fbpx
ಸಮಾಚಾರ

ಇದು ಮೂಗಿಗೆ ಬೆಣ್ಣೆ ಸವರುವ ಕೆಲಸ- ಇದರಿಂದ ಹೆಚ್ಚೇನೂ ಪ್ರಯೋಜನವಿಲ್ಲ

ವರ್ಷಾಂತರಗಳಿಂದ ಕನ್ನಡಿಗರನ್ನು ಕಾಡುತ್ತಿದ್ದ ಐಬಿಪಿಎಸ್ ಮೋಸದ ಸಮಸ್ಯೆಗೆ ಸದ್ಯ ಸಣ್ಣ ಗೆಲುವು ಸಿಕ್ಕಿದೆ. ಹೌದು ಐಬಿಪಿಎಸ್ ಪರೀಕ್ಷೆಯನ್ನು ಕನ್ನಡ ಸೇರಿದಂತೆ ಉಳಿದ ಪ್ರಾದೇಶಿಕ ಭಾಷೆಗಳಲ್ಲೂ ನಡೆಸುವುದಾಗಿ ಸಂಸತ್ ನಲ್ಲಿ ಘೋಷಿಸಲಾಗಿದೆ. ಆದರೆ ಇದರಿಂದ ಸಮಸ್ಯೆ ಪೂರ್ಣ ಬಗೆಹರಿದಂತೆ ಅಲ್ಲ.. ಇದು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಅಷ್ಟೇ..

ಇದರಿಂರ ಹೆಚ್ಚಿನ ಪ್ರಯೋಜನ ಇಲ್ಲ:
ಕನ್ನಡಿಗರೂ ಸೇರಿದಂತೆ ಎಲ್ಲಾ ಪ್ರಾದೇಶಿಕ ರಾಜ್ಯಗಳ ಉದ್ಯೋಗಕಾಂಕ್ಷಿಗಳು ಹೋರಾಟ ಮಾಡಿದ್ದು ಕೇವಲ ಆಯಾ ಭಾಷೆಗಳಲ್ಲೂ ಪರೀಕ್ಷೆ ನಡೆಸಬೇಕು ಎಂದಲ್ಲ. ಆಯಾ ಪ್ರಾದೇಶಿಕ ಭಾಷೆಯ ಜ್ಞಾನ ಹೊಂದಿದವರಿಗೆ ಬ್ಯಾಂಕ್ ಕೆಲಸ ಸಿಗಬೇಕು ಎಂದು. 2014ಕ್ಕೂ ಮುಂಚೆ‌ ಇದ್ದ “ಕರ್ನಾಟಕ ಅಥವಾ ಆಯಾ ರಾಜ್ಯದಲ್ಲಿ ಬಾಂಕ್ ಉದ್ಯೋಗ ಪಡೆಯಲು ಕನಿಷ್ಟ 15 ವರ್ಷಗಳಿಂದ ಆ ರಾಜ್ಯದಲ್ಲಿರಬೇಕು ಹಾಗು ಆಯಾ ಪ್ರಾದೇಶಿಕ ಭಾಷೆಯನ್ನು ಉದ್ಯೋಗಾಕಾಂಕ್ಷಿಗಳು ವ್ಯಾಸಂಗ ಮಾಡಿರಬೇಕು, ಆಯಾ ಪ್ರಾದೇಶಿಕ ಭಾಷೆಯನ್ನು ಓದಲು ಬರೆಯಲು ಬರಬೇಕು.” ಎಂಬ ಕಾನೂನುಗಳು ಮತ್ತೆ ಜಾರಿಯಾಗಬೇಕು ಎಂದು ಹೋರಾಟ ನಡೆದಿತ್ತು.

ಆದರೆ ಮಾನ್ಯ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಇಂದು ಸಂಸತ್ ನಲ್ಲಿ ಇಂಗ್ಲಿಷ್ ಮತ್ತು ಹಿಂದಿ ಹೊರತುಪಡಿಸಿ 13 ಭಾಷೆಗಳಲ್ಲಿ ನಡೆಸಲಾಗುವುದು ಎಂದು ಪ್ರಕಟಿಸಿದ್ದಾರೆ. ಇದು ಸ್ವಾಗತಾರ್ಹ, ಆದರೆ ಇದರಿಂದ ನಮ್ಮಂತ ಪ್ರಾದೇಶಿಕ ಭಾಷೆಯ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚೇನೂ ಪ್ರಯೋಜನವಲ್ಲ. ಇದರಿಂದ ನಮ್ಮ ರಾಜ್ಯಕ್ಕೆ ಪರರಾಜ್ಯಗಳಿಂದ ಬರುವ ಬಾಂಕ್ ಉದ್ಯೋಗಿಗಳ ಸಂಖ್ಯೆ ಏನು ಕಡಿಮೆ ಆಗುವುದಿಲ್ಲ. ಯಾಕೆಂದರೆ ಹಿಂದಿಯವನು ಹಿಂದಿಯಲ್ಲಿ, ತೆಲುಗಿನವನು ತೆಲುಗಿನಲ್ಲಿ ಪರೀಕ್ಷೆ ಬರೆದು ಕರ್ನಾಟಕದಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ..

ಹಾಗಾದರೆ ನಿರ್ಮಲ ಸೀತಾರಾಮನ್ ಅವರು ಪ್ರಾದೇಶಿಕ ಭಾಷೆಯಲ್ಲಿ ಐಬಿಪಿಎಸ್ ಪರೀಕ್ಷೆ ಘೋಷಿಸಿರುವುದಕ್ಕೆ ಏನು ಪ್ರಯೋಜನ? ನಾವು ಕೇಳಿದ್ದೆ ಒಂದು ಆದರೆ ಕೊಟ್ಟಿದ್ದೆ ಮತ್ತೊಂದು. ಗೊತ್ತಿದ್ದೂ ಗೊತ್ತಿದ್ದೂ ಇದೆ ಗೆಲುವು ಎಂದು ಜಾಣ ಕುರುಡನಂತೆ ಗೆಲುವು ಎನ್ನುವುದು ಮೂರ್ಖತನ. 2014ರ ನಿಯಮ ಮತ್ತೆ ಜಾರಿಗೆ ಬರುವವರೆಗೂ ನ್ಯಾಯ ಸಿಗುವುದಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top