fbpx
ಸಮಾಚಾರ

ಸ್ವಾಮಿ ವಿವೇಕಾನಂದ , ವೀರ್ ಚಂದ್ ಗಾಂಧಿ ತರ ವಿಶ್ವ ಧರ್ಮಗಳ ಶೃಂಗಸಭೆಯಲ್ಲಿ ಭಾರತದ ಧರ್ಮವನ್ನು ಪ್ರಚಾರ ಮಾಡುತ್ತಿರುವ ಡಾ.ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ

ಸೆಪ್ಟೆಂಬರ್ 11, 1893 ರಂದು ಚಿಕಾಗೋದಲ್ಲಿ “ವಿಶ್ವ ಸರ್ವಧರ್ಮ ಸಮ್ಮೇಳನ” ನಡೆದಿತ್ತು ಎಂಬುದು ನಿಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಈ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಕೀರ್ತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ್ದರು.ಅದೇ ರೀತಿ ಇದೆ ವೀರ್ ಚಂದ್ ಗಾಂಧೀ ಎಂಬುವವರೂ ಕೂಡ ಭಾರತೀಯ ಧರ್ಮಗಳ ಪರವಾಗಿ ಪ್ರತಿನಿಧಿಸಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದರು. ಆದರೆ ಅವರು ಆ ಸಮ್ಮೇಳನದಲ್ಲಿ ಜೈನ ಧರ್ಮದ ಪರವಾಗಿ ಪ್ರಚಾರ ಮಾಡಿದ್ದರು. ಎದು ಎಷ್ಟು ಜನಕ್ಕೆ ತಿಳಿದಿದೆ.

ಸೆಪ್ಟೆಂಬರ್ 11ˌ 1893 ರ ಸೋಮವಾರ ಅಮೇರಿಕಾದ ಶಿಕಾಗೋ ನಗರದ ಆರ್ಟ್ ಇನ್ಸ್ಟಿಟ್ಯೂಟ್ ಎಂಬ ದೊಡ್ಡಕಟ್ಟಡದ ಹಾಲ್ ಆಫ್ ಕೊಲಂಬಸ್ ಎಂಬ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರು ಹಿಂಧೂ ಧರ್ಮ ಹಾಗೂ ಭಾರತೀಯರ ಪ್ರತಿನಿಧಿಯಾಗಿ ಭಾಗವಹಿಸಿ ಭಾರತದ ಮಣ್ಣಿನ ಗುಣಗಳನ್ನು ವಿಶ್ವಕ್ಕೆ ಸಾರುವ ಮುಖಾಂತರ ಭಾರತ ದೇಶದ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಏರಿಸಿದರು.ಅದೇ ರೀತಿ ವೀರ ಚಂದ್ ಗಾಂಧಿ ಜೈನ ಧಾರ್ಮವನ್ನು ವಿಶ್ವದಲ್ಲಿ ಪ್ರಚಾರ ಮಾಡಿದರು.

ನಮ್ಮ ಭಾರತ ಮಾತೆ ಬರಿ ಹಿಂದೂಧರ್ಮ ಮಾತ್ರ ಅಲ್ಲ ಜೈನ , ಬೌದ್ದ ಮತ್ತು ಇತರೆ ಧರ್ಮಗಲ್ಲ ಬೀಡು . ಎಲ್ಲ ಬಾರದ ಧರ್ಮಗಳನ್ನು ಜಗತ್ತಿಗೆ ಪರಿಚಯಿಸುವುದು ನಮ್ಮ ನಿಮ್ಮ ಎಲ್ಲ ಭಾರತೀಯ ಕರ್ತವ್ಯ

ವಿಶ್ವಧರ್ಮ ಸಮ್ಮೇಳನದಲ್ಲಿ ತಮ್ಮ ಭಾಷಣವನ್ನು ಆರಂಭಿಸಿದ ಸ್ವಾಮೀಜಿಯವರು ನನ್ನ ಪ್ರೀತಿಯ ಅಮೇರಿಕಾದ ಸಹೋದರˌ ಸಹೋದರಿಯರೇ ಎನ್ನುತ್ತಲೇ ಇಡೀ ಸಭಾಂಗಣದಲ್ಲಿ ಮಿಂಚಿನ ಸಂಚಲನವಾಗಿ ಕರತಾಡನ ಮುಗಿಲುಮುಟ್ಟಿ ಜಯಘೋಷಗಳು ಮೊಳಗಿದವು.

ಹಾಗೇ ಭಾಷಣವನ್ನು ಮುಂದುವರೆಸಿದ ಸ್ವಾಮೀಜಿಯವರು ವಿಶ್ವಕ್ಕೆ ಸಹನೆˌ ಶಾಂತಿ ಮತ್ತು ಸೌಹರ್ಧತೆಯನ್ನು ಹೇಳಿಕೊಟ್ಟ ಧರ್ಮಕ್ಕೆ ಸೇರಿದವನು ನಾನು ಎನ್ನುವ ಮೂಲಕ ಹಿಂಧೂ ಧರ್ಮದ ಘನತೆಯನ್ನು ಕೊಂಡಾದಿದ್ದರು. ಅಲ್ಲಿಯವರೆಗೂ ಯಾವ ಯಾವ ಜನರು ಭಾರತೀಯತೆ ಮತ್ತು ಹಿಂಧೂ ಧರ್ಮವನ್ನು ಕೀಳಾಗಿ ಕಾಣುತ್ತಿದ್ದರೋ ಅವರಿಗೆ ಹಿಂದುತ್ವದ ಪರಿಕಲ್ಪನೆ ಮತ್ತು ವಿಚಾರಗಳನ್ನು ಭೋಧಿಸುತ್ತಾ ಹಿಂಧೂ ಧರ್ಮ ಮತ್ತು ಭಾರತೀಯತೆಯ ಮೌಲ್ಯಗಳನ್ನು ಸಾರಿದರು.

ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತೀಯ ಧರ್ಮಗಳ ಪರವಾಗಿ ಸ್ವಾಮಿ ವಿವೇಕಾನಂದರನ್ನು ಸೇರಿದಂತೆ ಒಟ್ಟು 5 ಜನ ಪ್ರತಿನಿಧಿಸಿದ್ದರು. ಐವರ ಪೈಕಿ ವೀರ್ ಚಂದ್ ಗಾಂಧೀ ಎಂಬುವವರೂ ಕೂಡ ಭಾರತೀಯ ಧರ್ಮಗಳ ಪರವಾಗಿ ಪ್ರತಿನಿಧಿಸಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದರು. ಆದರೆ ಅವರು ಆ ಸಮ್ಮೇಳನದಲ್ಲಿ ಜೈನ ಧರ್ಮದ ಪರವಾಗಿ ಪ್ರಚಾರ ಮಾಡಿದ್ದರು.

ಪ್ರತಿ ವರ್ಷ ಸೆಪ್ಟೆಂಬರ್ 11 ಬಂದಾಗ ಚಿಕಾಗೋದಲ್ಲಿ “ವಿಶ್ವ ಸರ್ವಧರ್ಮ ಸಮ್ಮೇಳನ” ವನ್ನು ನೆನೆಯುವ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರನ್ನು ನೆನೆಯುವ ನಾವು ಅದೇ ಸಮ್ಮೇಳನದಲ್ಲಿ ಭಾರತೀಯ ಧರ್ಮವನ್ನು ಪ್ರತಿನಿಧಿಸಿದ್ದ, ಬೆಳ್ಳಿ ಪದಕ ಗಳಿಸಿದ್ದ ಮತ್ತೋರ್ವ ಭಾರತೀಯ ವೀರ್ ಚಂದ್ ಗಾಂಧಿ ಮತ್ತು ಅವರ ಜೊತೆ ಭಾರತೀಯ ಧರ್ಮವನ್ನು ಪ್ರತಿನಿಧಿಸಿದ್ದ ಉಳಿದ ನಾಲ್ಕು ಜನರನ್ನು ಕಡೆಗಣಿಸಿದ್ದೇವೆ.

ಆದರೆ ಈಗ ಮತ್ತದೇ ಸುವರ್ಣ ಯುಗ ಮರುಕಳಿಸಿದೆ ಮೂಡಬಿದಿರೆ ಜೈನ ಮಠದ ಡಾ.ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಅಮೆರಿಕಾದ ಸ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಸ್ಯಾನ್ಫ್ರಾನ್ಸಿಸ್ಕೋ ದಲ್ಲಿ ನಡೆದ ವಿಶ್ವ ಧರ್ಮಗಳ ಶೃಂಗಸಭೆಯಲ್ಲಿ ಭಾರತದ ಜೈನ ಧರ್ಮವನ್ನು ಪ್ರತಿನಿಧಿಸಿದ್ದಾರೆ, ಯು.ಎಸ್.ಎ ನ ಎಥಿಕಾ ಸ್ಟ್ರೀಟ್ನಲ್ಲಿರುವ ಜೈನ್ ಸೆಂಟರ್ ನಲ್ಲಿ ವಿಶೇಷ ಪೂಜೆ, ಅಭಿಷೇಕ ಕಾರ್ಯಗಳನ್ನು ನೆರವೇರಿಸಿದರು. ಆಷಾಢ ಮಾಸದ ವಿಶೇಷ ಕಾರ್ಯಕ್ರಮದಲ್ಲಿ ಶ್ರೀಗಳು ಪಾಲ್ಗೊಂಡು ವಿಶೇಷ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಅಮರೇಂದ್ರ ಮುನಿ, ನ್ಯೂಯಾರ್ಕ್ ಜೈನ್ ಸೆಂಟರ್ನ ರಾಜೀವ್ ಪಾಂಡ್ಯ, ಅಖಿಲ್ ಭಾರತ್ ದಿಗಂಬರ ಜೈನ ಮಹಾ ಸಭಾದ ನಿರ್ಮಲ್ ಕುಮಾರ್ ಸೇಠ್ , ಡಾ. ತನ್ ಸುಖ್ ಸಾಲಗಿಯಾ ಮೊದಲಾದವರು ಉಪಸ್ಥಿತರಾಗಿದ್ದರು.

ಈ ಆರ್ಟಿಕಲ್ ಅನ್ನು ಓದಿದ ಎಲ್ಲ ಜೈನರು ಮಾತ್ರ ಅಲ್ಲ , ಎಲ್ಲ ಭಾರತೀಯರು ಶೇರ್ ಮಾಡಿ , ವಿಶ್ವಕ್ಕೆ ಭಾರತ ಧರ್ಮದ ಪರಿಚಯ ಮಾಡಿಕೊಡೋಣ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top