fbpx
ಸಮಾಚಾರ

ದರ್ಶನ್ ಓಪನ್ ಚಾಲೆಂಜ್ ಹಾಕಿದ್ದು ಈ ‘ಸೆಲೆಬ್ರೆಟಿ’ಗೆ- ಏನಂತಾ ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದಿಢೀರ್ ಟ್ವೀಟ್ ವೊಂದನ್ನು ಮಾಡಿ ಅದರಲ್ಲಿ ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್. ಮಧ್ಯಾಹ್ನ ಫೇಸ್ ಬುಕ್ ಲೈವ್ ಬರುವುದಾಗಿ ಹೇಳಿದ್ದ ದರ್ಶನ್ ಇದೀಗ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

 

 

ದರ್ಶನ್ ಚಾಲೆಂಜ್ ಹಾಕಿದ ಸೆಲೆಬ್ರಿಟಿ ಮತ್ಯಾರು ಅಲ್ಲ ಅದೂ ಅಭಿಮಾನಿಗಳಲು. ದರ್ಶನ್ ಗೆ ಅಭಿಮಾನಿಗಳೆ ಸೆಲೆಬ್ರಿಟಿಗಳು. ಹಾಗಾಗಿ ಅಭಿಮಾನಿ ಸೆಲೆಬ್ರೆಟಿಗಳಿಗೆ ‘ಕುರುಕ್ಷೇತ್ರ’ ಸಿನಿಮಾವನ್ನು ನೋಡುವಂತೆ ಚಾಲೆಂಜ್ ಹಾಕಿದ್ದಾರೆ.

ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ದರ್ಶನ್ ಅವರು ಕುರುಕ್ಷೇತ್ರ ಚಿತ್ರದ ಕುರಿತಂತೆ ಮಾತನಾಡಿದರು. ನನಗೆ ಅಭಿಮಾನಿಗಳೇ ಸೆಲೆಬ್ರಿಟಿ. ಹೀಗಾಗಿ ಕುರುಕ್ಷೇತ್ರ ಚಿತ್ರದ ಕುರಿತು ತಪ್ಪಾಗಿ ಯಾರು ಮಾತನಾಡಬಾರದು. ಕುರುಕ್ಷೇತ್ರ ಚಿತ್ರದಲ್ಲಿ ಅಪ್ಪಾಜಿ(ಅಂಬರೀಶ್), ರವಿಚಂದ್ರನ್, ಅರ್ಜುನ್ ಸರ್ಜಾ ಮತ್ತು ನಿಖಿಲ್ ಸೇರಿದಂತೆ ದೊಡ್ಡ ತಾರಾಗಣವಿದೆ. ಹೀಗಾಗಿ ಇಲ್ಲಿ ಎಲ್ಲಾ ನಟರಿಗೂ ಸಮಾನ ಸ್ಥಾನಗಳಿರುತ್ತವೆ. ಹಾಗಾಗಿ ಎಲ್ಲರನ್ನು ಸಮಾನ ದೃಷ್ಟಿಯಲ್ಲಿ ನೋಡಿ ಸಿನಿಮಾ ನೋಡಬೇಕು ಎನ್ನುವುದು ನನ್ನ ಚಾಲೆಂಜ್” ಎಂದು ಅಭಿಮಾನಿಗಳಿಗೆ ಚಾಲೆಂಜ್ ಹಾಕಿದ್ದಾರೆ.

ಹಾಗಾಗಿ ಟಿಕೆಟ್ ನಲ್ಲಿ ಫೋಟೋ ಹಾಕಿಲ್ಲ, ಕಟೌಟ್ ಹಾಕಿಲ್ಲ ಎಂದು ಬೇಜಾರು ಮಾಡಿಕೊಳ್ಳಬೇಡಿ. ನನಗೆ ಏನು ಗೌರವ ಕೊಡುತ್ತೀರಿ, ಅದೇ ಗೌರವವನ್ನು ಸಿನಿಮಾದ ಎಲ್ಲ ಕಲಾವಿದರಿಗೆ ನೀಡಬೇಕು. ” ಎಂದು ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top