fbpx
ಸಮಾಚಾರ

‘ಮುನಿರತ್ನ ಕುರುಕ್ಷೇತ್ರ’ ಪಾಸ್ ನಲ್ಲಿ ದರ್ಶನ್ ಫೋಟೋನೇ ಇಲ್ಲ- “ಚಿಕ್ಕ ವಿಷಯಗಳಿಗೆ ಬೇಸರ ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ” ಎಂದ ದರ್ಶನ್.

ಬಹು ನಿರೀಕ್ಷಿತ ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ಆಗಸ್ಟ್ 09ರಂದು ಬಿಡುಗಡೆಯಾಗಲಿದ್ದು ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಕೂಡ ರಿಲೀಸ್ ಆಗುತ್ತಿದ್ದು 3D ತಂತ್ರಜ್ಞಾನದಲ್ಲೂ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಅದಕ್ಕೂ ಮುನ್ನ ಅದ್ದೂರಿಯಾಗಿ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಚಿತ್ರತಂಡ ನಿರ್ಧರಿಸಿದ್ದು ಜೂಲೈ 7ರಂದು ಚಿತ್ರದ ಆಡಿಯೋ ಬಿಡುಗಡೆಯಾಗುತ್ತಿದೆ.

 


ದೊಡ್ಡ ಕಾರ್ಯಕ್ರಮದಲ್ಲಿ ಕುರುಕ್ಷೇತ್ರ ಹಾಡುಗಳ ರಿಲೀಸ್ ಆಗಲಿದ್ದು ಈ ಸಮಾರಂಭಾದಲ್ಲಿ ಇಡೀ ಚಿತ್ರರಂಗದ ಗಣ್ಯಾತಿ ಗಣ್ಯರು ಪಾಲ್ಗೊಳ್ಳಲಿದ್ದಾರಂತೆ. ಆದರೆ ಈ ಕಾರ್ಯಕ್ರಮದ ಪಾಸ್ ವಿವಾದ ಸೃಷ್ಟಿ ಮಾಡಿದೆ. ‘ಕುರುಕ್ಷೇತ್ರ’ ಹಾಡುಗಳು ಬಿಡುಗಡೆ ದೊಡ್ಡ ಕಾರ್ಯಕ್ರಮದ ಮೂಲಕ ಆಗುತ್ತಿದೆ. ಈ ಕಾರಣ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾದ ಅಭಿಮಾನಿಗಳು ಪಾಸ್ ಹೊಂದಿರಬೇಕಾಗುತ್ತದೆ. ಆದರೆ, ಪಾಸ್ ಪಡೆದುಕೊಂಡರೂ, ಅಭಿಮಾನಿಗಳ ಬೇಸರ ಪಡುತ್ತಿದ್ದಾರೆ.

 

 

ಡಿಯೋ ರಿಲೀಸ್ ಪಾಸ್ ನಲ್ಲಿ ದರ್ಶನ್ ಫೋಟೋ ಹಾಕಿಲ್ಲ. ಇದನ್ನು ಕಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ದರ್ಶನ್ ತಮ್ಮ ಟ್ವಿಟ್ಟರಿನಲ್ಲಿ, “ಕುರುಕ್ಷೇತ್ರ ಎನ್ನುವುದು ಬಹುತಾರಾಗಣದ ಚಿತ್ರ. ಎಲ್ಲರನ್ನು ಸಮಾನಕಾರವಾಗಿ ಕಾಣಬೇಕೆಂಬ ಸದುದ್ದೇಶದಿಂದ ಯಾವ ತಾರೆಯ ಫೋಟೋಗಳನ್ನು ಪಾಸ್‍ಗಳ ಮೇಲೆ ಪ್ರಿಂಟ್ ಮಾಡಿಲ್ಲ. ಇಂತಹ ಚಿಕ್ಕ ವಿಷಯಗಳಿಗೆಲ್ಲ ಬೇಸರವನ್ನು ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಚಿತ್ರದಲ್ಲಿ ಎಲ್ಲರಿಗೂ ತಕ್ಕ ನ್ಯಾಯವನ್ನು ಒದಗಿಸಲಾಗಿದೆ. ಆರಾಮಾಗಿ ಆಡಿಯೋ ಬಿಡುಗಡೆಯಲ್ಲಿ ಪಾಲ್ಗೊಳ್ಳಿ” ಎಂದು ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top