fbpx
ಸಮಾಚಾರ

ವಿದಾಯದ ನಂತರ ನಟನೆಯತ್ತ ಮುಖ ಮಾಡಿದ ಯುವರಾಜ್ ಸಿಂಗ್.

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಯುವರಾಜ್ ಸಿಂಗ್‌ ಅವರು ವಿದಾಯದ ನಂತ್ರ ನಟನೆಯತ್ತ ಮುಖ ಮಾಡಿದ್ದಾರೆ.

ಯುವರಾಜ್ ಸಿಂಗ್ ಹಾಟ್ ಸ್ಟಾರ್​ನಲ್ಲಿ ಪ್ರಸಾರವಾಗುತ್ತಿರುವ ‘ದಿ ಆಫೀಸ್’ ಎಂಬ ನೂತನ ವೆಬ್ ಸಿರೀಸ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿ ಆಫೀಸ್ ಇಂಟರ್​ನ್ಯಾಷನಲ್ ವೆಬ್ ಸಿರೀಸ್ ಆಗಿದ್ದು, ಈಗ ಇದೇ ಹೆಸರಿನಲ್ಲಿ ಭಾರತದಲ್ಲೂ ತಯಾರಾಗಿದೆ. ಈ ಮೂಲಕ ಅಭಿಮಾನಿಗಳೆದರು ಯುವಿ ಮತ್ತೆ ಆ್ಯಕ್ಟಿಂಗ್ ಮೂಲಕ ಮಿಂಚಲಿದ್ದಾರೆ. ದಿ ಆಫೀಸ್ ತಂಡದ ಜೊತೆ ಯುವರಾಜ್ ಒಳಗೊಂಡ ವೀಡಿಯೊವನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ವೀಡಿಯೊದಲ್ಲಿ, ಅವರು ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ. ದಿ ಆಫೀಸ್ ಅಂತರರಾಷ್ಟ್ರೀಯ ಸರಣಿಯ ಅಧಿಕೃತ ರೂಪಾಂತರವಾಗಿದೆ.

ಈ ವೆಬ್ ಸೀರಿಸ್ ಒಟ್ಟು 13 ಸಂಚಿಕೆಗಳನ್ನು ಒಳಗೊಂಡಿರಲಿದೆ. ‘ಇದೊಂದು ಹೊಸ ಪ್ರಯತ್ನ. ಕ್ರಿಕೆಟ್‌ ನನಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಕ್ರಿಕೆಟ್‌ ಹೊರತುಪಡಿಸಿ ಜೀವನದಲ್ಲಿ ಬೇರೆ ಏನನ್ನೂ ಮಾಡಿಲ್ಲ. ಹೀಗಾಗಿ ಹೊಸ ಕಲೆಯತ್ತ ಸಾಗಿದ್ದೇನೆ’ ಎಂದು ಯುವರಾಜ್‌ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ವೆಬ್‌ ಸೀರೀಸ್‌ಗಾಗಿ ಈಗಾಗಲೇ ಸಿದ್ಧತೆ ಆರಂಭಿಸಿರುವ ಯುವರಾಜ್‌, ಕಾಪೋರೇಟ್‌ ಆಫೀಸ್‌ ಸಿಬ್ಬಂದಿಯ ಜೀವನ ಹೇಗಿರಲಿದೆ ಎನ್ನುವುದರ ಅಧ್ಯಯನ ನಡೆಸುತ್ತಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top