fbpx
ಸಮಾಚಾರ

ಲಕ್ಷ್ಮಿ ಒಲಿಬೇಕು ಅಂದ್ರೆ ಈ 15 ಸುಲಭ ವಿಧಾನಗಳು ಮತ್ತು ನಿಯಮಗಳನ್ನ ಜೀವನದಲ್ಲಿ ಪಾಲಿಸಿ ಅಂತ ಶಾಸ್ತ್ರ ಹೇಳುತ್ತೆ !

ಲಕ್ಷ್ಮಿ ಒಲಿಸಿಕೊಳ್ಳಲು ಸುಲಭ ವಿಧಾನಗಳು ಮತ್ತು ನಮ್ಮ ಜೀವನದಲ್ಲಿ ಪಾಲಿಸಬೇಕಾದ ನಿಯಮಗಳು.

1. ರಾತ್ರಿಯ ಸಮಯದಲ್ಲಿ ಮನೆಯ ಒಳಗೆ ಪರಕೆಯನ್ನು ಬಳಸಿ ಕಸ ಗುಡಿಸಬಾರದು.

ಪರಕೆಯನ್ನು ಕಾಲಿನಿಂದ ಹೊದೆಯಬಾರದು ಮತ್ತು ಅದನ್ನು ಯಾರಿಗೂ ಕಾಣಿಸದ ಜಾಗದಲ್ಲಿ ಇಡಬೇಕು ಅಂದರೆ ಮಂಚದ ಕೆಳಗೆ ಇಡುವುದು ಸೂಕ್ತ.

2. ಮಂಗಳವಾರ ಮತ್ತು ಶುಕ್ರವಾರದ ದಿನದಂದು ಅವಾಚ್ಯ ಶಬ್ದಗಳಿಂದ ಯಾರನ್ನು ಬಯ್ಯಬಾರದು ಅವರ ಮನಸ್ಸಿಗೆ ನೋವಾಗುವಂತ ಯಾವುದೇ ಕೆಲಸವನ್ನು ಮಾಡಬಾರದು.

3.ಅದರಲ್ಲೂ ಹೆಣ್ಣು ಮಕ್ಕಳ್ಳನ್ನು ಅಂದರೆ ಯಾವುದೇ ಹೆಣ್ಣಿಗೂ ಸಹ ನೋವಾಗುವಂತೆ ನೆಡೆದುಕೊಳ್ಳಬಾರದು.

4.ಮಂಗಳವಾರ ಮತ್ತು ಶುಕ್ರವಾರದ ದಿನದಂದು ಮನೆಯನ್ನು ಸ್ವಚ್ಛಗೊಳಿಸಿ ಶುಭ್ರವಾದ ಬಟ್ಟೆ ಧರಿಸಿ ಸೂರ್ಯಾಸ್ತದ ಸಮಯದಲ್ಲಿ ಹಸುವಿನ  ತುಪ್ಪದಿಂದ ದೀಪವನ್ನು ಬೆಳಗಿಸಬೇಕು.

5.ಶುಕ್ರವಾರದ ದಿನ ತಿನ್ನುವ ಅನ್ನವನ್ನು ಯಾವುದೇ ಕಾರಣಕ್ಕೂ ಹೊರಗೆ ಚೆಲ್ಲಬಾರದು ಮತ್ತು ಮುಸ್ಸಂಜೆಯ ಸಮಯದಲ್ಲಿ ನಿದ್ರೆ ಮಾಡಬಾರದು.

6.ಮನೆಯಲ್ಲಿ ಹೆಣ್ಣು ಮಕ್ಕಳು ಮತ್ತು ಹೆಂಗಸರು ಕಣ್ಣೀರು ಹಾಕಬಾರದು.

7.ಮನೆಯ ಮುಂಭಾಗಿಲ ಹೊಸ್ತಿಲು ಹೂವು, ಅರಿಶಿನ, ಕುಂಕುಮ ಗಳಿಂದ ಕಂಗೊಳಿಸುವ ಹಾಗೆ ಮಾಡಬೇಕು.

8.ಲಕ್ಷ್ಮಿ ಗೆ ವಿಶೇಷವಾಗಿ ಕಾಯಿಸಿದ  ಹಸುವಿನ ಹಾಲನ್ನು ನೈವೇದ್ಯ ವಾಗಿ ಸಮರ್ಪಿಸಬೇಕು ಮತ್ತು ಲಕ್ಷ್ಮಿ ಗೆ ಹಸುವಿನ ಹಾಲಿನಿಂದ ಅಭಿಷೇಕ ಮಾಡಿ ಅದನ್ನು ನೀವು ಅಂದರೆ ಮನೆಯವರೆಲ್ಲರು ಪ್ರಸಾದವಾಗಿ ಸ್ವೀಕರಿಸಬೇಕು.

9.ಮನೆಯ ಮುಂದೆ ಗೋಮಯ ಅಂದರೆ ಸಗಣಿ ಯಿಂದ ಸಾರಿಸಬೇಕು ಅದರಲ್ಲಿ ಸಾಕ್ಷಾತ್ ಲಕ್ಷ್ಮಿ ದೇವಿಯೇ ನೆಲೆಸಿದ್ದಾರೆ .

10.ಮನೆಯ ಒಳಗೆ ಅಂದರೆ  ದೇವರ ಕೋಣೆಯನ್ನು ಹಸುವಿನ ಗಂಜಲ ಅಂದರೆ ಗೋಮೂತ್ರ ವನ್ನು ಬಳಸಿ ಸ್ವಚ್ಛ ಗೊಳಿಸಬೇಕು ಇಂದರಿಂದ ಲಕ್ಷ್ಮಿ ದೇವಿಯೇ ಮನೆಯಲ್ಲಿ ನೆಲೆಸಿರುತ್ತಾರೆ .

11.ವೀಳ್ಯದೆಲೆ, ಅಡಿಕೆ,ನಾಣ್ಯ, ಕಮಲದ ಹೂ ಲಕ್ಷ್ಮಿ ಗೆ ಶ್ರೇಷ್ಠ ಮತ್ತು ಆಡಿಕೆ ಯಲ್ಲಿ ಕೂಡ ಸಾಕ್ಷಾತ್ ಲಕ್ಷ್ಮಿ ಇರುತ್ತಾಳೆ. ಮಂತ್ರಾ ಕ್ಷತೆ, ಗೆಜ್ಜೆ ವಸ್ತ್ರ ವಿಶೇಷವಾಗಿ ಬೇಕೇ ಬೇಕು.

12.ಕಡೆಯದಾಗಿ ಪೂಜೆಯೆಲ್ಲ ಮುಗಿದ ನಂತರ ಶ್ರೀ ಮಹಾಲಕ್ಷ್ಮೀ ಆಷ್ಟಕ ವನ್ನು ಪಠಿಸಬೇಕು. ಇದನ್ನು ಪ್ರತಿನಿತ್ಯವೂ ಪಠಿಸಿದರೂ ಒಳ್ಳೆಯದು.

13.ಇನ್ನು ಬಹಳ ಮುಖ್ಯವಾದ ವಿಷಯ ಏನೆಂದರೆ ಮನೆಯಲ್ಲಿ ಇರುವ ಹೆಣ್ಣು ಚಿಕ್ಕವರಾಗಲಿ ದೊಡ್ಡವರಾಗಲಿ ತಲೆಯ ಕೂದಲನ್ನು ಕೆದಾರಿರಬಾರದು, ಹಣೆಯಲ್ಲಿ ಕುಂಕುಮ ವಿರಬೇಕು.ಇಲ್ಲದಿದ್ದರೆ ಇದು ಅನಿಷ್ಠವನ್ನು ಸೂಚಿಸುತ್ತದೆ.

14.ರಾತ್ರಿಯ ಸಮಯದಲ್ಲಿ ಹಣದ ವ್ಯವಹಾರ ಮಾಡಬಾರದು.

15.ಹಣವೂ ರಾತ್ರಿಯ ವೇಳೆಯಲ್ಲಿ ಮನೆಯ ಒಳಗಿಂದ ಹೊರಗಡೆ ಹೋಗದಂತೆ ನೋಡಿ ಕೊಳ್ಳಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top