fbpx
ಸಮಾಚಾರ

ಉತ್ತರ ಕನ್ನಡದ ಪುಟ್ಟ ಕಂದಮ್ಮಗಳ ಕಷ್ಟಕ್ಕೆ ಮಿಡಿದ ಕರ್ನಾಟಕದ ಸಂಸದನಿಗೆ ವಿಶ್ವಾದ್ಯಂತ ಮೆಚ್ಚುಗೆ.

ಸದ್ಯ ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಒಂದು ಊರಿನಿಂದ ಮತ್ತೊಂದು ಊರಿಗೆ ಓದಲು ಹೋಗುವ ಮಕ್ಕಳು ತುಂಬಾ ಕಷ್ಟದಾಯಕ ಸ್ಥಿತಿಯಲ್ಲಿದ್ದಾರೆ. ಅಲ್ಲಿನ ಮಾನವ ನಿರ್ಮಿತ ಕಾಲು ಸೇತುವೆಗಳು ಕೊಚ್ಚಿಹೋಗುತ್ತಿವೆ. ಶಾಲಾ ಮಕ್ಕಳು ತಮ್ಮ ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ತುಂಬಿದ ಹೊಳೆಯನ್ನುಮರದ ದಿಮ್ಮಿಯ ಕಾಲು ಸೇತುವೆ ಸಂಕದಿಂದ ದಾಟುತ್ತಿರುವ ದೃಶ್ಯವನ್ನು ಮತ್ತು ಕಾಲು ಸೇತುವೆಗಳು ಕೊಚ್ಚಿಹೋಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದರು..

 

 

 

 

 

ಮಕ್ಕಳು ಕಷ್ಟ ಪಡುತ್ತಿರುವ ಫೋಟೋಗಳನ್ನು ಮತ್ತು ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ನೋಡಿದ ಸಂಸದ ಜಿಸಿ ಚಂದ್ರಶೇಖರ್ ತಕ್ಷಣವೇ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಕಷ್ಟ ಪಡುತ್ತಿರುವ ಈ ಮಕ್ಕಳಿಗೆ ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದ ಚಂದ್ರಶೇಖರ್ ತಕ್ಷಣವೇ ಕಾಲು ಸೇತುವೆ ನಿರ್ಮಿಸಲು ಸೂಚಿಸಿದ್ದಾರೆ. ಕಾಲು ಸೇತುವೆ ನಿರ್ಮಾಣಕ್ಕಾಗಿ ಅವರ ತಂಡದ ಮೂಲಕ ಹತ್ತು ಲಕ್ಷ ರೂಗಳನ್ನು ಬಿಡುಗಡೆ ಮಾಡಿದ್ದಾರೆ.

 

 

ಸಂಸದರ ನಿಧಿಯಿಂದ ಹತ್ತು ಲಕ್ಷಗಳನ್ನು ಬಿಡುಗಡೆ ಮಾಡಿರುವ ಜಿಸಿ ಚಂದ್ರಶೇಖರ್ ಆದಷ್ಟು ಬೇಗ ಕಾಲು ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.. ಸಂಸದರು ಹತ್ತು ಲಕ್ಷ ರೂಗಳ ಚೆಕ್ ಅನ್ನು ಕೂಡ ಅದಾಗಲೇ ವಿತರಿಸಿದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ನೋಡಿಯೇ ಅವರ ಕಷ್ಟಕ್ಕೆ ಜಿಸಿ ಚಂದ್ರಶೇಖರ್ ಅವ್ರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಂಸದರ ನೆರವಿನಿಂದ ಮಕ್ಕಳು ನಿರಾತಂಕವಾಗಿ ಮುಂದೆ ಶಾಲೆಗೆ ಹೋಗಲು ಸಹಾಯವಾಗಲಿ ಎಂಬುದೇ ನಮ್ಮ ಆಶಯ.

ಸದ್ಯ ಈಗ ಕಾಲು ಸೇತುವೆ ನಿರ್ಮಾಣಕ್ಕೆ ಸಂಸದ ಜಿಸಿ ಚಂದ್ರಶೇಖರ್ ಹತ್ತು ಲಕ್ಶಗಳನ್ನು ಮಾತ್ರ ಬಿಡುಗಡೆ ಮಾಡಿದ್ದು ಇದರಿಂದ ಒಂದು ಸೇತುವೆಯನ್ನು ಮಾತ್ರ ನಿರ್ಮಾಣ ಮಾಡಲು ಆಗುತ್ತದೆ. ಆದರೆ ಉತ್ತರ ಕರ್ನಾಟಕ ತುಂಬಾ ಹಳ್ಳಿಗಳು ಈ ಸಮಸ್ಯೆಯನ್ನು ಎದಿರುಸುತ್ತಿವೆ. ಸ್ಥಳೀಯ ಸಂಸದರಾಗಿರುವ ಅನಂತಕುಮಾರ್ ಹೆಗ್ಡೆ ಆಸ್ಪತ್ರೆ ಕಟ್ಟಿಸುವುದು ನಮ್ಮ ಕೆಲಸವಲ್ಲ ಎಂದು ಹೇಳಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಆಸ್ಪತ್ರೆ ಕಟ್ಟಿಸಲೇ ಹಿಂಜರಿದವರು ಇನ್ನು ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಅವರ ಬಳಿ ಹೋದರೆ ಅವರಿಂದ ಕೆಲಸ ಆಗುವ ಸಾಧ್ಯತೆ ತುಂಬಾ ಕಡಿಮೆ.. ಹಾಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೂದಲು ಈ ಕಡೆ ಗಮನ ಹರಿಸಿ ಹಳ್ಳಿ ಮಕ್ಕಳ ಪ್ರಾಣ ಉಳಿಸಲು ಕ್ರಮ ಕೈಗೊಳ್ಳಬೇಕಿದೆ.

ಇನ್ನು ಈ ವಿಚಾರವಾಗಿ ನೆಟ್ಟಿಗರು ಜಿಸಿ ಚಂದ್ರಶೇಖರ್ ಅವರನ್ನು ಪ್ರಶಂಸಿಸುತ್ತಿದ್ದು ಸ್ಥಳೀಯ ಸಂಸದ ಅನಂತಕುಮಾರ್ ಹೆಗ್ಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top