fbpx
ಸಮಾಚಾರ

ತಾನು ಹೊಡೆದ ಸಿಕ್ಸರ್‌ನಿಂದ ಗಾಯಗೊಂಡ ಮಹಿಳಾ ಅಭಿಮಾನಿಗೆ ವಿಶೇಷ ಉಡುಗೊರೆ ನೀಡಿದ ರೋಹಿತ್ ಶರ್ಮ.

ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಮಂಗಳವಾರ (ಜುಲೈ 2) ಭಾರತ vs ಬಾಂಗ್ಲಾದೇಶ ವೀಶ್ವಕಪ್ ಪಂದ್ಯದ ವೇಳೆ ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್ಮ್ ರೋಹಿತ್ ಶರ್ಮಾ ವಿಶೇಷ ವ್ಯಕ್ತಿತ್ವಕ್ಕಾಗಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದರು.

ರೋಹಿತ್ ಬಾರಿಸಿದ ಸಿಕ್ಸ್ ಒಂದು ಪಂದ್ಯ ನೋಡಲು ಬಂದಿದ್ದ ಅಭಿಮಾನಿ ಮೀನಾ ಎಂಬುವವರಿಗೆ ಬಡಿದಿತ್ತು. ಇದನ್ನು ಗಮನಿಸಿದ ಭಾರತ ಉಪನಾಯಕ ರೋಹಿತ್ ಶರ್ಮಾ ಅವರು ಪಂದ್ಯದ ಬಳಿಕ ಮೀನಾ ಅವರನ್ನು ಭೇಟಿಯಾಗಿ ತಾನು ಆಟೋಗ್ರಾಫ್ ಹಾಕಿದ ಹಳದಿ ಬಣ್ಣದ ಟೋಪಿಯೊಂದನ್ನು ನೀಡಿದ್ದಾರೆ.ರೋಹಿತ್ ಬಾರಿಸಿದ 104 ರನ್‌ನಲ್ಲಿ 7 ಬೌಂಡರಿ, 5 ಸಿಕ್ಸರ್‌ಗಳೂ ಸೇರಿದ್ದವು. ಈ 5 ಸಿಕ್ಸರ್‌ಗಳಲ್ಲಿ ಒಂದು ಸಿಕ್ಸರ್ ಭಾರತೀಯ ಅಭಿಮಾನಿಯೊಬ್ಬಳ ಮುಖಕ್ಕೆ ಬಡಿದಿತ್ತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top