fbpx
ಸಮಾಚಾರ

ನಿನ್ನೆ ಮ್ಯಾಚ್​​ ವೇಳೆ ಗಮನ ಸೆಳೆದ 87ರ ವೃದ್ಧೆ ಯಾರು ಗೊತ್ತಾ? ಇವ್ರ ಬಗ್ಗೆ ತಿಳ್ಕೊಂಡ್ರೆ ಹೆಮ್ಮೆ ಪಡ್ತೀರಾ!

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಹಣಾಹಣಿಯಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಸುಮಾರು 87 ವರ್ಷದ ಅಜ್ದಿಯೊಬ್ಬರು ಇದೀಗ ಮಾಧ್ಯಮಗಳ ಕೇಂದ್ರ ಬಿಂದುವಾಗಿದ್ದಾರೆ. ನಡೆದಾಡಲು ಸಾಧ್ಯವಾಗದೆ ವೀಲ್ ಚೇರ್‌ನಲ್ಲಿ ಬಂದು ಭಾರತಕ್ಕೆ ಬೆಂಬಲ ನೀಡಿರುವುದು ನಿಜಕ್ಕೂ ಅಚ್ಚರಿಯೆನಿಸಿದೆ.

ನಿನ್ನೆ ಬರ್ಮಿ‌ಂಗ್‌ ಹ್ಯಾಂನಲ್ಲಿ ನಡೆದ ಮ್ಯಾಚ್​​ನಲ್ಲಿ ಕ್ರಿಕೆಟ್​ಗಿಂತ ಜಾಸ್ತಿ ಹೈಲೈಟ್​ ಆಗಿದ್ದು, ಇಳಿವಯಸ್ಸಿನಲ್ಲೂ ಬತ್ತದ ಉತ್ಸಾಹದೊಂದಿಗೆ ಅಭಿಮಾನ ಪ್ರದರ್ಶಿಸುತ್ತಿದ್ದ ವೃದ್ಧೆ. ಪ್ರತೀ ಬಾರಿ ಓವರ್ ಮುಕ್ತಾಯವಾದಾಗಲೂ ಕ್ಯಾಮೆರಾಗಳ ಕಣ್ಣು ನೇರವಾಗಿ ಅಜ್ಜಿಯತ್ತಲೇ ಹೋಗುತ್ತಿದ್ದು. ಪ್ರತಿ ಬಾಲ್​, ಪೋರ್ ಸಿಕ್ಸ್​ನಲ್ಲೂ 87ರ ಹರೆಯದ ಚಾರುಲತಾ ಪೀ ಪೀ ಊದಿ ಸಂಭ್ರಮಿಸುತ್ತಿದ್ದರು. ಅವರ ಉತ್ಸಾಹ, ಖುಷಿ , ಸಂಭ್ರಮ ಅಷ್ಟೇ ಅಲ್ಲ ಕೊನೆಯಲ್ಲಿ ಇಂಡಿಯಾ ವಿನ್​ ಆಗುತ್ತಿದ್ದಂತೆ ಅಜ್ಜಿ ಕುಣಿದು ಕುಪ್ಪಳಿಸಿದ್ರು.

 

 

 

 

 

87 ವರ್ಷ ವಯಸ್ಸಿನ ಅಜ್ಜಿ ಭಾರತದ ಪರ ಘೋಷಣೆಗಳನ್ನು ಕೂಗುತ್ತಿದ್ದರು. ನಿಲ್ಲಲೂ ಆಗದ ನಡೆಯಲೂ ಆಗದ ಅಜ್ಜಿ ವೀಲ್ ಚೇರ್ ನಲ್ಲಿ ಕ್ರೀಡಾಂಗಣಕ್ಕೆ ಆಗಮಿಸಿ ಭಾರತ ತಂಡಕ್ಕೆ ಬೆಂಬಲ ನೀಡುತ್ತಿದ್ದರು. ಯಾರಿವರು ಎಂದು ಎಲ್ಲಾ ಕ್ರೀಡಾಭಿಮಾನಿಗಳು ಪ್ರಶ್ನಿಸುವಂತೆ ಮಾಡಿದವರು ಮತ್ಯಾರು ಅಲ್ಲ, 87 ರ ಹರೆಯದ ಅನಿವಾಸಿ ಭಾರತೀಯೆ ಚಾರುಲತಾ ಪಟೇಲ್‌.

ಸುದ್ದಿಗಾರರೊಂದಿಗೆ ಮಾತನಾಡಿದ ಚಾರುಲತಾ,”ನಾನು ಹುಟ್ಟಿದ್ದು ತಾಂಜಾನಿಯಾದಲ್ಲಿ. ಆದರೆ ನನ್ನ ತಂದೆ, ತಾಯಿ ಭಾರತದಲ್ಲಿದ್ದರು. ನನಗೆ ಭಾರತದ ಬಗ್ಗೆ ಅಪಾರ ಹೆಮ್ಮೆ ಇದೆ. ಈ ಬಾರಿ ಭಾರತ ವಿಶ್ವಕಪ್‌ ಗೆಲ್ಲುತ್ತದೆ. ನಾನು ದೈವ ಭಕ್ತೆ. ಗಣಪತಿಯಲ್ಲಿ ಪ್ರಾರ್ಥಿಸಿದ್ದು ಈ ಬಾರಿ ಭಾರತ ಕಪ್‌ ಗೆಲ್ಲುತ್ತದೆ. ನಾನು ಯಾವಾಗಲೂ ಭಾರತ ತಂಡವನ್ನು ಆಶೀರ್ವದಿಸುತ್ತೇನೆ ಎಂದಿದ್ದಾರೆ.

ನಾನು ಈ ಹಿಂದೆ ಕೆಲಸ ಮಾಡುತ್ತಿದ್ದಾಗ ಕ್ರೀಡಾಂಗಣಕ್ಕೆ ಆಗಮಿಸಿ ಕ್ರಿಕೆಟ್ ವೀಕ್ಷಣೆ ಮಾಡಲು ಆಗುತ್ತಿರಲಿಲ್ಲ. ಇದೀಗ ನಿವೃತ್ತಿಯಾಗಿದ್ದೇನೆ. ಹೀಗಾಗಿ ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸುತ್ತಿದ್ದೇನೆ. ನನ್ನ ಭಾರತ ತಂಡ ಖಂಡಿತಾ ಗೆಲ್ಲುತ್ತದೆ. ಭಾರತ ತಂಡ ಗೆಲ್ಲಲಿ ಎಂದು ನನ್ನ ಇಷ್ಟ ದೇವರಾದ ಗಣೇಶನಿಗೆ ಪೂಜೆ ಮಾಡಿ ಬಂದಿದ್ದೇನೆ.

1983ರಲ್ಲಿ ವಿಶ್ವಕಪ್ ವೇಳೆಯಲ್ಲೂ ನಾನು ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯ ವೀಕ್ಷಣೆ ಮಾಡಿದ್ದೆ. ಅಂದು ಕಪಿಲ್ ದೇವ್ ಅವರ ಭಾರತ ತಂಡ ವಿಶ್ವಕಪ್ ಗೆದ್ದಿತ್ತು. ಈಗಲೂ ಭಾರತ ತಂಡವೇ ಗೆಲ್ಲಲಿದೆ ಎಂದು ಚಾರುಲತಾ ಪಟೇಲ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top