fbpx
ಸಮಾಚಾರ

ಶೃಂಗೇರಿಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿರಬೇಕಾದ 12 ವಿಷಯಗಳು ಓದಿ ತಿಳ್ಕೊಳ್ಳಿ

ಶೃಂಗೇರಿಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿರಬೇಕಾದ 12 ವಿಷಯಗಳು ಓದಿ ತಿಳ್ಕೊಳ್ಳಿ ..

1. ಶೃಂಗೇರಿ ತಲುಪುವುದು ಹೇಗೆ ?

ಶೃಂಗೇರಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ ರಾಜಧಾನಿ ಬೆಂಗಳೂರು (ಬೆಂಗಳೂರು) ಶೃಂಗೇರಿಯಿಂದ ಸುಮಾರು 335 ಕಿ.ಮಿ / 208 ಮೈಲಿ ದೂರದಲ್ಲಿದೆ.

 

2 . ಆದಿ ಶಂಕರರರು

ಶೃಂಗೇರಿ ಶಾರದಾ ಪೀಠವನ್ನು ಧರ್ಮಶಾಸ್ತ್ರಜ್ಞ ಮತ್ತು ಅದ್ವೈತ ವೇದಾಂತ ತತ್ತ್ವಶಾಸ್ತ್ರದ ಪ್ರತಿಪಾದಕರಾದ ಆದಿ ಶಂಕರರರು 8 ನೇ ಶತಮಾನದಲ್ಲಿ ತುಂಗ ನದಿಯ ದಡದಲ್ಲಿ ಸ್ಥಾಪಿಸಿದರು ಎಂದು ಹೇಳಲಾಗುತ್ತದೆ.

3. ಶೃಂಗೇರಿ ಶಾರದಾ ಪೀಠ

ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿಯು ಮೊದಲನೆಯದು ಇತರೆ ಮೂರು ಮಠಗಳನ್ನು ಬದರಿ, ಪುರಿ ಮತ್ತು ದ್ವಾರಕೆಯಲ್ಲಿ ಸ್ಥಾಪಿಸಿದರು.

 

ಆದಿ ಶಂಕರಾಚಾರ್ಯರು ಪ್ರಯಾಣಿಸುತ್ತಿದ್ದಾಗ ಕಾಳಿಂಗ ಸರ್ಪವೊಂದು ಮೊಟ್ಟೆ ಹಕ್ಕುತ್ತಿರುವ ಕಪ್ಪೆಯೊಂದನ್ನು ತನ್ನ ಹೆಡೆ ಬಿಚ್ಚಿ ಬೆಳಗುತ್ತಿರುವ ಸೂರ್ಯನಿಂದ ರಕ್ಷಿಸಿ ನೆರಳಿನಿಂದ ಹೊದಿಕೆಯನ್ನು ನೀಡಿತ್ತಂತೆ .


ದೀರ್ಘಕಾಲದವರೆಗೆ ಈ ಅದ್ಭುತ ದೃಶ್ಯವನ್ನು ನೋಡಿದ ಶಂಕರರು ಈ ಸ್ಥಳದಲ್ಲಿ ಧನಾತ್ಮಕ ತರಂಗಗಳು ಇರುವುದನ್ನು ಗಮನಿಸಿದರು ಹಾಗು ಮಠ ಸ್ಥಾಪಿಸಲು ಸೂಕ್ತವಾದ ಸ್ಥಳವೆಂದು ನಿರ್ಧಾರಮಾಡಿದರು.

ಕೆಲವು ವಿದ್ವಾಂಸರ ಪ್ರಕಾರ ಶೃಂಗೇರಿ ಮತ ಕಂಚಿ ಮಠದ ಉಪ ಮಠ ಎಂದು ಹೇಳುತ್ತಾರೆ ಏಕೆಂದರೆ ಶಂಕರ ಮೊದಲ ಶಿಷ್ಯರು ಕಂಚಿ ಮಠದ ಮೊದಲನೇ ಶಿಷ್ಯರು ಎಂಬ ವಾದ ಹಲವರದ್ದು .

ತಮ್ಮ ಅವಧಿಯ 32 ವರ್ಷಗಳು ಅದ್ವೈತ ವೇದಾಂತವನ್ನು ಕಲಿಸಲು ಶೃಂಗೇರಿಯಲ್ಲಿ ಕಳೆದಿದ್ದರು.

4. ಶೃಂಗೇರಿ ಎಂಬ ಹೆಸರು ಹೇಗೆ ಬಂತು ?

ಶೃಂಗೇರಿ ಎಂಬ ಹೆಸರು ಋಷ್ಯಶೃಂಗಗಿರಿ ಎಂಬ ಹೆಸರಿನಿಂದ ಬಂದಿದೆ ಎಂದು ಹೇಳಲಾಗುತ್ತದೆ , ಅಲ್ಲಿಯೇ ಹತ್ತಿರವೇ ಇರುವ ಬೆಟ್ಟದಲ್ಲೇ ಋಷಿ ವಿಭಾಂಡಕ ಮತ್ತು ಅವನ ಮಗ ಋಷ್ಯಶೃಂಗ ವಾಸವಿದ್ದರು , ಋಷ್ಯಶೃಂಗನ ಉಲ್ಲೇಖ ರಾಮಾಯಣದ ಬಾಲಕಾಂಡದಲ್ಲಿ ಬರುತ್ತದೆ. ವಸಿಷ್ಠ ತಿಳಿಸುವ ಉಪಕಥೆಗಳಲ್ಲಿ ಒಂದರಲ್ಲಿ ಋಷ್ಯಶೃಂಗ ರೋಮಪಾದ ರಾಜ್ಯದಲ್ಲಿ ಮಳೆ ತರಿಸಿದ ಕಥೆ ಇದೆ.

5 . ವಿದ್ಯಾಶಂಕರ ದೇವಸ್ಥಾನ

ಶೃಂಗೇರಿ ಶಾರದಾ ಪೀಠದ 12 ನೇ ಜಗದ್ಗುರು ವಿದ್ಯಾರಣ್ಯರು , ಶೃಂಗೇರಿಯ ಅನೇಕ ದೇವಸ್ಥಾನಗಳಲ್ಲಿ ಮುಖ್ಯವಾದದ್ದು ವಿದ್ಯಾಶಂಕರ ದೇವಸ್ಥಾನ. ಇದನ್ನು 14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ-ಬುಕ್ಕರ ಗುರು ಮಹರ್ಷಿ ವಿದ್ಯಾರಣ್ಯರು ಕಟ್ಟಿಸಿದರು.

ಈ ದೇವಾಲಯದ ಶಾಸನಗಳಲ್ಲಿ ನಂತರದ ಅನೇಕ ವಿಜಯನಗರದ ಅರಸರು ಈ ದೇವಾಲಯಕ್ಕೆ ಕೊಟ್ಟ ಕಾಣಿಕೆಗಳ ದಾಖಲೆಗಳಿವೆ. ವಿಜಯನಗರ ಕಾಲದಲ್ಲಿ ಕಟ್ಟಿಸಿದ್ದಾದರೂ ಈ ದೇವಾಲಯ ಇನ್ನೂ ಹಿಂದಿನ ಹೊಯ್ಸಳ ದೇವಾಲಯದ ಸ್ಥಾನದಲ್ಲಿ ಕಟ್ಟಿದ್ದೆಂದು ನಂಬಲಾಗಿದೆ.

ವಿದ್ಯಾಶಂಕರ ದೇವಾಲಯದ ಗರ್ಭಗುಡಿಯಲ್ಲಿ ಕಪ್ಪು ಶಿವ ಲಿಂಗವಿದೆ. ದೇವಾಲಯದ ಇತರ ದೇವತೆಗಳೆಂದರೆ ಗಣೇಶ ಮತ್ತು ದುರ್ಗಾ ದೇವತೆ..

ತುಂಗಾ ನದಿಯಲ್ಲಿರುವ ನೀರಿನಲ್ಲಿ ಲಕ್ಷಾಂತರ ಮೀನುಗಳಿವೆ ಆದರೂ ಯಾರು ಮೀನಿಗೆ ಹಾನಿ ಮಾಡುವುದಿಲ್ಲ .

6. ಮೇಷಾದಿ ರಾಶಿ ಸೂಚಕ ಕಂಬ

ವಿಜಯನಗರದ ಹಾಗು ಹೊಯ್ಸಳ ಸಾಮ್ರಾಜ್ಯ ಎರಡು ದೇವಾಲಯದ ಜೀರ್ಣೋದ್ದಾರಕ್ಕೆ ಸಹಾಯ ಮಾಡಿವೆ ಆದ್ದರಿಂದ ವಾಸ್ತು ಶಿಲ್ಪದಲ್ಲಿ ಎರಡು ಪ್ರಕಾರಗಳನ್ನು ಕಾಣಬಹುದು ವಿದ್ಯಾಶಂಕರ ದೇವಾಲಯದಲ್ಲಿ ಮೇಷಾದಿ ರಾಶಿ ಸೂಚಕ ಕಂಬಗಳಿವೆ.ಈ ರಾಶಿ ಕಂಬಗಳ ವೈಶಿಷ್ಟ್ಯವೆಂದರೆ ಸೂರ್ಯ ಯಾವ ರಾಶಿಯಲ್ಲಿರುತ್ತಾನೊ ಆ ರಾಶಿ ಸೂಚಕ ಕಂಬದ ಮೇಲೆ ಪ್ರಥಮ ಕಿರಣಗಳು ಬೀಳುತ್ತವೆ ಎಂಬ ಪ್ರತೀತಿ ಇದೆ .

7 . ಮಲಹಾನಿಕರೇಶ್ವರ

ಋಷ್ಯಶೃಂಗರ ತಂದೆಯವರಾದ ವಿಭಾಂಡಕ ಮಹರ್ಷಿಗಳು ತಾವು ಪೂಜಿಸುತ್ತಿದ್ದ ಶಿವಲಿಂಗದಲ್ಲಿ ಐಕ್ಯರಾದರೆಂಬ ಪ್ರತೀತಿ ಇದೆ. ಅದು ಶೃಂಗೇರಿಪಟ್ಟಣದ ಹತ್ತಿರದ ಒಂದು ಗುಡ್ಡದ ಮೇಲಿದೆ. ಇದಕ್ಕೆ ಮಲಹಾನಿಕರೇಶ್ವರ ದೇವಾಲಯ ಎನ್ನಲಾಗಿದೆ.

 

8. ಋಶ್ಯಶೃಂಗರ ಆತ್ಮಜ್ಯೋತಿ

ಋಶ್ಯಶೃಂಗರ ಆತ್ಮಜ್ಯೋತಿ ತಾವು ಪೂಜಿಸುತ್ತಿದ್ದ ಶಿವಲಿಂಗದಲ್ಲಿ ಐಕ್ಯರಾದರೆಂಬ ಪ್ರತೀತಿ ಇದೆ ಇದು ಇರುವ ಸ್ಥಳ ಕಿಗ್ಗ ಅಥವಾ ಋಶ್ಯಶೃಂಗಪುರ.

 

9. ಕಾಫಿ , ಬಾಳೆ ,ವೆನಿಲ್ಲಾ, ವೀಳ್ಯದೆಲೆ, ಕರಿಮೆಣಸು ಮತ್ತು ಏಲಕ್ಕಿಯನ್ನು ಅಡಿಕೆ ಬೆಳೆಗಳಿಗೆ ಫೇಮಸ್

 

10 . ಆಗುಂಬೆ

ಶೃಂಗೇರಿ ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆಯಾಗುವ ಸ್ಥಳವಾಗಿದೆ. ಆಗುಂಬೆ, ಭಾರತದಲ್ಲಿ ಅತಿ ಹೆಚ್ಚು ವಾರ್ಷಿಕ ಮಳೆ ಬೀಳುವ ಪ್ರದೇಶ ಇದು ಶೃಂಗೇರಿಯಿಂದ ಕೇವಲ 20 ಕಿ.ಮೀ ದೂರದಲ್ಲಿದೆ.

11 . ಶೃಂಗೇರಿ ಮಠದಲ್ಲಿ ಇಂದಿಗೂ ಅಕ್ಷರಾಭ್ಯಾಸವನ್ನು ಮಾಡಿಸಲಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top