fbpx
ಭವಿಷ್ಯ

ಜುಲೈ 07- ನಾಳೆಯ ಪಂಚಾಂಗ ಮತ್ತು ದಿನಭವಿಷ್ಯ.

ಸ್ಥಳ- ಬೆಂಗಳೂರು.
ಭಾನುವಾರ, ಜುಲೈ 07 2019
ಸೂರ್ಯೋದಯ : 5:58 am
ಸೂರ್ಯಾಸ್ತ: 6:50 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಜ್ಯೇಷ್ಠ
ಪಕ್ಷ : ಶುಕ್ಲಪಕ್ಷ
ತಿಥಿ : ಪಂಚಮೀ 10:18
ನಕ್ಷತ್ರ: ಪೂರ್ವಫಾಲ್ಗುಣಿ 20:14
ಯೋಗ :ವ್ಯತಿಪಾತ 18:33
ಕರಣ:ಬಾಲವ 10:18 ಕುಲವ 20:58

ಅಭಿಜಿತ್ ಮುಹುರ್ತ:11:59 am – 12:49 pm
ಅಮೃತಕಾಲ :2:21 pm – 3:49 pm

ರಾಹುಕಾಲ-5:11 pm – 6:46 pm
ಯಮಗಂಡ ಕಾಲ-12:24 pm – 2:00 pm
ಗುಳಿಕ ಕಾಲ- 3:35 pm – 5:11 pm

 

 
 

ಮೇಷ (Mesha)

 

ನಿಮ್ಮ ಮೃದು ಮಧುರ ಮಾತುಗಳಿಂದ ಜನರನ್ನು ನಿಮ್ಮತ್ತ ಸೆಳೆಯುವಲ್ಲಿ ಪ್ರಯತ್ನಿಸುವಿರಿ. ಯೋಗ್ಯ ಜನರ ಸಲಹೆಯನ್ನು ಸ್ವೀಕರಿಸಿದಲ್ಲಿ ಈದಿನದ ಕಾರ್ಯಗಳಲ್ಲಿ ಅಧಿಕ ಯಶಸ್ಸು ಹೊಂದುವಿರಿ.

 

ವೃಷಭ (Vrushabha)

ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಎಚ್ಚರವಿರಲಿ. ಭಾಗ್ಯದ ವಿಚಾರದಲ್ಲಿ ಅನುಕೂಲವಾಗುವುದು. ಧನಾತ್ಮಕ ಚಿಂತನೆಯಿಂದ ಈದಿನ ಒಳಿತನ್ನು ಕಾಣುವಿರಿ. ಗುರು-ಹಿರಿಯರನ್ನು ಗೌರವಿಸಿ. ಗುರುವಿನ ಸ್ತೋತ್ರ ಪಠಿಸಿರಿ.

 

ಮಿಥುನ (Mithuna)

ಉದ್ರೇಕ, ಕೋಪಗಳನ್ನು ಸೃಷ್ಟಿಸುವ ಜನರೇ ಬಹುತೇಕ ಇಂದು ನಿಮ್ಮ ಎದುರಾಗುವರು. ಆದಷ್ಟು ತಾಳ್ಮೆ ಕಳೆದುಕೊಳ್ಳದೆ ಗುರುವಿನ ಮೊರೆ ಹೋಗಿ. ಗುರುವಿನ ಸಕಾಲಿಕ ಹಿತನುಡಿಯಿಂದ ಈದಿನದ ಕಾರ್ಯದಲ್ಲಿ ಯಶಸ್ಸು ಹೊಂದುವಿರಿ.

 

ಕರ್ಕ (Karka)

ವ್ಯವಹಾರದ ವಿಚಾರದಲ್ಲಿ ಅವಸರ ತೋರಬೇಡಿ. ಸಾವಧಾನದ ಹೆಜ್ಜೆಗಳನ್ನು ಇಡುವುದರಿಂದ ಯಶಸ್ವಿ ಉದ್ಯಮಿ ಆಗುವಿರಿ. ಸಮಾಜದಲ್ಲಿ ಕೀರ್ತಿ ಗೌರವಗಳು ಕಂಡು ಬರುವುದು. ಕುಲದೇವರ ಸ್ಮರಣೆ ಮಾಡಿರಿ.

 

ಸಿಂಹ (Simha)

ಆತ್ಮಸ್ಥೈರ್ಯದಿಂದ ಮಾಡುವ ಕೆಲಸ ಕಾರ್ಯಗಳಿಂದ ಯಶಸ್ಸು ಹೊಂದುವಿರಿ. ಸ್ನೇಹಿತರು ನಿಮ್ಮನ್ನು ಸಂದರ್ಶಿಸುವರು. ಮನೆಯ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಆರ್ಥಿಕ ಸ್ಥಿತಿ ಉತ್ತಮ.

 

ಕನ್ಯಾರಾಶಿ (Kanya)

ಈದಿನ ನಿಮಗೆ ಕೀರ್ತಿಯು ಅರಸಿ ಬರುವುದು. ನಿಮ್ಮನ್ನು ಅಣಕಿಸಿದವರೆ ನಿಮ್ಮ ಬಳಿ ಬಂದು ಕ್ಷ ಮೆ ಯಾಚಿಸುವ ಸಂದರ್ಭ ಒದಗಿ ಬರುತ್ತದೆ,  ಕುಟುಂಬದಲ್ಲಿ ಗಣನೀಯವಾದ ಶುಭ ಶೋಭನಾದಿ ಘಳಿಗೆಗಳಿಗೆ ಸುಮೂರ್ತ ಕಂಡು ಬರುವುದು. ಈದಿನ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳುವಿರಿ.

 

ತುಲಾ (Tula)

ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು. ಹಾಗಂತ ನಿರಾಳರಾಗದಿರಿ. ದಾರಿಯಲ್ಲಿನ ಏರು-ತಗ್ಗುಗಳನ್ನು ಸರಿಪಡಿಸುವತ್ತ ಶ್ರಮ ವಹಿಸಿ.  ತುರ್ತಾಗಿ ಪಾವತಿಸಬೇಕಾದ ಸಾಲದ ಮರುಪಾವತಿ ಮಾಡಿರಿ ಒಳಿತಾಗುವುದು.

 

ವೃಶ್ಚಿಕ (Vrushchika)

ಸಾಧನೆಗೆ ಸಾಧ್ಯತೆಗಳು ಹೇರಳವಾಗಿರುತ್ತದೆ. ಯಾವುದೇ ಕಾರಣಕ್ಕೂ ಜಡತ್ವ ಬೇಡ. ಬಾಳಸಂಗಾತಿಯ ವಿಶ್ವಾಸ ಪಡೆದು ಆಕೆಯ ಇಷ್ಟಾ-ನಿಷ್ಟಗಳನ್ನು ತಿಳಿದು ಅವಳನ್ನು ಸಂತೋಷ ಪಡಿಸಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

 

ಧನು ರಾಶಿ (Dhanu)

ಅನಗತ್ಯ ಖರ್ಚುವೆಚ್ಚಗಳಿಂದ ಬಳಲುತ್ತಿದ್ದೀರಿ. ಹಾಗಂತ ಈದಿನ ಬೇರೆಯವರಿಂದ ಕಡ ಅಥವಾ ಸಾಲ ಸ್ವೀಕರಿಸದಿರಿ. ಬುಧವಾರ ದಿನ ಸಾಲ ಪಡೆದಲ್ಲಿ ಅದನ್ನು ತೀರಿಸುವುದು ಕಷ್ಟವಾಗುವುದು. ಇರುವ ಹಣದಲ್ಲಿಯೇ ಈದಿನದ ಖರ್ಚು ನಿಭಾಯಿಸಿರಿ.

 

ಮಕರ (Makara)

ಬಾಳಸಂಗಾತಿಯ ಮಾತುಗಳಿಂದ ಘಾಸಿಗೊಳ್ಳುವಿರಿ. ಸ್ವಲ್ಪ ದಿನ ತಾಳ್ಮೆಯಿಂದ ಇರಿ. ಎಲ್ಲವೂ ಒಳಿತಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಕೂಲ ಕಂಡುಬರುವುದು. ಆಂಜನೇಯ ಸ್ತೋತ್ರ ಪಠಿಸಿರಿ.

 

ಕುಂಭರಾಶಿ (Kumbha)

ಮಹತ್ತರವಾದ ಕೆಲಸವೊಂದು ನೆರವೇರುವುದು. ಇದರಿಂದಾಗಿ ಸಮಾಜದಲ್ಲಿ ಮಾನಮನ್ನಣೆ ಉಂಟಾಗುವುದು. ಉಷ್ಣ ಸಂಬಂಧದಿಂದ ಉಂಟಾಗುವ ಸಮಸ್ಯೆಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

 

ಮೀನರಾಶಿ (Meena)

ಈದಿನ ವಿನಾಕಾರಣ ಆಪಾದನೆಗಳನ್ನು ಎದುರಿಸುವ ವಿಚಾರ ಬರಬಹುದು. ಅದಕ್ಕೆ ನೀವು ಕಾರಣರಲ್ಲದಿದ್ದರೂ ಗ್ರಹಗಳು ಅಶುಭ ಸ್ಥಿತಿಯಲ್ಲಿ ಸಂಚರಿಸುವ ಮೂಲಕ ನಿಮ್ಮ ಗೌರವ-ಘನತೆಗೆ ಕುಂದುಂಟು ಮಾಡುವವು. ನವಗ್ರಹ ಸ್ತೋತ್ರ ಪಠಿಸಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top