fbpx
ಸಮಾಚಾರ

ಉತ್ತರ ರಾಜ್ಯಗಳಿಗೆ ಮಾತ್ರ ಅನುಕೂಲವಾಗುವ ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆ.

ಒಂದು ದೇಶ ಒಂದು ತೆರಿಗೆ(ಜಿಎಸ್ ಟಿ) ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ‘ಒಂದು ದೇಶ, ಒಂದು ಪಡಿತರ ಚೀಟಿ’ ವ್ಯವಸ್ಥೆ ಜಾರಿಗೆ ಮುಂದಾಗಿದ್ದು, ಇದಕ್ಕೆ ಒಂದು ವರ್ಷದ ಗಡುವು ನೀಡಿದೆ.

ಒಂದು ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ನಾಗರಿಕರು ದೇಶದ ಯಾವುದೇ ರಾಜ್ಯದಲ್ಲಿ ಬೇಕಾದರೂ ಪಡಿತರ ಪಡೆಯುವ ‘ಒಂದು ದೇಶ ಒಂದೇ ಪಡಿತರ ಚೀಟಿ’ಯೋಜನೆಯನ್ನು 2020ರ ಜೂನ್ 30ರೊಳಗೆ ಜಾರಿಗೆ ತರಬೇಕು ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಕರ್ನಾಟಕ, ಆಂಧ್ರ, ಗುಜರಾತ್‌, ಹರಾರ‍ಯಣ, ಜಾರ್ಖಂಡ್‌, ಮಹಾರಾಷ್ಟ್ರ ಸೇರಿದಂತೆ 10 ರಾಜ್ಯಗಳಲ್ಲಿ ಇಂಥ ಸೌಲಭ್ಯವಿದೆ. ಕರ್ನಾಟಕದಲ್ಲಿ ರೇಷನ್ ಹೊಂದಿರುವವರು ರಾಜ್ಯದಲ್ಲಿ ಎಲ್ಲಿ ಬೇಕಾದರೂ ರೇಷನ್ ಪಡೆಯುವ ಅವಕಾಶ ಹೊಂದಿದ್ದಾರೆ. ಈಗ ಕೇಂದ್ರ ಸರ್ಕಾರ ಇದನ್ನು ದೇಶವ್ಯಾಪಿ ಅನುಷ್ಠಾನಕ್ಕೆ ತರಲು ಹೊರಟಿದೆ.

ಈ ಯೋಜನೆಯಿಂದ ಕೆಲವ ಉತ್ತರ ಭಾರತದ ರಾಜ್ಯಗಳಿಗೆ ಮಾತ್ರ ಅನುಕೂಲವಾಗಲಿದೆ ಎಂಬ ವಾದಗಳು ಕೂಡ ಅದಾಗಲೇ ವ್ಯಕ್ತವಾಗುತ್ತಿದೆ. ಏಕೆಂದರೆ ದೇಶದಲ್ಲಿ ಬಹುತೇಕ ವಲಸೆಗರು ಉತ್ತರ ಭಾರತೀರಗಲಿದ್ದು ಅವರೆಲ್ಲಾ ಇರುವುದು ದಕ್ಷಿಣದ ರಾಜ್ಯಗಳಲ್ಲಿ. ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಉತ್ತರ ಭಾರತದಿಂದ ಬಂದಿರುವ ವಲಸಿಗರೇ ಹೇಚ್ಚಾಗಿದ್ದು ಇಲ್ಲಿಂದ ಉತ್ತರಕ್ಕೆ ಹೋಗಿ ವಾಸಿಸುತ್ತಿರುವ ಜನರ ಸಂಖ್ಯೆ ತುಂಬಾ ಕಡಿಮೆಯಿದೆ.. ವಲಸಿಗರ ಹೆಚ್ಚಳದಿಂದ ಈಗಾಗಲೇ ಕರ್ನಾಟಕದ ಎಲ್ಲಾ ಸೌಲಭ್ಯಗಳನ್ನು ಪಡೆದು ಇಲ್ಲಿನ ಜನರ ಉದ್ಯೋಗಗಳಲ್ಲಿ ವಲಸಿಗರೇ ಆಕ್ರಮಿಸಿಕೊಂಡಿದ್ದಾರೆ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದರೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಾಗಿರುವ ವಲಸಿಗರು ಮತ್ತಷ್ಟು ಹೆಚ್ಚಾಗಿ ಇಲ್ಲಿನ ಜನರ ಕಲ್ಯಾಣಕ್ಕೆ ಪೆಟ್ಟು ಬೀಳಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top