fbpx
ಸಮಾಚಾರ

ಧೋನಿ ಪದೇ ಪದೇ ಏಕೆ ಬ್ಯಾಟ್ ಲೋಗೋ ಬದಲಿಸುತ್ತಿದ್ದಾರೆ? ನಿವೃತ್ತಿಯ ಮುನ್ಸೂಚನೆ?

ಏಕದಿನ ವಿಶ್ವಕಪ್ ಬಳಿಕ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಸೀಮಿತ ಓವರ‌್‌ಗಳ ಕ್ರಿಕೆಟ್‌ಗೂ ನಿವೃತ್ತಿ ಸಲ್ಲಿಸುವ ಸಾಧ್ಯತೆಯಿದೆ ಎಂಬುದರ ಬಗ್ಗೆ ಸುದ್ದಿಗಳು ಬಂದಿದ್ದವು. ಈ ನಡುವೆ ವಿಶ್ವಕಪ್‌ನಲ್ಲಿ ನಿಧಾನಗತಿಯ ಆಟದಿಂದಾಗಿ ಧೋನಿ ಬದ್ಧತೆಯ ಬಗ್ಗೆ ಸಾಕಷ್ಟು ಟೀಕೆಗಳನ್ನು ಎದರಿಸಬೇಕಾಯಿತು. ಹೀಗಿರುವಾಗ ವಿಶ್ವಕಪ್ ನಂತರ ಧೋನಿ ನಿವೃತ್ತಿ ಹೊಂದುತ್ತಾರೆ ಎಂಬ ವಾದಕ್ಕೆ ಪುಷ್ಟಿ ನೀಡುವಂತ ಮತ್ತೊಂದು ಘಟನೆ ನಡೆದಿದೆ.

 

 

ಪ್ರಸಕ್ತ ಟೂರ್ನಿಯಲ್ಲಿ ಕನಿಷ್ಠ 3 ವಿವಿಧ ಸಂಸ್ಥೆಗಳ ಲೋಗೋಗಳು ಇರುವ ಬ್ಯಾಟ್‌ನೊಂದಿಗೆ ಧೋನಿ ಆಡಿದ್ದಾರೆ. ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯಗಳಲ್ಲಿ ಧೋನಿ ಎಸ್‌ಜಿ ಚಿಹ್ನೆಯಿರುವ ಬ್ಯಾಟ್‌ನೊಂದಿಗೆ ಮೈದಾನಕ್ಕಿಳಿದರು. ಇನ್ನಿಂಗ್ಸ್ ಸಾಗಿದಂತೆ ಬಿಎಎಸ್ ಚಿಹ್ನೆ ಇರುವ ವ್ಯಾಂಪೈರ್ ಸಂಸ್ಥೆಯ ಬ್ಯಾಟ್ ಬಳಸಿದರು.

ಕ್ರಿಕೆಟ್‌ ಜೀವನದ ಆರಂಭದ ಹಂತದಿಂದಲೂ ಅವರಿಗೆ ನೆರವಾದ ಬ್ಯಾಟ್‌ ಮೇಕರ್ ಗಳಿಗೆ ಧನ್ಯವಾದ ಅರ್ಪಿಸುವ ನಿಟ್ಟಿನಲ್ಲೇ ಧೋನಿ ಪ್ರತೀ ಪಂದ್ಯದಲ್ಲೂ ಪದೇ ಪದೇ ಬ್ಯಾಟ್ ಗಳನ್ನು ಬದಲಿಸುತ್ತಿದ್ದಾರೆ ಎನ್ನಲಾಗಿದೆ. ಕ್ರಿಕೆಟ್ ವೃತ್ತಿಜೀವನದ ಅಂತಿಮ ಹಂತದಲ್ಲಿ ತಮ್ಮ ಬೆಳವಣಿಗೆಗೆ ಕಾರಣರಾದವರಿಗೆ ಧೋನಿ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಧೋನಿ ಅಭಿಮಾನಿಗಳು ಅವರ ನಿವೃತ್ತಿ ಕುರಿತಂತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯವಾಗಿ ಧೋನಿಯಂತಹ ಜನಪ್ರಿಯ ಕ್ರಿಕೆಟಿಗರು ತಮ್ಮ ಬ್ಯಾಟ್ ಮೇಲೆ ಸಂಸ್ಥೆಯ ಸ್ಟಿಕ್ಕರ್ ಅಂಟಿಸಿಕೊಳ್ಳಲು ವಾರ್ಷಿಕ ₹4 ಕೋಟಿಯಿಂದ ₹5 ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ಈಗ ಯಾವುದೇ ಬ್ಯಾಟ್ ಕಂಪನಿಯ ಜೊತೆ ಪ್ರಾಯೋಜಕತ್ವ ಹೊಂದಿಲ್ಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top