೊಂಡಿದ್ದರು. ಇದೀಗ ಮತ್ತೆ ಬುಮ್ರಾ ಎಸೆತದಲ್ಲಿ ಗಾಯಕೊಂಡಿದ್ದರಿಂದ ವಿಜಯ್ ಶಂಕರ್ ಅವರನ್ನು ಟೂರ್ನಿಯಿಂದ ಹೊರ ಬಂದಿದ್ದಾರೆ.

ವಿಜಯ್ ಶಂಕರ್ ಬದಲಿಗೆ ಕರ್ನಾಟಕದ ಬ್ಯಾಟ್ಸ್ ಮನ್ ಮಾಯಾಂಕ್ ಅಗರವಾಲ್ ಟೀಂ ಇಂಡಿಯಾವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. .ಕರ್ನಾಟಕ ತಂಡದ ಆಟಗಾರ ಮಾಯಾಂಕ್ ಅಗರವಾಲ್ 2018ರ ಡಿಸೆಂಬರ್ 26ರಂದು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಟೀಂ ಇಂಡಿಯಾ ತಂಡವನ್ನು ಸೇರಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top