fbpx
ಸಮಾಚಾರ

“ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್” ದರ್ಶನ್ ಟ್ವೀಟ್ ಬಾಂಬ್.

ಚಾಲೆಂಜಿಂಗ್ ಸ್ಟಾರ್ ಇಂದು ಬೆಳ್ಳಬೆಳಗ್ಗೆಯೇ ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಅದಕ್ಕೆ ಅವರು ಮಾಡಿರುವಂತ ಒಂದ ಟ್ವೀಟ್. ಹೌದು “ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿ ಗೆ ಓಪನ್ ಚಾಲೆಂಜ್” ಎಂದು ಬರೆದು ದರ್ಶನ್ ಟ್ವೀಟ್ ಮಾಡಿದ್ದು, ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

 

 

ಇಂದು ಬೆಳಗ್ಗೆ 6.19ಕ್ಕೆ ದರ್ಶನ್ ಮಾಡಿರುವ ಟ್ವೀಟ್ ಸ್ಯಾಂಡಲ್‍ವುಡ್‍ನಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಅಲ್ಲದೆ ಯಾವ ಸೆಲೆಬ್ರಿಟಿಗೆ ಯಾರು ಚಾಲೆಂಜ್ ಹಾಕುತ್ತಾರೆ? ದರ್ಶನ್ ಅವರೇ ಬೇರೆ ನಟರಿಗೆ ಚಾಲೆಂಜ್ ಮಾಡಲಿದ್ದಾರಾ? ಅಥವಾ ಬೇರೆಯವರ ಚಾಲೆಂಜ್‍ಯನ್ನು ದರ್ಶನ್ ಸ್ವಾಗತಿಸಲಿದ್ದಾರಾ? ಎನ್ನುವ ಹತ್ತಾರು ಪ್ರಶ್ನೆಗಳು ಹುಟ್ಟುಕೊಂಡಿದ್ದು ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟುಕೊಳ್ಳುವ ಹಾಗಾಗಿದೆ.

ಇನ್ನು ಈ ಬಗ್ಗೆ ಮಧ್ಯಾಹ್ನ ಫೇಸ್‍ಬುಕ್ ಲೈವ್ ಬಂದು ಎಲ್ಲಾ ವಿಚಾರವನ್ನು ಹೇಳುತ್ತೇನೆ ಎಂದು ದರ್ಶನ್ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ ಯಾರ ಬಗ್ಗೆ ದರ್ಶನ್ ಟ್ವೀಟ್ ಮಾಡಿದ್ದಾರೆ? ಏನಿದು ವಿಚಾರ ಎಂದು ತಿಳಿಯಲು ಎಲ್ಲರು ಮಧ್ಯಾಹ್ನದವರೆಗೂ ಕಾಯಲೇಬೇಕು.

ಟ್ವೀಟ್‍ನಲ್ಲಿ ಏನಿದೆ?
“ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್‍ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ. ನಿಮ್ಮ ದಾಸ ದರ್ಶನ್” ಎಂದು ಬರೆದು ದರ್ಶನ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top