fbpx
ಸಮಾಚಾರ

ರಾಜಕೀಯ ಬದಿಗೊತ್ತಿ ವಿಶ್ವಕಪ್ ಫೈನಲ್ ಭವಿಷ್ಯ ನುಡಿದ ಸಿದ್ದರಾಮಯ್ಯ- ಈ 2 ತಂಡಗಳು ಫೈನಲ್ ಆಡಲಿವೆಯಂತೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಬದಿಗೊತ್ತಿ ವಿಶ್ವಕಪ್ ಫೈನಲ್ ಭವಿಷ್ಯ ನುಡಿದಿದ್ದಾರೆ. ಫೈನಲ್ ಪಂದ್ಯದಲ್ಲಿ ಯಾವ ತಂಡಗಳು ಮುಖಾಮುಖಿಯಾಗಲಿವೆ? ಪ್ರಶಸ್ತಿ ಗೆಲ್ಲೋ ತಂಡ ಯಾವುದು ಅನ್ನೋ ಮಾಹಿತಿಯನ್ನು ಸಿದ್ದರಾಮಯ್ಯ ನೀಡಿದ್ದಾರೆ.

ಈ ಭಾರಿ ಟೀಮ್ ಇಂಡಿಯಾ ವರ್ಡ್ ಕಪ್ ಗೆಲ್ಲಲಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾಗಿಂತ ಭಾರತ ತಂಡ ಬಲಿಷ್ಠವಾಗಿದೆ. ಇದು ನಾನು ಹಾಕಿರುವ ಲೆಕ್ಕಚಾರ. ಈಗಾಗಲೇ ಇಂಗ್ಲೆಂಡ್, ಟೀಂ ಇಂಡಿಯಾವನ್ನು ಸೋಲಿಸಿರಬಹುದು. ಆದರೆ ಸೆಮೀಸ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಮಣಿಸಲಿದೆ.” ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ..

ಈ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಣಿಸಿ, ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ ಎಂದು ಭವಿಷ್ಯ ಹೇಳಿದರು.

“ಟೀಂ ಇಂಡಿಯಾದ ಎಲ್ಲಾ ಕ್ರಿಕೆಟಿಗರು ನನ್ನ ನೆಚ್ಚಿನ ಆಟಗಾರರು. ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ 4 ಸೆಂಚುರಿ ಸಾಧನೆ ಮಾಡಿರಬಹುದು. ಆದೆರೆ ನಾಯಕ ವಿರಾಟ್ ಕೊಹ್ಲಿ ವಿಶ್ವದಲ್ಲೇ ನಂಬರ್ 1 ಬ್ಯಾಟ್ಸ್‌ಮನ್” ಎಂದರು.

ಸದ್ಯ ವಿಶ್ವಕಪ್ ಕೊನೆ ಹಂತ ತಲುಪಿದ್ದು ನಾಳೆ ಗ್ರೂಪ್ ಹಂತದ ಪಂದ್ಯಗಳಿಗೆ ತೆರೆ ಬೀಳಲಿದೆ. ಈಗಾಗಲೇ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದು ಈ ತಂಡಗಳ ನಡುವೆ ಪ್ರಶಸ್ತಿಗಾಗಿ ಸೆಣೆಸಾಟ ನಡೆಯಲಿದೆ. ಅಂದಹಾಗೆ ಜುಲೈ 9, ಜುಲೈ 11ರಂದು ಎರಡು ಸೆಮಿ ಫೈನಲ್ ಪಂದ್ಯಗಳು ನಡೆಯಲಿದ್ದು, ಜುಲೈ 14ರಂದು ಫೈನಲ್ ಪಂದ್ಯ ನಡೆಯಲಿದೆ. ಯಾರು ಕಪ್ ಗೆಲ್ಲಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top