fbpx
ಸಮಾಚಾರ

ಸಂಸದ ಜಿಸಿ ಚಂದ್ರಶೇಖರ್ ಕೂಗಿಗೆ ಧ್ವನಿಗೂಡಿಸಿದ ಚಕ್ರವರ್ತಿ ಸೂಲಿಬೆಲೆ.

ಸದಾ ಒಂದಿಲ್ಲೊಂದು ಕನ್ನಡ/ಕರ್ನಾಟಕದ ಪರ ಕೆಲಸಗಳ ಮೂಲಕವೇ ಹೆಚ್ಚು ಸುದ್ದಿಯಾಗುವವರು ರಾಜ್ಯ ಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರ ಮನವಿಗೆ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಧ್ವನಿಗೂಡಿಸಿದ್ದಾರೆ.

ಹೌದು, ಜಿಸಿ ಚಂದ್ರಶೇಖರ್ ಅವರು ಇತ್ತೀಚಿಗೆ ಅಂಚೆ ಇಲಾಖೆಯಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಕರ್ನಾಟಕದ ಅಂಚೆ ಕಚೇರಿಗಳಲ್ಲಿನ ಸ್ವೀಕೃತಿಗಳಲ್ಲಿ(acknowledgement) ಕನ್ನಡವೇ ಇಲ್ಲ ಬದಲಾಗಿ ಕೇವಲ ಹಿಂದಿ ಮತ್ತು ಇಂಗ್ಲಿಷ್ ಮಾತ್ರವೇ ಕಾಣಿಸುತ್ತದೆ ಎಂದು ಆರೋಪಿಸಿದ್ದರು. ಜೊತೆಗೆ ಹಿಂದಿಯಲ್ಲಿರುವ ಒಂದು ಸ್ವೀಕೃತಿಯ ಫೋಟೋವನ್ನು ಕೂಡ ಜಿಸಿ ಚಂದ್ರಶೇಖರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು..

 

 

ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದ ಜಿಸಿಸಿ ” ಈ ಮೂಲಕ ಅಂಚೆ ಇಲಾಖೆಯಲ್ಲಿ ಸ್ಥಳೀಯ ಭಾಷೆಯಾದ ಕನ್ನಡವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದರು. “ಏಕೆ ಕನ್ನಡವಿಲ್ಲ? ಇದನ್ನಾ ಪಕ್ಷ ರಾಜಕೀಯದ ಹೊರತಾಗಿ ನೋಡುವ. ಕನ್ನಡದಲ್ಲಿ ಸೇವೆಗೆ ಕೊಡಿ. ದಯವಿಟ್ಟು ಈ ಕಡೆ ಗಮನಹರಿಸಿ. ಅಂಚೆ ಸ್ವೀಕೃತಿಗಳಲ್ಲಿ ಕನ್ನಡ ಇಲ್ಲದೆ ಇರುವುದರಿಂದ ಕನ್ನಡಿಗರಿಗೆ ತೊಂದರೆಯಾಗುತ್ತಿದೆ.” ಎಂದು ಬರೆದು ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಟ್ಯಾಗ್ ಮಾಡಿದ್ದರು.

ಜಿಸಿ ಚಂದ್ರಶೇಖರ್ ಅವರ ಈ ಮನವಿಗೆ ನೆಟ್ಟಿಗರು ಪಕ್ಷಭೇದ ಮರೆತು ಬೆಂಬಲ ನೀಡಿದ್ದರು. ಇದೀಗ ಯುವಾ ಬ್ರಿಗೇಡ್, ಟೀಮ್ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕೂಡ ಸಂಸದರ ಮನವಿಗೆ ಧ್ವನಿಗೂಡಿಸಿದ್ದಾರೆ. “ದಯವಿಟ್ಟು ಈ ಸಮಸ್ಯೆಯನ್ನು ಪರಿಹರಿಸಿ ಮತ್ತು ಸ್ಥಳೀಯರಿಗೆ ಸಹಾಯ ಮಾಡಿ ..”
ಎಂದು ಮನವಿ ಮಾಡಿಕೊಂಡಿದ್ದಾರೆ..

 

ಜಿಸಿ ಚಂದ್ರಶೇಖರ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಚಕ್ರವತಿ ಸೂಲಿಬೆಲೆ “ಆತ್ಮೀಯ ರವಿ ಶಂಕರ್ ಅವರೇ, ಒಂದೊಳ್ಳೆ ಪ್ರಶ್ನೆಯನ್ನು ಕೇಳಲಾಗಿದೆ.ಅಂಚೆ ಇಲಾಖೆಯ ಸೀಕೃತಿಗಳಲ್ಲಿ ಪ್ರಾದೇಶಿಕ ಭಾಷೆ ಏಕೆ ಇಲ್ಲ? ಪ್ರಾದೇಶಿಕ ಭಾಷೆಯಲ್ಲಿಯೇ ಇದ್ದರೇ ಕನ್ನಡವನ್ನು ಹೆಚ್ಚು ಬಳಸುವ ನಮಗೆ ಹೆಚ್ಚು ಪ್ರಯೋಜನವಾಗುತ್ತದೆ. ದಯವಿಟ್ಟು ಈ ಸಮಸ್ಯೆಯನ್ನು ಪರಿಹರಿಸಿ ಮತ್ತು ಸ್ಥಳೀಯರಿಗೆ ಸಹಾಯ ಮಾಡಿ..” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅಂಚೆ ಇಲಾಖೆಯಲ್ಲಿ ಕನ್ನಡಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಸದ ಜಿಸಿ ಚಂದ್ರಶೇಖರ್ ಅವರ ಕೂಗಿಗೆ ಧ್ವನಿಗೂಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top