fbpx
ಸಮಾಚಾರ

ಜಾತ್ಯಾತೀತ ಭಾರತ ಪ್ರತಿನಿಧಿಸುತ್ತಿದ್ದೇನೆ ಎಂದಿದ್ದ ನುಸ್ರತ್ ಜಹಾನ್ ಇಸ್ಕಾನ್ ರಥಯಾತ್ರೆಗೆ ವಿಶೇಷ ಅತಿಥಿ.

ನಾನು ಜಾತ್ಯತೀತ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವನರನ್ನು ಇಸ್ಕಾನ್‍ನ ‘ಸಾಮಾಜಿಕ ಸಾಮರಸ್ಯ’ ಕುರಿತ ರಥಯಾತ್ರೆಗೆ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಲಾಗಿದೆ.

ಇಸ್ಕಾನ್ ಅಧಿಕೃತ ಆಹ್ವಾನವನ್ನು ನುಸ್ರತ್ ಜಹಾನ್ ಸ್ವೀಕರಿಸಿದ್ದು, ಧನ್ಯವಾದ ಹೇಳಿದ್ದಾರೆ. 1971ರಿಂದಲೂ ಇಸ್ಕಾನ್ ನಿಂದ ರಾಷ್ಟ್ರಯಾತ್ರೆಯನ್ನು ಆಯೋಜಿಸುತ್ತಾ ಬರಲಾಗಿದ್ದು, 48 ನೇ ಆವೃತ್ತಿಯ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉದ್ಘಾಟಿಸಲಿದ್ದಾರೆ.

 

 

ನುಸ್ರತ್ ಜಹಾನ್ ಅವರು ಹೊಸ ಭಾರತವನ್ನು ಪ್ರತಿನಿಧಿಸುತ್ತಾರೆ, ನಾವೆಲ್ಲರೂ ಅಂತರ್ಗತ ಭಾರತದಲ್ಲಿ ನಂಬಿಕೆ ಇಟ್ಟವರು. ಇತರ ಧರ್ಮಗಳ ನಂಬಿಕೆಗಳನ್ನು ಗೌರವಿಸಬೇಕು. ಅವರ ಹಬ್ಬಗಳಲ್ಲಿ ಭಾಗವಹಿಸುವ ಮೂಲಕ ಭಾರತವನ್ನು ಮತ್ತೆ ಬೆಳಗುವಂತೆ ಮಾಡಬೇಕು. ಇದು ಭಾರತದ ನಿಲುವಾಗಿದೆ, ಈ ನಿಟ್ಟಿನಲ್ಲಿ ನುಸ್ರತ್ ಅವರು ಯುವಕರಿಗೆ ಮಾರ್ಗದರ್ಶಿಯಾಗಿದ್ದಾರೆ ಎಂದು ರಾಧಾರಮಣ ದಾಸ್ ತಿಳಿಸಿದ್ದಾರೆ.

ಏನಿದು ವಿವಾದ:
ನುಸ್ರತ್ ಜಹಾನ್ ಅವರು ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸುವ ವೇಳೆ ಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಮುಸ್ಲಿಂ ಧರ್ಮಗುರುಗಳು ಆಕ್ಷೇಪ ವ್ಯಕ್ತಪಡಿಸಿ, ಫತ್ವಾ ಹೊರಡಿಸಿದ್ದರು.

ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ನುಸ್ರತ್ ಜಹಾನ್ “ಎಲ್ಲರನ್ನೂ ಒಳಗೊಂಡ ಭಾರತ”ದ ಪ್ರತಿನಿಧಿ ಎಂದು ಪ್ರತಿಕ್ರಿಯಿಸಿ, “ಜಾತಿ, ವರ್ಣ, ಧರ್ಮದ ತಡೆಗಳನ್ನು ಮೀರಿ ಎಲ್ಲರನ್ನೂ ಒಳಗೊಂಡ ಭಾರತವನ್ನು ಪ್ರತಿನಿಧಿಸುತ್ತೇನೆ” ಎಂಬ ಹೇಳಿಕೆಯನ್ನು ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದ ನುಸ್ರತ್ ಟ್ವೀಟ್ ಮಾಡಿದ್ದಾರೆ. ‘ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ; ಆದರೆ ಮುಸ್ಲಿಂ ಆಗಿಯೇ ಉಳಿಯುತ್ತೇನೆ” ಎನ್ನುವ ಮೂಲಕ ತಾನೊಬ್ಬ ಜಾತ್ಯಾತೀತ ನಾಯಕಿ ಎಂದು ಸಾರಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top