fbpx
ಸಮಾಚಾರ

ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಡುತ್ತಿರುವ ಡಾ. ರಾಜ್ ಮೊಮ್ಮಗಳ ಫೋಟೋಶೂಟ್- ವಿಡಿಯೋ

ಡಾ. ರಾಜ್‌ಕುಮಾರ್ ಕುಟುಂಬವೇ ಒಂದು ಕಲಾವಿದರ ಕುಟುಂಬ. ಡಾ.ರಾಜ್ ಬಳಿಕ ಅವರ ಮಕ್ಕಳು ನಂತರ ಈಗ ಮೊಮ್ಮಕ್ಕಳು ಚಿತ್ರರಂಗದಲ್ಲಿ ಮೆರೆಯುತ್ತಿದ್ದಾರೆ. ಈಗಾಗಲೇ ವಿನಯ್​ ರಾಘವೇಂದ್ರ ರಾಜ್​ ಕುಮಾರ್​ , ರಾಮ್​ ಕುಮಾರ್​ ಅವರ ಮಗ, ಪಾರ್ವತಮ್ಮ ರಾಜ್ ಕುಮಾರ್ ಅವರ ತಮ್ಮನ ಮಗ ಸೂರಜ್ ಚಿತ್ರರಂಗಕ್ಕೆ ಧುಮುಕಿದ್ದು ಮತ್ತೊಂದು ರಾಜ್ ಕುಂಟುಂಬದ ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಕಾಲ ಸನ್ನಿಹಿತವಾಗಿದೆ.

 

 

ರಾಜ್ ಪುತ್ರಿ ಪೂರ್ಣಿಮಾ ಮತ್ತು ನಟ ರಾಮ್​ಕುಮಾರ್​ ದಂಪತಿಗಳ ಮಗ ಧೀರೆನ್​ ರಾಮ್​ಕುಮಾರ್​ ತಮ್ಮ ಮೊದಲ ಸಿನಿಮಾಸಿತಯಾರಿಯಲ್ಲಿರುವಾಗಲೇ ತಮ್ಮ ಪುತ್ರಿ ಧನ್ಯ ರಾಮ್​ಕುಮಾರ್​ ಅವರನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸುವ ಸೂಚನೆ ನೀಡುತ್ತಿದ್ದಾರೆ.. ಅಣ್ಣನಿಗೆ ಪೈಪೋಟಿ ನೀಡುವ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿರುವ ಧನ್ಯ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ಸಿಗ್ನಲ್ ನೀಡಿದ್ದಾರೆ.. ಸಿಕ್ಕಾಪಟ್ಟೆ ಹಾಟ್’ಆಗಿ ಕಾಣಿಸಿಕೊಂಡಿರುವ ಧನ್ಯ ಫೋಟೋಗಳು ಪಡ್ಡೆಹುಡುಗರ ಕಣ್ಣು ಕುಕ್ಕುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸ್ಯಾಂಡಲ್ವುಡ್ ನ ಸ್ಪರದ್ರೂಪಿ ನಟ ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ ಕುಮಾರ್ ಬೆಳ್ಳಿತೆರೆಯ ಮೇಲೆ ಮಿನುಗಲು ರೆಡಿಯಾಗಿದ್ದಾರೆ. ಮದುವೆಯ ಮಮತೆಯ ಕರೆಯೋಲೆ ಖ್ಯಾತಿಯ ನಾಯಕ ನಟ ಸೂರಜ್ ಗೌಡಗೆ ಜೋಡಿಯಾಗಿ ಧನ್ಯಾ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಸುಮನ್ ಜಾದುಗಾರ್ ಚೊಚ್ಚಲ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಇನ್ನು ಚಿತ್ರೀಕರಣ ಆರಂಭಗೊಂಡಿಲ್ಲ. ಮೊದಲ ಹಂತವಾಗಿ ಚಿತ್ರದ ಟೈಟಲ್ ಕಾರ್ಡ್ ಪೋಸ್ಟರ್ಸ್ ಗಳಿಗಾಗಿ ಚಿತ್ರತಂಡ ಫೋಟೋ ಶೂಟ್ ಮಾಡಿಸಿದ್ದಾರೆ ಈ ವಿಡಿಯೋ ಇದೀಗ ವೈರಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top