fbpx
ಸಮಾಚಾರ

ಕೇಂದ್ರದಿಂದ ಮತ್ತೆ ಹಿಂದಿ ಹೇರಿಕೆ- ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಕಲಿಸಲು ಬಜೆಟ್ ನಲ್ಲಿ ಘೋಷಣೆ.

ಇತ್ತೀಚಿನ ವರ್ಷಗಳಲ್ಲಿ ಪ್ರಾದೇಶಿಕ ಭಾಷೆಗಳ ರಾಜ್ಯಗಳ ಮೇಲೆ ಒತ್ತಾಯ ಪೂರ್ವಕವಾಗಿ ಹಿಂದಿಯನ್ನು ಹೇರುವ ಕಾರ್ಯ ಕೇಂದ್ರ ಸರ್ಕಾರದಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಲೇ ಇದೆ.. ಹಿಂದಿ ಭಾಷೆಯ ಮೇಲೆ ಇರುವ ವ್ಯಾಮೋಹಕ್ಕೋ? ಅಥವಾ ಭಾರತದಲ್ಲಿ ಹಿಂದಿ ಮಾತ್ರವೇ ಶ್ರೇಷ್ಠ ಭಾಷೆ ಎಂಬ ಭ್ರಮೆಗೋ? ಏನೋ ಗೊತ್ತಿಲ್ಲ. ಆದರೆ ಹಿಂದಿ ಭಾರತದ ‘ರಾಷ್ಟ್ರಭಾಷೆ’ ಎಂಬ ಪರಮ ಸುಳ್ಳಿನಿಂದ ಹಿಂದಿ ಹೇರಿಕೆ ಶುರುವಾಗಿದ್ದು ಈಗ ಇತಿಹಾಸ.. ಈ ಹಿಂದಿ ಹೇರಿಕೆಯ ಬಗ್ಗೆ ಇದ್ದಕ್ಕಿದಂತೆ ಮಾತನಾಡುತ್ತಿರುವುದು ಏಕೆ ಅಂತೀರಾ? ಮುಂದೆ ಓದಿ.

ಪ್ರಾದೇಶಿಕ ಭಾಷೆಗಳನ್ನು ಮಾತನಾಡುವ ರಾಜ್ಯಗಳ ಪಾಲಿಗೆ ಅನಿಷ್ಟ ಎನಿಸಿಕೊಂಡಿರುವ ‘ಹಿಂದಿ ಹೇರಿಕೆ’ ವಿರುದ್ಧ ಎಲ್ಲರೂ ಒಗ್ಗೂಡಿ ಧ್ವನಿ ಎತ್ತುವ ಹೋರಾಟಗಳು ಸಹ ಅನೇಕ ಕಡೆ ನಡೆಯುತ್ತಿವೆ. ಇಷ್ಟೇ ಅಲ್ಲದೆ ಇತ್ತೀಚೆಗೆ ಪ್ರಾದೇಶಿಕ ಭಾಷಾ ನೀತಿಯನ್ನು ಗಾಳಿಗೆ ತೂರಿ ಕೇಂದ್ರ ಸರ್ಕಾರವೇ ತನ್ನ ಅಂಗ ಸಂಸ್ಥೆಗಳ ಮೂಲಕ ಹಿಂದಿ ಹೇರಿಕೆಯನ್ನು ಮಾಡಿಸಲು ಪಿತೂರಿ ಬಡಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.. ಹೀಗಿದ್ದರೂ ಭಾರತ ಆಡಳಿತ ಹೃದಯ ಭಾಗ ಎನಿಸಿಕೊಂಡಿರುವ ಸಂಸತ್ ಭವನದಿಂದಲೇ ಹಿಂದಿ ಹೇರಿಕೆ ನಡೆಯಲು ಪ್ರೋತ್ಸಾಹ ಸಿಕ್ಕಿದೆ. ಹೌದು ಕೇಂದ್ರ ಬಜೆಟ್​ 2019ರಲ್ಲೂ ಇದು ಪುನರಾವರ್ತಿತವಾಗಿದೆ.

ಹಿಂದಿಯೇತರ ರಾಜ್ಯಗಳಲ್ಲಿ ಹೆಚ್ಚುವರಿಯಾಗಿ ಹಿಂದಿ ಶಿಕ್ಷಕರನ್ನು ನೇಮಿಸಲು ಕೇಂದ್ರ ಬಜೆಟ್ ನಲ್ಲಿ 50 ಕೋಟಿ ರೂ ಅನುದಾನವನ್ನು ಘೋಷಿಸಿದ್ದಾರೆ. ಬಜೆಟ್​​ ಮಂಡನೆ ವೇಳೆ ಹಿಂದಿ ಭಾಷೆ ಬಳಸಿ, ಅದರ ಮೇಲಿನ ತಮ್ಮ ವ್ಯಾಮೋಹವನ್ನು ಹಣಕಾಸು ಸಚಿವರು ತೋರಿಸಿದ್ದಾರೆ.

ಭಾರತವೂ ಭಾಷೆ, ಧರ್ಮ, ಆಚಾರ, ವಿಚಾರ, ಆಹಾರ ಹೀಗೆ ಎಲ್ಲದರಲ್ಲೂ ವೈವಿಧ್ಯತೆಯೇ ತುಂಬಿದೆ. ಈ ಕಾರಣಕ್ಕಾಗಿಯೇ ವಿವಿಧತೆಯಲ್ಲಿ ಏಕತೆಯನ್ನು ಭಾರತ ಸಾಧಿಸಿದೆ. ಆದರೆ ಈ ಎಲ್ಲ ವೈವಿಧ್ಯತೆಯನ್ನು ಪ್ರತಿನಿಧಿಸುವ ವ್ಯವಸ್ಥೆ ಎಂಬಂತಿರುವ ಕೇಂದ್ರ ಸರ್ಕಾರ ಭಾರತದ ವಿವಿಧತೆಯ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ಹೊಂದಿದೆ ಅನ್ನುವ ಪ್ರಶ್ನೆ ಈಗ ಮೇಲೆದ್ದಿದೆ. ಇದನ್ನು ಪದೇ ಪದೆ ಎತ್ತಬೇಕಾದ ಅನಿವಾರ್ಯತೆ ಹಿಂದಿಯೇತರ ಭಾಷಿಕರಿಗೆ ಒದಗಿದೆ.

ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳದಲ್ಲಿ ಎಷ್ಟೇ ಹಿಂದಿ ಹೇರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದರೂ ಕೇಂದ್ರ ಕ್ಯಾರೇ ಎನ್ನುತ್ತಿಲ್ಲ ಎಂಬ ಅಭಿಪ್ರಾಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top