fbpx
ಸಮಾಚಾರ

ಪಂದ್ಯದ ವೇಳೆ ರಕ್ತ ಉಗುಳಿದ ಧೋನಿ- ನೋವನ್ನೇ ನುಂಗಿ ಆಡುತ್ತಿರುವ ಮಾಜಿ ನಾಯಕ

ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲೇ ಧೋನಿ ರಕ್ತ ಉಗುಳಿದ ಫೋಟೋ ವೈರಲ್ ಆಗಿದ್ದು ಇದು ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.

 

 

 

ಧೋನಿ ಆಂಗ್ಲರ ವಿರುದ್ಧದ ಪಂದ್ಯದಲ್ಲಿ ವಿಕೆಟ್​ ಕೀಪಿಂಗ್​ ಮಾಡುತ್ತಿದ್ದ ವೇಳೆ, ಧೋನಿ ಹೆಬ್ಬೆರಳಿಗೆ ಚೆಂಡು ಬಡಿದು ಗಾಯವಾಗಿತ್ತು. ಗಾಯದ ನಡುವೆಯೂ ಧೋನಿ ಬ್ಯಾಟಿಂಗ್ ಮುಂದುವರಿಸಿದ್ದರು. ಧೋನಿ ಕೈಬೆರಳಿನ ಗಾಯದಿಂದ ರಕ್ತ ಜಿನುಗುತ್ತಿತ್ತು. ಹೀಗಾಗಿ ಧೋನಿ ಕೈಬೆರಳನ್ನು ಚೀಪಿ ರಕ್ತ ಉಗುಳಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಧೋನಿ ವೃತ್ತಿಪರತೆ ಹಾಗೂ ದೇಶಕ್ಕಾಗಿ ತಮ್ಮ ನೋವನ್ನೇ ಮರೆತು ಆಡುತ್ತಿದ್ದಾರೆ ಎಂದಿದ್ದಾರೆ.

ಪಂದ್ಯದ ವೇಳೆ ಧೋನಿ ಗಾಯಗೊಂಡಿರುವುದು ಹೆಚ್ಚಿನ ಜನರ ಗಮನಕ್ಕೆ ಬಂದಿರಲಿಲ್ಲ. ಆದರೆ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದಕ್ಕೆ ಧೋನಿ ಟ್ರೋಲ್ ಆಗಿದ್ದರು. 32 ಎಸೆತಗಳಲ್ಲಿ ಅಜೇಯ 41 ರನ್ ಗಳನ್ನು ಧೋನಿ ಗಳಿಸಿದ್ದರು. ಪಂದ್ಯದಲ್ಲಿ ಟೀಂ ಇಂಡಿಯಾ 31 ರನ್ ಅಂತರದಲ್ಲಿ ಸೋಲುಂಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top