fbpx
ಸಮಾಚಾರ

ವಿಜಯಲಕ್ಷ್ಮಿ ರಹಸ್ಯ ಕಾರ್ಯಾಚರಣೆ ನಂತರ ಎಚ್ಚೆತ್ತುಕೊಂಡ ಬೆಂಗಳೂರು ಟ್ರಾಫಿಕ್ ಪೊಲೀಸ್.

ಕರ್ನಾಟಕ ಕಂಡಂತಹ ದಿಟ್ಟ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು, ಕಳ್ಳರು-ಸುಳ್ಳರು-ಭ್ರಷ್ಟರಿಗೆ ಸ್ವಲ್ಪವೂ ಹೆದರದೆ ನೂರಾರು ದಂಧೆಗಳನ್ನು ಮತ್ತು ಆ ದಂಧೆಗಳ ಹಿಂದಿರುವ ಭ್ರಷ್ಟ ಅಧಿಕಾರಿಗಳನ್ನು ಬಯಲಿಗೆಳೆದ ಧೈರ್ಯಶಾಲಿ. ಎಂತೆಂಥಹ ಬೆದರಿಕೆಗಳಿಗೂ ಬಗ್ಗದೆ ಮುನ್ನುಗ್ಗುತ್ತಿರುವ ವಿಜಯಲಕ್ಷ್ಮಿ ಇತ್ತೀಚಿಗೆ ಬೆಂಗಳೂರು ಟ್ರಾಫಿಕ್ ಪೋಲೀಸರ ಟೋವಿಂಗ್ ದಂಡೆಯ ಬಗ್ಗೆ ರಹಸ್ಯ ಕಾರ್ಯಾಚರಣೆ ನಡೆಸಿ ಟ್ರಾಫಿಕ್ ಪೊಲೀಸರು ಹೇಗೆ ಜನರ ಹಣವನ್ನು ಹದ ಹಗಲೇ ಲೂಟಿ ಮಾಡುತ್ತಿದ್ದಾರೆ ಎಂಬುದನ್ನು ಬಟಾ ಬಯಲು ಮಾಡಿದ್ದರು.

ಈ ರಹಸ್ಯ ಕಾರ್ಯಾಚರಣೆಯ ನಂತರ ಬೆಂಗಳೂರು ಟ್ರಾಫಿಕ್ ಪೊಲೀಸ್ ಎಚ್ಚೆತ್ತುಕೊಂಡಿದ್ದು ಟೋವಿಂಗ್ ನಿಯಮವನ್ನು ಬದಲಾವಣೆ ಮಾಡಿದೆ. ಟೋವಿಂಗ್ ಬಗ್ಗೆ ಮಾಹಿತಿ ನೀಡಲು ಟ್ರಾಫಿಕ್ ಪೊಲೀಸ್, ಟೋವಿಂಗ್ ಸ್ಟಾಫ್ ಗಳನ್ನು ಕರೆಸಿ ಮೀಟಿಂಗ್ ಮಾಡಲಾಗಿದೆ.. ನೋ ಪಾರ್ಕಿಂಗ್ ಜಾಗದಲ್ಲಿ ಇರುವ ವಾಹನಗಳನ್ನು ಯಾವ ಸಂಧರ್ಭದಲ್ಲಿ ಟೋಯಿಂಗ್ ಮಾಡಬೇಕು ಮತ್ತು ಅನುಸರಿಸಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಟ್ರೈನಿಂಗ್ ಮಾಡಲಾಗಿದೆ.

 

 

“ನೋ ಪಾರ್ಕಿಂಗ್ ಬೋರ್ಡ್ ಇರುವ ಜಾಗದಲ್ಲಿ ವಾಹನ ನಿಲುಗಡೆ ನಿಲ್ಲಿಸಿದ ತಕ್ಷಣ ಟ್ರಾಫಿಕ್ ಪೊಲೀಸರು ತಕ್ಷಣ ನಿಮ್ಮ ವಾಹನಗಳನ್ನು ಎತ್ತಿಕೊಂಡು ಹೋಗುವಂತಿಲ್ಲ. ಐದು ನಿಮಿಷಕ್ಕಿಂತ ಹೆಚ್ಚು ಹೊತ್ತು ವಾಹನ ನೋ ಪಾರ್ಕಿಂಗ್ ಬೋರ್ಡ್ ಇರುವ ಜಾಗದಲ್ಲಿ ಇದ್ದರೇ ಆಗ ಮಾತ್ರ ನಿಮ್ಮ ವಾಹನಗಳನ್ನು ಟ್ರಾಫಿಕ್ ಪೊಲೀಸರು ಎಳೆದೊಯ್ಯುತ್ತಾರೆ” ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೇಳಿದ್ದಾರೆ.

ಐದು ನಿಮಿಷಗಳ ಒಳಗೆ ವಾಹನ ಮಾಲೀಕರು ತಿರುಗಿದರೆ, ಅವರು 100 ರೂ.ಗಳ ದಂಡವನ್ನು ಪಾವತಿಸಿ ರಶೀದಿಯನ್ನು ಸಂಗ್ರಹಿಸಿ ವಾಹನವನ್ನು ಹಿಂತಿರುಗಿಸಬಹುದು.ಆದರೆ ನಿಗದಿತ ಸಮಯದಲ್ಲಿ ವಾಹನ ಮಾಲೀಕರು ತಮ್ಮ ವಾಹನವನ್ನು ತೆಗೆಯದಿದ್ದರೆ ವಾಹನವನ್ನು ಎಳೆಯಲಾಗುತ್ತದೆ. ವಾಹನ ಮಾಲೀಕರು ದಂಡ ಮತ್ತು ಟೋಯಿಂಗ್ ಶುಲ್ಕ ಎರಡನ್ನೂ ಪಾವತಿಸಬೇಕಾಗುತ್ತದೆ.

“ಯಾವುದೇ ಎಚ್ಚರಿಕೆ ಇಲ್ಲದೆ ಅಥವಾ ಕೆಲವೊಮ್ಮೆ ಪಾರ್ಕಿಂಗ್ ಬೋರ್ಡ್‌ಗಳಿಲ್ಲದ ಸ್ಥಳಗಳಲ್ಲಿ ಪೊಲೀಸರು ವಾಹನಗಳನ್ನು ಎಳೆಯುತ್ತಿದ್ದಾರೆ” ಎಂಬ ಸಾರ್ವಜನಿಕ ದೂರುಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೂದ್ ಹೇಳಿದ್ದಾರೆ. ಈ ನಿರ್ಧಾರವನ್ನು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ, ಅವರು ಮುಂದಿನ ದಿನಗಳಲ್ಲಿ ಅದನ್ನು ಜಾರಿಗೊಳಿಸಲು ಪ್ರಾರಂಭಿಸುತ್ತಾರೆ. ಹೆಚ್ಚುವರಿಯಾಗಿ, ಪೊಲೀಸರು ನಿಮ್ಮ ವಾಹನವನ್ನು ಎಳೆಯುವಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಕಿರುಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಒಟ್ಟಿನಲ್ಲಿ ರಾಜಧಾನಿಯಲ್ಲಿ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದ್ದ ಟೋವಿಂಗ್ ದಂದೆಗೆ ಮಂಗಳ ಹಾಡಲು ಪೊಲೀಸ್ ಉನ್ನತ ಅಧಿಕಾರಿಗಳು ಮುಂದಾಗಿದ್ದು ವಿಜಯ ಲಕ್ಷ್ಮಿ ಅವರ ರಹಸ್ಯ ಕಾರ್ಯಚರಣೆ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top