fbpx
ಸಮಾಚಾರ

ಹುಟ್ಟುಹಬ್ಬಕ್ಕೆ ಸರ್ಕಾರಿ ಶಾಲೆ ದತ್ತು ಪಡೆದ ಪ್ರಜ್ವಲ್ ಬಗ್ಗೆ ದರ್ಶನ್ ಮೆಚ್ಚುಗೆ.

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಯನ್ನು ದತ್ತು ಪಡೆಯುವ ಮೂಲಕ ಪ್ರಜ್ವಲ್ ದೇವರಾಜ್ ಅವರು ಇಂದು ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರಜ್ವಲ್ ಅವರ ಈ ಕಾರ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

“ನಮ್ಮ ಹುಡ್ಗ ಪ್ರಜ್ಜು ಒಂದು ಕನ್ನಡ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಸುದ್ಧಿ ಕೇಳಿ ತುಂಬಾನೇ ಖುಷಿಯಾಯ್ತು. ಇಂಥ ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಹೀಗೆ ಸದಾ ಎಂದು ಹಾರೈಸುತ್ತೇನೆ.” ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದಾರೆ.

ಈಗೊಂದು ವಾರಗಳ ಹಿಂದೆ ಪ್ರಜ್ವಲ್​ ದೇವರಾಜ್​ ‘ಪ್ರತಿವರ್ಷ ನನ್ನ ಜನ್ಮದಿನದ ಸಲುವಾಗಿ ಅಭಿಮಾನಿಗಳು ಸಾಕಷ್ಟು ಹಣ ಖರ್ಚು ಮಾಡಿ, ಸಂಭ್ರಮಿಸುತ್ತಾರೆ. ನನ್ನ ಮೇಲೆ ಅಭಿಮಾನಿಗಳು ತೋರುವ ಪ್ರೀತಿ ಖುಷಿ ನೀಡುತ್ತದೆ. ಆದರೆ, ಈ ಬಾರಿ ಸರ್ಕಾರಿ ಶಾಲೆ ಉಳಿಸಿ ಅಂದೋಲನ ನಡೆಸುತ್ತಿರುವ ಒಂದು ಸಂಸ್ಥೆ ಜತೆ ಕೈಜೋಡಿಸಿ, ಉತ್ತರ ಕರ್ನಾಟಕ ಭಾಗದ ಒಂದು ಶಾಲೆಯನ್ನು ದತ್ತು ಪಡೆದುಕೊಂಡಿದ್ದೇನೆ. ಇನ್ನೂ ಅನೇಕ ಶಾಲೆಗಳನ್ನು ದತ್ತು ಪಡೆಯಬೇಕೆಂಬ ಆಸೆ ಇದೆ. ಹಾಗಾಗಿ, ಈ ಬಾರಿ ನನ್ನ ಜನ್ಮದಿನಕ್ಕೆ ಕೇಕ್, ಹಾರ ಮುಂತಾದವುಗಳನ್ನು ತರುವುದರ ಬದಲು, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೋಟ್​ಬುಕ್ಸ್ ಸೇರಿ ವಿದ್ಯಾಭ್ಯಾಸಕ್ಕೆ ಬೇಕಾದ ವಸ್ತುಗಳನ್ನು ನೀಡಿ. ಇದೇ ನನಗೆ ದೊಡ್ಡ ಗಿಫ್ಟ್’ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದರು.

 

 

View this post on Instagram

 

A post shared by Prajwal Devaraj (@prajwaldevaraj) on

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top