fbpx
ಸಮಾಚಾರ

27 ವರ್ಷದ ಹಿಂದೆ ಸಚಿನ್​ ನಿರ್ಮಿಸಿದ್ದ ವಿಶ್ವದಾಖಲೆಯನ್ನು ಅಳಿಸಿಹಾಕಿದ ಆಫ್ಘನ್​ ಯುವ ಬ್ಯಾಟ್ಸ್​ಮನ್​.

ವೆಸ್ಟ್‌ ಇಂಡೀಸ್‌ ಮತ್ತು ಅಫಘಾನಿಸ್ತಾನ ನಡುವೆ ಗುರುವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಆಫ್ಘನ್‌ ತಂಡದ ಪರ ಮಿಂಚಿದ ವಿಕೆಟ್‌ಕೀಪರ್‌ ಇಕ್ರಮ್‌ ಅಲಿಖಿಲಿ ಭಾರತದ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿನಲ್ಲಿದ್ದ 27 ವರ್ಷ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ವೆಸ್ಟ್‌ ಇಂಡೀಸ್‌ ಎದುರಿನ ಪಂದ್ಯದಲ್ಲಿ ಇಕ್ರಂ 93 ಎಸೆತಗಳಲ್ಲಿ 86ರನ್‌ ಬಾರಿಸಿದರು. ಇದು ಅವರು ವೈಯಕ್ತಿ ಗರಿಷ್ಠ ಸ್ಕೋರ್‌. ಇದರ ಮೂಲಕ ಅವರು ಇನ್ನೊಂದು ಮಹತ್ತರ ದಾಖಲೆ ಮುರಿದರು. ಭಾರತದ ಕ್ರಿಕೆಟ್‌ ದಂತಕತೆ ಸಚಿನ್‌ ಅವರ ಹೆಸರಲ್ಲಿದ್ದ ಬಹುಕಾಲದ ವಿಶ್ವಕಪ್‌ ದಾಖಲೆಯನ್ನು ಅವರು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ವಿಶ್ವಕಪ್‌ನಲ್ಲಿ 80+ ರನ್‌ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ (18 ವರ್ಷ 278 ದಿನಗಳು) ಎಂಬ ಖ್ಯಾತಿಗೆ ಇಕ್ರಮ್‌ ಪಾತ್ರರಾದರು.

ಸಚಿನ್ ತೆಂಡೂಲ್ಕರ್ 1992 ರಲ್ಲಿ ಜಿಂಬಾಬ್ವೆ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 18 ವರ್ಷ ಮತ್ತು 318 ದಿನಗಳ ವಯಸ್ಸಿನಲ್ಲಿ 81 ರನ್ ಗಳಿಸಿದ್ದರು. ಈಗ ಅಫ್ಘಾನಿಸ್ತಾನ ಬ್ಯಾಟ್ಸ್‌ಮನ್ ಇಕ್ರಮ್ ಅಲಿ ಖಿಲ್ 18 ವರ್ಷ ಮತ್ತು 278 ದಿನಗಳಲ್ಲಿ 86 ರನ್ ಗಳಿಸುವ ಮೂಲಕ ನೂತನ ದಾಖಲೆ ಮಾಡಿದರು.

ಇದೇ ವೇಳೆ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿರುವುದಕ್ಕೆ ಪ್ರತಿಕ್ರಿಯಿಸಿದ ಇಕ್ರಮ್ ಅಲಿ ಖಿಲ್ ‘ಸಚಿನ್ ಅವರಂತಹ ದಂತಕಥೆಯ ದಾಖಲೆಯನ್ನು ಮುರಿದಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಇದು ನನಗೆ ತುಂಬಾ ಸಂತೋಷ ತಂದಿದೆ” ಎಂದು ಅವರು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top