fbpx
ಸಮಾಚಾರ

ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾ ಎದುರು ಆದೋರು ಯಾರು? ಇಲ್ಲಿದೆ ಲೆಕ್ಕಾಚಾರ.

ಪ್ರಸ್ತುತ ಕ್ರಿಕೆಟ್ ವಿಶ್ವಕಪ್ ಅಂತಿಮ ಹಂತಕ್ಕೆ ತಲುಪಿದ್ದು ಸೆಮಿಫೈನಲ್ ತಲುಪಲಿರುವ ತಂಡಗಳ ಪಟ್ಟಿ ಅದಾಗಲೇ ಅಂತಿಮವಾಗಿದೆ. ಆದರೆ ಯಾವ ತಂಡ ಯಾವ ತಂಡದ ಎದುರು ಸೆಮಿಫೈನಲ್ ನಲ್ಲಿ ಸೆಣಸಾಡಬಹುದು ಎಂಬ ಲೆಕ್ಕಾಚಾರ ಈಗಲೂ ನಡೆಯುತ್ತಿದೆ. ಭಾರತಕ್ಕೆ ಇನ್ನು ಒಂದು ಗ್ರೂಪ್ ಹಂತದ ಪಂದ್ಯ ಬಾಕಿಯಿದ್ದು ಆ ಪಂದ್ಯ ಮುಗಿದ ನಂತರ ಭಾರತಕ್ಕೆ ಸೆಮಿಫೈನಲ್ ನಲ್ಲಿ ಎದುರಾಳಿ ಯಾರಾಗಬಹುದು ಎಂದುದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ..

ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವ ಆಸ್ಟ್ರೇಲಿಯಾಕ್ಕೂ ಒಂದು ಪಂದ್ಯ ಬಾಕಿಯಿದೆ. ಇದೇ ಶನಿವಾರ ಅಸ್ತ್ರೇಯ ಮತ್ತು ದಕ್ಷಿಣ ಆಫ್ರಿಕಾ ಎದುರು ಗುಂಪಿನ ಹಂತದ ಪಂದ್ಯ ನಡೆಯಲಿದೆ.. ಒಂದು ವೇಳೆ ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋತು ಭಾರತ ಶ್ರೀಲಂಕಾ ವಿರುದ್ಧ ಗೆದ್ದರೇ ಭಾರತಕ್ಕೆ ಜುಲೈ 9 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರಾಳಿಯಾಗಲಿದೆ.

ಒಂದು ವೇಳೆ ಶ್ರೀಲಂಕಾ ಎದುರು ಭಾರತವೂ ಗೆದ್ದು, ದಕ್ಷಿಣ ಆಫ್ರಿಕಾ ಎದುರು ಆಸ್ಟ್ರೇಲಿಯಾವೂ ಗೆದ್ದರೆ ಭಾರತಕ್ಕೆ ಅತಿಥೇಯ ಇಂಗ್ಲೆಂಡ್ ಸೆಮಿಫೈನಲ್ ನಲ್ಲಿ ಎದುರಾಳಿಯಾಗಲಿದೆ. ಇನ್ನು ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಭಾರತ ಸೋತರೂ ಕೂಡ ಭಾರತಕ್ಕೆ ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ಎದುರಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top