fbpx
ಸಮಾಚಾರ

“ಮೋದಿ ಮೋದಿ ಅಂದ್ರೆ ಬಾಯಿಗೆ ಬೂಟು ಹಾಕ್ತೀವಿ” ಪ್ರಮೋದ್‌ ಮುತಾಲಿಕ್‌ ಹೇಳಿಕೆ, ವಿಡಿಯೋ ವೈರಲ್‌

ಮುಂದಿನ ಸಲ ಮೋದಿ ಹೆಸರು ಹೇಳಿದರೆ ಬಾಯಲ್ಲಿ ಬೂಟು ಹಾಕ್ತೇವಿ ಎಂದು ಬಿಜೆಪಿ ಸಂಸದರ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ವಿರಾಟ ಹಿಂದು ಮಹಾಸಮಾವೇಶದಲ್ಲಿ ಮಾತನಾಡಿರುವ ಮುತಾಲಿಕ್, ಮುಂದಿನ ಸಲ ಮೋದಿ ಹೆಸರು ಹೇಳಿದ್ರೆ ಬಾಯಲ್ಲಿ ಬೂಟು ಹಾಕ್ತೇವಿ ಎಂದು ಬಿಜೆಪಿ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಮುಂದಿನ ಸಲ ಮೋದಿ ಹೆಸರು ಹೇಳಿದರೆ ಬಾಯಲ್ಲಿ ಬೂಟು ಹಾಕ್ತೇವಿ ಎಂದು ಬಿಜೆಪಿ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಜುಲೈ 1ರಂದು ವಿರಾಟ್ ಹಿಂದೂ ಮಹಾಸಮಾವೇಶ ಕಾರ್ಯಕ್ರಮದಲ್ಲಿ ಮುತಾಲಿಕ್ ಅವರು ಈ ಹೇಳಿಕೆ ನೀಡಿದ್ದಾರೆ. ಆರು ಸಲ ಗೆಲ್ತೀರಿ, 25 ವರ್ಷ ಒಂದು ಜಿಲ್ಲೆಯನ್ನು ಆಳ್ವಿಕೆ ಮಾಡ್ತೀರಿ. ನಾಚಿಕೆ ಇಲ್ಲವಾ ನಿಮಗೆ. ನೀವೇನು ಮಾಡಿದ್ದೀರಿ. ಮೋದಿಯವರ ಮುಖ ನೋಡಿ, ಹಿಂದುತ್ವದ ವಿಚಾರ ನೋಡಿ ಮಾತ್ರ ಅವರಿಗೆ ನಾವು ವೋಟು ಹಾಕಿದ್ದೀವಿ. 5 ವರ್ಷ ಬಾಯಿಮುಚ್ಚಿಕೊಂಡು ಕೆಲಸ ಮಾಡಿ. ಮುಂದಿನಸಲ ಏನಾದರೂ ಮೋದಿ ಎಂದರೆ ಬಾಯಲ್ಲಿ ಬೂಟ್ ಹಾಕ್ತೀವಿ. ಏನು ಕತ್ತೆ ಕಾಯುತ್ತೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top