fbpx
ಸಮಾಚಾರ

ಸರ್ಕಾರೀ ಶಾಲೆಯನ್ನು ದತ್ತು ಪಡೆದು ಹುಟ್ಟುಹಬ್ಬ ಆಚರಿಸಿಕೊಳ್ಳಲು ಪ್ರಜ್ವಲ್ ನಿರ್ಧಾರ.

ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಾ, ಬಂದ ದುಡ್ಡಿನ ಲೆಕ್ಕ ಬರೆಯುತ್ತಾ , ಮೋಜು ಮಸ್ತಿ ಅಂತ ಮಜಾಮಾಡುವ ಈ ಕಾಲದ ಸಿನಿಮಾ ನಟರ ಮದ್ಯೆ ಕೆಲವೇ ಕೆಲವು ಮಂದಿ ಮಾತ್ರ ಮಾತ್ರ ನಾವು ಸಿನಿಮಾದಲ್ಲಿ ಮಾತ್ರ ಹೀರೋಗಳಲ್ಲ ನಿಜಜೀವನದಲ್ಲೂ ಹೀರೊ ಎಂದು ಸಾಬೀತು ಪಡಿಸುತ್ತಿರುತ್ತಾರೆ. ತಮ್ಮನ್ನು ಬೆಳೆಸಿದ ಈ ಸಮಾಜಕ್ಕೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂಬ ನಿರ್ಮಲ ಆಶಯವನ್ನಿಟ್ಟುಕೊಂಡು ಸಮಾಜಸೇವೆಗಿಳಿಯುವ ಕೆಲವೇ ಕೆಲವು ನಟರ ಸಾಲಿಗೆ ನಟ ಪ್ರಜ್ವಲ್ ದೇವರಾಜ್ ಸೇರಿದ್ದಾರೆ.

ನಾಳೆ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬವಿದ್ದು ಈ ನಡುವೆ ಸರ್ಕಾರಿ ಶಾಲೆ ಉಳಿಸಿ ಆಂದೋಲನ ನಡೆಸುತ್ತಿರುವ ಒಂದು ಸಂಸ್ಥೆಯ ಜೊತೆಗೆ ಪ್ರಜ್ವಲ್ ಕೈ ಜೋಡಿಸಲಿದ್ದು, ಉತ್ತರ ಕರ್ನಾಟಕದ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆಯುವ ಮೂಲಕ ಪ್ರಜ್ವಲ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

‘ಪ್ರತಿವರ್ಷ ನನ್ನ ಜನ್ಮದಿನದ ಸಲುವಾಗಿ ಅಭಿಮಾನಿಗಳು ಸಾಕಷ್ಟು ಹಣ ಖರ್ಚು ಮಾಡಿ, ಸಂಭ್ರಮಿಸುತ್ತಾರೆ. ನನ್ನ ಮೇಲೆ ಅಭಿಮಾನಿಗಳು ತೋರುವ ಪ್ರೀತಿ ಖುಷಿ ನೀಡುತ್ತದೆ. ಆದರೆ, ಈ ಬಾರಿ ಸರ್ಕಾರಿ ಶಾಲೆ ಉಳಿಸಿ ಅಂದೋಲನ ನಡೆಸುತ್ತಿರುವ ಒಂದು ಸಂಸ್ಥೆ ಜತೆ ಕೈಜೋಡಿಸಿ, ಉತ್ತರ ಕರ್ನಾಟಕ ಭಾಗದ ಒಂದು ಶಾಲೆಯನ್ನು ದತ್ತು ಪಡೆದುಕೊಂಡಿದ್ದೇನೆ. ಇನ್ನೂ ಅನೇಕ ಶಾಲೆಗಳನ್ನು ದತ್ತು ಪಡೆಯಬೇಕೆಂಬ ಆಸೆ ಇದೆ. ಹಾಗಾಗಿ, ಈ ಬಾರಿ ನನ್ನ ಜನ್ಮದಿನಕ್ಕೆ ಕೇಕ್, ಹಾರ ಮುಂತಾದವುಗಳನ್ನು ತರುವುದರ ಬದಲು, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೋಟ್​ಬುಕ್ಸ್ ಸೇರಿ ವಿದ್ಯಾಭ್ಯಾಸಕ್ಕೆ ಬೇಕಾದ ವಸ್ತುಗಳನ್ನು ನೀಡಿ. ಇದೇ ನನಗೆ ದೊಡ್ಡ ಗಿಫ್ಟ್’ ಎಂದು ಮನವಿ ಮಾಡಿಕೊಂಡಿದ್ದಾರೆ ಪ್ರಜ್ವಲ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top